ಹನುಮಂತನನ್ನು ಶಿವನ ಇನ್ನೊಂದು ಅವತಾರ ಎಂದು ಕರೆಯಲಾಗುತ್ತದೆ. ಜಾಂಬವಂತ, ಹನುಮಾನ್, ಭಜರಂಗಿ ಎಂದು ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಹನುಮಾನ್ ಭಕ್ತರ ಮೊರೆಯನ್ನು ಶೀಘ್ರವೇ ಆಲಿಸುವ ಕರುಣಾಮಯಿಯಾಗಿದ್ದಾರೆ. ಶನಿ ದೋಷವಿದ್ದಲ್ಲಿ ಹನುಮಂತನ ಗುಡಿಗೆ ಹೋಗಿ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಶನಿ ದೋಷ ನಿವಾರಣೆಯಾಗುತ್ತದೆ ಎಂಬುದು ನಂಬಿಕೆಯಾಗಿದೆ.
ರಾಮ ಭಕ್ತನಾಗಿರುವ ಹನುಮಾನ್ ಬ್ರಹ್ಮಚಾರಿಯಾಗಿದ್ದು ಸರಳ ಪೂಜೆಗೆ ಒಲಿಯುವ ದೇವರಾಗಿದ್ದಾರೆ. ನಮ್ಮ ಇಂದಿನ ಲೇಖನದಲ್ಲಿ ಹನುಮಂತನ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ. ಹನುಮಂತನನ್ನು ಪೂಜಿಸಿದರೆ ಏನು ಪ್ರಯೋಜನಗಳನ್ನು ನಮ್ಮ ಜೀವನದಲ್ಲಿ ನಾವು ಪಡೆದುಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳೋಣ.
ಶಿವನ ಅವತಾರ
ಶಿವನ ಆಶೀರ್ವಾದದಿಂದ ಅಂಜನೆಯು ಹನುಮನಿಗೆ ಜನ್ಮವನ್ನು ನೀಡುತ್ತಾರೆ. ಅಂಜನೆಯು ಅಪ್ಸರೆಯಾಗಿದ್ದು ಋಷಿಯ ಶಾಪಕ್ಕೆ ಒಳಗಾಗಿರುತ್ತಾರೆ. ಬ್ರಹ್ಮ ದೇವರು ಆಕೆಯ ಸಹಾಯಕ್ಕಾಗಿ ಆಕೆಯನ್ನು ಮನುಷ್ಯ ರೂಪಿಯನ್ನಾಗಿಸಿ ಭೂಲೋಕಕ್ಕೆ ಕಳುಹಿಸುತ್ತಾರೆ. ಅಲ್ಲಿ ಕೇಸರಿ ಎಂಬ ರಾಜನ ಮೇಲೆ ಅಂಜನೆಗೆ ಪ್ರೇಮಾಂಕುರವಾಗಿ ಹನುಮಂತ ಜನ್ಮಿಸುತ್ತಾರೆ.
ಹನುಮಾನ್ ಹೆಸರಿನ ಅರ್ಥವೇನು
ಹನು ಎಂದರೆ ದವಡೆ ಆಗಿದ್ದು ಮನ್ ಎಂದರೆ ಆಕಾರ ಇಲ್ಲದೇ ಇರುವುದು. ಅಂದರೆ ಹನುಮಂತನ ದವಡೆಯು ಆಕಾರ ಇಲ್ಲದೇ ಇರುವುದು ಮತ್ತು ಅವರ ಬಾಲ್ಯ ಕಾಲದಲ್ಲಿಯೇ ಇಂದ್ರನ ವಜ್ರಾಘಾತಕ್ಕೆ ಸಿಕ್ಕಿ ಅವರ ದವಡೆಯು ಕೋತಿಯ ಮುಖವನ್ನು ಪಡೆದುಕೊಂಡಿತು.
ಮಕರಧ್ವಜನೆಂಬ ಪುತ್ರ
ಹನುಮಂತನ ಮಗನೇ ಮಕರಧ್ವಜನಾಗಿದ್ದಾರೆ. ಇದು ಹೇಗೆ ಎಂದು ಆಶ್ಚರ್ಯಗೊಂಡಿರಾ? ಹನುಮಾನ್ ಬ್ರಹ್ಮಚಾರಿ ಎಂಬುದು ನಮಗೆಲ್ಲಾ ತಿಳಿದೇ ಇದೆ. ಅದಾಗ್ಯೂ ಹನಮಂತನು ತಮ್ಮ ಬಾಲದಿಂದ ಸಂಪೂರ್ಣ ಲಂಕೆಯನ್ನೇ ಸುಟ್ಟ ಸಮಯದಲ್ಲಿ ತಮ್ಮ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಅವರ ಬಾಲವನ್ನು ಸಾಗರದಲ್ಲಿ ಮುಳುಗಿಸಿದರು. ಈ ಸಂದರ್ಭದಲ್ಲಿ ಮೊಸಳೆಯೊಂದು ಅವರ ಬೆವರನ್ನು ಹೀರಿಕೊಂಡಿತು ಮತ್ತು ಮಕರಧ್ವಜ ಹುಟ್ಟಿದರು.
ತಮ್ಮ ಸಂಪೂರ್ಣ ದೇಹಕ್ಕೆ ಹನುಮಂತ ಕುಂಕುಮ ಹಚ್ಚಿಕೊಂಡಿದ್ದರು
ಸೀತಾ ಮಾತೆಯು ಯಾವಾಗಲೂ ತಮ್ಮ ಹಣೆಗೆ ಸಿಂಧೂರವನ್ನಿಟ್ಟುಕೊಳ್ಳುವುದನ್ನು ನೋಡಿ ಹನಮಂತನು ಅವರಲ್ಲಿ ಸಿಂಧೂರವನ್ನು ಹಚ್ಚಿಕೊಳ್ಳುವುದು ಏಕೆ ಎಂದು ಕೇಳುತ್ತಾರೆ. ತಮ್ಮ ಪತಿ ರಾಮನ ಮೇಲಿರುವ ಗೌರವ ಮತ್ತು ಪರಿಧಿಯನ್ನು ಮೀರಿದ ಪ್ರೀತಿಯ ಸಂಕೇತವೇ ಸಿಂಧೂರ ಎಂದು ಸೀತೆ ಉತ್ತರಿಸುತ್ತಾರೆ. ಅದನ್ನು ಕೇಳಿದ ಹನಮಾನ್ ತಮ್ಮ ಸಂಪೂರ್ಣ ದೇಹಕ್ಕೆ ಕುಂಕುಮವನ್ನು ಹಚ್ಚಿಕೊಳ್ಳುತ್ತಾರೆ. ಅವರ ರಾಮ ಪ್ರೀತಿಯನ್ನು ನೋಡಿ ಸ್ವತಃ ರಾಮನೇ ದಿಗ್ಙೂಢರಾಗುತ್ತಾರೆ. ಹನುಮಂತನನ್ನು ಕುಂಕುಮದಿಂದ ಯಾರು ಭಜಿಸುತ್ತಾರೋ ಅವರ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ ಎಂದು ರಾಮನು ವರವನ್ನು ನೀಡುತ್ತಾರೆ. ಇನ್ನೊಂದು ಕಥೆಯ ಪ್ರಕಾರ ಒಂದು ದಿನ ಸೀತಾ ದೇವಿ ತನ್ನ ಹಣೆಗೆ ಕೆಂಪು ಸಿಂಧೂರವನ್ನು ಇಟ್ಟುಕೊಳ್ಳುತ್ತಿರುವುದನ್ನು ಹನುಮಂತನು ನೋಡುತ್ತಿದ್ದನು. ಇದು ಹನುಮಂತನಿಗೆ ಒಂದು ಅಸಹಜ ಸಂಗತಿ ಎಂದು ಅನಿಸುತ್ತಿತ್ತು.
ಈ ಸಿಂಧೂರವನ್ನು ಏಕೆ ಹಚ್ಚಿಕೊಳ್ಳುವುದು ಎನ್ನುವುದನ್ನು ತಿಳಿದಿರಲಿಲ್ಲ. ಈ ವಿಚಾರವಾಗಿ ಹನುಮಂತನು ಸೀತೆಗೆ ಪ್ರಶ್ನಿಸಿದನು. ಆಗ ಸೀತೆಯು ಇದು ತನ್ನ ಯಜಮಾನನಾದ ಶ್ರೀರಾಮನ ಸುದೀರ್ಘವಾದ ಜೀವನ ಮತ್ತು ಅಭ್ಯುದಯಕ್ಕಾಗಿ ಇಟ್ಟುಕೊಳ್ಳುತ್ತಿದ್ದೇನೆ ಎಂದಳು. ಇದನ್ನು ಕೇಳಿದ ತಕ್ಷಣ ಹನುಮಂತ ಅಲ್ಲಿಂದ ಪಾರಾದನು. ಬಳಿಕ ಹನುಮಂತ ತನ್ನ ಇಡೀ ದೇಹಕ್ಕೂ ಕೆಂಪು ಸಿಂಧೂರವನ್ನು ಹಚ್ಚಿಕೊಂಡನು. ಇದನ್ನು ಕಂಡ ಶ್ರೀರಾಮನು ಸಂಪೂರ್ಣವಾಗಿ ಪ್ರಭಾವಿತನಾದನು. ಅಲ್ಲದೆ ಭವಿಷ್ಯದಲ್ಲಿ ಜನರು ನಿನ್ನನ್ನು ಇದೇ ಅವರತಾರದಲ್ಲಿ ಪೂಜಿಸಲಿ ಎಂದು ಹರಸಿದನು. ಈ ಹಿನ್ನೆಲೆಯಿಂದಲೇ ಜನರು ಇಂದಿಗೂ ಹನುಮಂತನನ್ನು ಕೆಂಪು ಬಣ್ಣದಲ್ಲಿಯೇ ತೋರಿಸುತ್ತಾರೆ ಮತ್ತು ಪೂಜಿಸುತ್ತಾರೆ.
ಹನುಂತನು ಬರೆದ ರಾಮಾಯಣ
ವಾಲ್ಮೀಕಿ ಆವೃತ್ತಿಗಿಂತಲೂ ಹನುಮಂತ ಬರೆದ ರಾಮಾಯಣ ಶ್ರೇಷ್ಠವಾದುದು ಎಂಬುದಾಗಿ ಜನಜನಿತವಾಗಿದೆ. ರಾವಣನ ಮೇಲೆ ಯುದ್ಧ ಜಯಿಸಿದ ನಂತರ ತನ್ನ ಸಹೋದರ ಮತ್ತು ಪತ್ನಿಯ ಜೊತೆಗೆ ರಾಮನು ಅಯೋಧ್ಯೆಗೆ ಮರಳಿ ರಾಜ್ಯಾಡಳಿತವನ್ನು ನಡೆಸುತ್ತಾರೆ. ಹನುಮಂತನು ರಾಮನ ಹೆಸರಿನಲ್ಲಿ ಶಾಂತಿ ಪಡೆಯಲು ಹಿಮಾಲಯಕ್ಕೆ ಹೋಗುತ್ತಾರೆ. ಹಿಮಾಲಯದ ಪರ್ವತಗಳಲ್ಲಿ ಹನುಮಂತನು ರಾಮನ ಹೆಸರನ್ನು ಬರೆಯುತ್ತಾರೆ.
ಹನುಮಂತನಿಗೆ ಸಲ್ಲಿಸಬೇಕಾದ ವಸ್ತುಗಳು
ಹನುಮಂತನನ್ನು ಪೂಜೆ ಭಕ್ತಿಯಿಂದ ಸರಳವಾಗಿ ಒಲಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಹೃದಯದಲ್ಲಿ ಯಾವುದೇ ಮಾಲಿನ್ಯವನ್ನು ಇಟ್ಟುಕೊಳ್ಳದೇ ಹನುಮಂತನನ್ನು ಒಲಿಸಿಕೊಂಡರೆ ಹನುಮಾನ್ ಒಲಿಯುತ್ತಾರೆ ಎಂದು ಹೇಳಲಾಗಿದೆ.
ಇನ್ನು ಶನಿ ದೋಷ ನಿವಾರಣೆಗೆ ನೀವು ಹನುಮಂತನ ಪೂಜೆಯನ್ನು ಶನಿವಾರ ಮಾಡಬಹುದು. ಇನ್ನು ಮಂಗಳವಾರಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ. ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳಲು ಹನುಮನಿಗೆ ಸಲ್ಲಿಸಬೇಕಾದ ವಸ್ತುಗಳನ್ನು ಇಲ್ಲಿ ನೀಡುತ್ತಿದ್ದೇವೆ.
ಮಲ್ಲಿಗೆ ಎಣ್ಣೆ ಮತ್ತು ಕುಂಕುವನ್ನು ನೀಡಬೇಕು ಹಾಗೂ ಕೆಂಪು ಶ್ರೀಗಂಧ ಜೊತೆಗೆ ಕೆಂಪು ಬಟ್ಟೆ ಮತ್ತು ಕೆಂಪು ಹೂವುಗಳನ್ನು ಹನುಮನಿಗೆ ನೀಡಬೇಕು.
ಹುರಿದ ಧಾನ್ಯಗಳೊಂದಿಗೆ ಹನುಮನಿಗೆ ಬೆಲ್ಲವನ್ನು ನೀಡಬೇಕು. ಗೋಧಿ ಮತ್ತು ಬೆಲ್ಲದಿಂದ ಮಾಡಿದ ಖಾದ್ಯಗಳನ್ನು ಅರ್ಪಿಸಬಹುದು.
ಸ್ನಾನವನ್ನು ಮಾಡಿದ ನಂತರ ಹನುಮಂತನ ಗುಡಿಗೆ ತೆರಳಿ ಪಂಚೋಪಚಾರ ಆಚರಣೆಯಿಂದ ಆಂಜನೇಯನನ್ನು ಪೂಜಿಸಬೇಕು. ಅಕ್ಕಿಯನ್ನು ನೀಡಬೇಕು ಮತ್ತು ಅಗರಬತ್ತಿ ಹಾಗೂ ದೀಪವನ್ನು ಭಕ್ತಿಯಿಂದ ಹಚ್ಚಬೇಕು.
ಹನುಮಾನ್ನ ಐದು ರೂಪಗಳಿಗೆ ಬೇರೆ ಬೇರೆ ವಸ್ತುಗಳನ್ನು ನೀಡಬೇಕು – ಪಂಚಮುಖಿ ಹನುಮಾನ್ಗೆ ತೆಂಗಿನ ಕಾಯಿ ಮತ್ತು ಕುಂಕುಮವನ್ನು ಅವರ ಕಾಲಿನಲ್ಲಿರುವ ಕುಂಕುವನ್ನು ಹಣೆಗೆ ಹಚ್ಚಿಕೊಂಡರೆ ಅದೃಷ್ಟ ಉಂಟಾಗುತ್ತದೆ.
ನಿಮ್ಮ ನಿತ್ಯದ ಮಂತ್ರದಲ್ಲಿ ಹನುಮಾನ್ ಚಾಲೀಸವನ್ನು ಸೇರಿಸಿ. ‘ಓಂ ರಾಮದೂತಾಯ ನಮಃ’ ಎಂದು 108 ಬಾರಿ ಪಠಿಸಿ. ಇದರಿಂದ ಅದೃಷ್ಟ ನಿಮಗೆ ಒದಗಿ ಬರಲಿದೆ.
ಈ ಮಂತ್ರ ಪಠಿಸಿ
ಮನೋಜವಂ ಮಾರುತತುಲ್ಯವೆಗಂ ಜಿತೇಂದ್ರಿಯಂ ಬುದ್ಧಿಮಾತಂ ವರಿಸ್ತಂ, ವಾತಾತಮಜಂ ವಾನರಾಯುಕ್ತಮುಖ್ಯಂ ಶ್ರೀರಾಮ ದೂತಂ ಸರನಾಮ ಪ್ರಪಾದಯೆ. ಪುರುಷರು ಈ ಮಂತ್ರವನ್ನು ಪಠಿಸಿ ಹನುಮಂತ ದೇವರನ್ನು ಪೂಜಿಸಬಹುದಾಗಿದೆ. ಸ್ನಾನ ಮಾಡಿದ ಬಳಿಕ ಅಥವಾ ರಾತ್ರಿ ವೇಳೆ ಈ ಮಂತ್ರವನ್ನು ಪಠಿಸಬಹುದು. ಮಧ್ಯರಾತ್ರಿ ವೇಳೆ ಹನುಮಂತನ ಪೂಜಿಸಿದರೆ ತುಂಬಾ ಒಳ್ಳೆಯದು.
ಮಂಗಳವಾರ ಉಪವಾಸ ಮಾಡಿ
ಮಂಗಳವಾರದಂದು ಉಪವಾಸ ಮಾಡಿಕೊಂಡು ಹನುಮಂತ ದೇವರನ್ನು ಪ್ರಾರ್ಥಿಸಬಹುದು. ದಿನದಲ್ಲಿ ಒಂದು ಊಟವನ್ನು ಮಾಡಿ ಹನುಮಂತ ದೇವರ ಮಂತ್ರ ಅಥವಾ ಹನುಮಾನ್ ಚಾಲೀಸವನ್ನು ಪಠಿಸಬೇಕು. ಹನುಮಂತ ದೇವರಿಗೆ ಸಿಹಿ ಇಷ್ಟವಾಗಿರುವ ಕಾರಣದಿಂದ ಕಡಲೆಹಿಟ್ಟಿನ ಲಾಡನ್ನು ಅರ್ಪಿಸಿ. ವಾನರಗಳಿಗೆ ಬಾಳೆಹಣ್ಣನ್ನು ಅರ್ಪಿಸಬಹುದು. ವಾನರಗಳು ಪತ್ತೆಯಾಗದೆ ಇದ್ದರೆ ಹನುಮಂತನ ಮೂರ್ತಿಗೆ ಬಾಳೆಹಣ್ಣನ್ನು ಅರ್ಪಿಸಿ. ಪುರುಷರು ಈ ಮೂಲಕ ಹನುಮಂತನನ್ನು ಪೂಜಿಸಬಹುದಾಗಿದೆ.