ಹಿಂದೂ ಧರ್ಮದ ಪ್ರಕಾರ ಧೂಪಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಪೂಜಾ ಸಮಯದಲ್ಲಿ ದೇವರ ಮುಂದೆ ಧೂಪವನ್ನು ಹಚ್ಚಲಾಗುತ್ತದೆ. ಜೊತೆಗೆ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಧೂಪ ಹಚ್ಚುವುದರಿಂದ ನಕಾರಾತ್ಮಕ ಶಕ್ತಿಯುಯು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ಇದಲ್ಲದೇ ಧೂಪದಿಂದ ಹೊರಬರುವ ಹೊಗೆಯು ನಿಮ್ಮ ಆರೋಗ್ಯದ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹಿಂದೂ ಧರ್ಮದಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಧೂಪವನ್ನು ಪ್ರತೀ ಬಾರಿ ಅಂಗಡಿಗಳಿಂದ ಖರೀದಿಸುವ ಬದಲಾಗಿ ನೀವೇ ಮನೆಯಲ್ಲಿ ತಯಾರಿಸಿ.
ಧೂಪ ತಯಾರಿಸಲು ಬೇಕಾಗುವ ಪದಾರ್ಥಗಳು:ಒಣಗಿದ ತೆಂಗಿನ ನಾರಿನ ಸಿಪ್ಪೆಯ ಪುಡಿ,ಗುಲಾಬಿ ಎಸಳುಗಳು ಅಥವಾ ದೇವರಿಗೆ ಮೂಡಿಸಿದ ಹೂವುಗಳು,ಗಂಧದ ಪುಡಿ,ಕರ್ಪೂರ,ಮರದ ದಿಂಬಿಯ ಪುಡಿ,ತುಪ್ಪ
ಧೂಪ ತಯಾರಿಸುವ ವಿಧಾನ :ಒಣಗಿದ ತೆಂಗಿನ ನಾರಿನ ಸಿಪ್ಪೆ ಮತ್ತು ಒಣಗಿದ ಗುಲಾಬಿ ಎಸಳುಗಳು ಅಥವಾ ದೇವರಿಗೆ ಮೂಡಿಸಿದ ಹೂವುಗಳನ್ನು ಚೆನ್ನಾಗಿ ಪುಡಿ ಮಾಡಿ. ನಂತರ ಇದನ್ನು ಸರಿಯಾಗಿ ಜರಡಿ ಸಹಾಯದಿಂದ ಸೋಸಿಕೊಳ್ಳಿ. ಇದಾದ ಬಳಿಕ ಇದಕ್ಕೆ ಕರ್ಪೂರವನ್ನು ಪುಡಿ ಮಾಡಿ ಹಾಕಿ. ಜೊತೆಗೆ ಶ್ರೀಗಂಧದ ಪುಡಿ, ಮರದ ದಿಂಬಿಯ ಪುಡಿ ಹಾಕಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಾದ ಬಳಿಕ ಇದಕ್ಕೆ ಒಂದರಿಂದ ಎರಡು ಚಮಚ ತುಪ್ಪ ಹಾಕಿ ಮಿಶ್ರಣ ಮಾಡಿ.
ನಂತರ ಈ ಮಿಶ್ರಣವನ್ನು ಧೂಪದ ಆಕಾರವಾಗಿ ಮಾಡಿ ಮತ್ತು ಕೆಲ ಗಂಟೆಗಳ ವರೆಗೆ ಹಾಗೆಯೇ ಇಡಿ. ಈಗ ಧೂಪ ಸಿದ್ಧವಾಗಿದೆ. ಇದರಲ್ಲಿ ಶ್ರೀಗಂಧ, ಕರ್ಪೂರ ಮುಂತಾದ ಪದಾರ್ಥವನ್ನು ಹಾಕಿರುವುದರಿಂದ ಮನೆತುಂಬಾ ಸುವಾಸನೆ ಸೂಸುವ ಜೊತೆಗೆ, ನಿಮ್ಮ ಆರೋಗ್ಯದ ಮೇಲೂ ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ಆದ್ದರಿಂದ ನೀವು ಪ್ರಯತ್ನಿಸಿ.