ಬಿಸಿ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ವೈದ್ಯಕೀಯ ಲೋಕವೂ ಒಪ್ಪಿಕೊಂಡಿದೆ ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿದರೆ ಯಾವೆಲ್ಲ ಪ್ರಯೋಜನಗಳು ಆಗುತ್ತದೆ ಎಂದು ತಿಳಿಯೋಣ-
ಊಟದ ಜೊತೆಗೆ ಒಂದು ಲೋಟ ಬಿಸಿ ನೀರು ಸೇವನೆ ಒಳ್ಳೆಯದು ಎನ್ನುವುದು ಆಯುರ್ವೇದ ವೈದ್ಯರ ಸಲಹೆ ಜಪಾನ್ ನಲ್ಲಿ ಪ್ರತಿನಿತ್ಯ ಬೆಳಗ್ಗೆ ಎದ್ದ ತಕ್ಷಣ ಬ್ರಷ್ ಮಾಡುವುದಕ್ಕೂ
ಮುನ್ನ ನಾಲ್ಕು ಗ್ಲಾಸ್ ಬಿಸಿನೀರು ಕುಡಿಯುತ್ತಾರೆ ಮೊದಲು ಒಂದು ಗ್ಲಾಸ್ ನಿಂದ ಆರಂಭಿಸಿ ನಿಧಾನವಾಗಿ ನಾಲ್ಕು ಗ್ಲಾಸ್ ಗೆ ಹೆಚ್ಚಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸುವುದರಿಂದ ಮಲಬದ್ಧತೆ ಉಂಟಾಗುವುದಿಲ್ಲ ಹೊಟ್ಟೆ ಊದಿಕೊಳ್ಳುವುದು ಹೊಟ್ಟೆ ನೋವು ಎಲ್ಲವನ್ನು ಕಡಿಮೆ ಮಾಡುತ್ತದೆ ಬಿಸಿ ನೀರು ಸೇವನೆ ಚರ್ಮಕ್ಕೂ ಹೊಳಪು ತರುತ್ತದೆ ನಿಮ್ಮ ದೇಹ ಉಷ್ಣತೆಯನ್ನು ಹೆಚ್ಚಿಸುವ ಮೂಲಕ ಬಿಸಿನೀರು ಟಾಕ್ಸಿನ್ ಗಳನ್ನು ಹೊರಗೆ ಹಾಕುತ್ತದೆ ಇದು ಹಸಿವನ್ನು ಉತ್ತೇಜಿಸುತ್ತದೆ ನೀರಿನ ಬಿಸಿಯನ್ನು ಕಡಿಮೆ ಮಾಡಲು ನಮ್ಮ ದೇಹ ಶ್ರಮಿಸುತ್ತದೆ
ಇದರಿಂದ ಚಯಾಪಚೆಯ ವ್ಯವಸ್ಥೆ ಉತ್ತಮಗೊಳ್ಳುತ್ತದೆ ನಿಮ್ಮ ದೇಹ ಹೆಚ್ಚು ಆಹಾರವನ್ನು ಕೇಳುತ್ತದೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರನ್ನು ಕುಡಿದರೆ ನಿಮ್ಮ ಕಿಡ್ನಿ, ಲಿವರ್ ಕಾರ್ಯಾಚರಣೆ ಉತ್ತಮಗೊಳ್ಳುತ್ತದೆ ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಗಂಟಲು ಕೆರೆತ ಶೀತ ಇವೆಲ್ಲದರಿಂದಲೂ ಪಾರಾಗಬಹುದು ಶೀತವಾದಾಗ ಕೂಡ ಬಿಸಿ ನೀರನ್ನು ಕುಡಿಯುವುದು
ಬಹಳ ಉತ್ತಮ ಮುಟ್ಟಿನ ಸೆಳೆತ ಮತ್ತು ನೋವಿನಿಂದಲೂ ಬಿಸಿನೀರು ಪರಿಹಾರ ಒದಗಿಸುತ್ತದೆ ಹೊಟ್ಟೆ ನೋವು ಬಂದಾಗ ಬಿಸಿ ನೀರಿನ ಪ್ಯಾಕನ್ನು ಹೊಟ್ಟೆಯ ಮೇಲೆ ಇಟ್ಟುಕೊಂಡರೆ ಹೊಟ್ಟೆ ನೋವು ಕಡಿಮೆಯಾಗುತ್ತದೆ ಹೆಚ್ಚು ನೀರು ಕುಡಿಯುವುದರಿಂದಲೂ ನೋವು ಕಡಿಮೆಯಾಗುತ್ತದೆ ಬೇಗ ವೃದ್ಧಾಪ್ಯ ನಿಮ್ಮನ್ನು ಆವರಿಸಿಕೊಳ್ಳದಂತೆ ಬಿಸಿ ನೀರು ತಡೆಯುತ್ತದೆ ನಿಮ್ಮ ಚರ್ಮ ಬೇಗನೆ ಸುಕ್ಕು ಗಟ್ಟುವುದಿಲ್ಲ ನೀವು ಕೂಡ ಬೆಳಗ್ಗೆಯೇ ಬಿಸಿ ನೀರನ್ನು ಕುಡಿದು ಆರೋಗ್ಯವನ್ನು ಕಾಪಾಡಿಕೊಳ್ಳಿ.