ಕಪ್ಪು ಮತ್ತು ಕೆಂಪು ಇರುವೆಗಳು ಸಾಮಾನ್ಯವಾಗಿ ಜನರ ಮನೆಗಳಲ್ಲಿ ಕಂಡುಬರುತ್ತವೆ. ಕೆಲವರು ಅವುಗಳನ್ನು ನಿರ್ಲಕ್ಷಿಸುತ್ತಾರೆ, ಮತ್ತೆ ಕೆಲವರು ಅವುಗಳನ್ನು ಓಡಿಸುತ್ತಾರೆ. ಆದರೆ ಇರುವೆಗಳ ಮಹತ್ವವನ್ನು ನೀವು ತಿಳಿದುಕೊಂಡರೆ ಆಶ್ಚರ್ಯಪಡುತ್ತೀರಿ. ಮನೆಯಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ, ಅವು ನಿರ್ದಿಷ್ಟ ದಿಕ್ಕಿನಿಂದ ಬಂದರೆ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇರುವೆಗಳ ಆಗಮನದಿಂದ ನಿಮಗೆ ಒಳ್ಳೆಯ ಸುದ್ದಿಗಳು ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಇರುವೆಗಳು ಬರುವಿಕೆಯ ಅರ್ಥವನ್ನು ತಿಳಿದುಕೊಳ್ಳುವುದು ಅವಶ್ಯಕ. ಇರುವೆಗಳಿಗೆ ಸಂಬಂಧಿಸಿದ ಕೆಲವು ವಿಶೇಷ ಮಾಹಿತಿಯನ್ನು ಇಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ಸಿಹಿ ಸುದ್ದಿ: ಮನೆಯಲ್ಲಿ ಪೂರ್ವದಿಂದ ಕಪ್ಪು ಇರುವೆಗಳು ಕಾಣಿಸಿಕೊಂಡರೆ, ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಸ್ವೀಕರಿಸುತ್ತೀರಿ ಎಂದರ್ಥ. ಮತ್ತೊಂದೆಡೆ ಕಪ್ಪು ಇರುವೆಗಳು ಪಶ್ಚಿಮ ಭಾಗದಿಂದ ಮನೆಗೆ ಪ್ರವೇಶಿಸಿದರೆ ನೀವು ಪ್ರಯಾಣಿಸುತ್ತೀರಿ ಎಂದರ್ಥ. ಅಂದರೆ ನೀವು ಶೀಘ್ರದಲ್ಲೇ ಯಾವುದೋ ಸ್ಥಳಕ್ಕೆ ಪ್ರಯಾಣಿಸಬಹುದು.
ಹಣದ ಲಾಭ: ಕಪ್ಪು ಇರುವೆಗಳು ಉತ್ತರ ದಿಕ್ಕಿನಿಂದ ಮನೆಯೊಳಗೆ ಪ್ರವೇಶಿಸುವುದನ್ನು ನೋಡಿದರೆ, ಹಣದ ಲಾಭ ಮತ್ತು ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ ಎಂದರ್ಥ. ಮತ್ತೊಂದೆಡೆ ದಕ್ಷಿಣ ದಿಕ್ಕಿನಿಂದ ಕಪ್ಪು ಇರುವೆಗಳ ಆಗಮನವು ಶುಭ ಸಂಕೇತಗಳನ್ನು ತರುತ್ತದಂತೆ.
ಆರ್ಥಿಕ ಸ್ಥಿತಿ ಸುಧಾರಿಸಲಿದೆ: ಮನೆಯಲ್ಲಿ ಚಿನ್ನವನ್ನು ಇಟ್ಟಿರುವ ಜಾಗದಲ್ಲಿ ಕಪ್ಪು ಇರುವೆಗಳು ಕಾಣಿಸಿಕೊಂಡರೆ, ಶೀಘ್ರದಲ್ಲೇ ನೀವು ಹೊಸ ಆಭರಣಗಳನ್ನು ಖರೀದಿಸುತ್ತೀರಿ ಎಂದರ್ಥ. ಮತ್ತೊಂದೆಡೆ ಅಕ್ಕಿ ತುಂಬಿದ ಮಡಕೆಯಿಂದ ಇರುವೆಗಳು ಹೊರಹೋಗುವುದು ಕಂಡುಬಂದರೆ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸುತ್ತದೆ ಎಂದರ್ಥ.