Ration Card Update : ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ!

Ration Card Update : ಬಡವರಿಗೆ ಅಗ್ಗದ ದರದಲ್ಲಿ ಅಥವಾ ಉಚಿತವಾಗಿ ಪಡಿತರ ನೀಡಲು ಸರ್ಕಾರದಿಂದ ಪಡಿತರ ಚೀಟಿ ನೀಡಲಾಗುತ್ತದೆ. ಪಡಿತರ ಚೀಟಿಯಿಂದ ಬಡವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಪ್ರತಿ ರಾಜ್ಯ ಸರ್ಕಾರವು ತಮ್ಮ ರಾಜ್ಯದಲ್ಲಿ ಇರುವ ಕುಟುಂಬದ ಸದಸ್ಯರಿಗೆ ಪಡಿತರ ಚೀಟಿಯನ್ನು ನೀಡಿದೆ ಮತ್ತು ನೀಡುತ್ತಿದೆ. ಈಗ ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ ಆರಂಭವಾಗಿದೆ. ಲಕ್ಷಾಂತರ ಜನರು ಇದರ ಪ್ರಯೋಜನ ಪಡೆಯಲಿದ್ದಾರೆ. ವಾಸ್ತವವಾಗಿ, ಕೇಂದ್ರ ಸರ್ಕಾರವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಲು ಸಾಮಾನ್ಯ ನೋಂದಣಿ ಸೌಲಭ್ಯವನ್ನು ಪ್ರಾರಂಭಿಸಿದೆ.

ಪಡಿತರ ಚೀಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಹೊಸ ಸೌಲಭ್ಯ

ವಸತಿ ರಹಿತರು, ನಿರ್ಗತಿಕರು, ವಲಸಿಗರು ಮತ್ತು ಇತರ ಅರ್ಹ ಫಲಾನುಭವಿಗಳು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುವುದು ಈ ನೋಂದಣಿಯ ಉದ್ದೇಶವಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಸುಮಾರು 81.35 ಕೋಟಿ ಜನರಿಗೆ ಗರಿಷ್ಠ ವ್ಯಾಪ್ತಿಯನ್ನು ಒದಗಿಸುತ್ತದೆ. ಪ್ರಸ್ತುತ, ಸುಮಾರು 79.77 ಕೋಟಿ ಜನರಿಗೆ ಈ ಕಾಯಿದೆಯಡಿ ಹೆಚ್ಚು ಸಬ್ಸಿಡಿ ಆಧಾರದ ಮೇಲೆ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಅದರಂತೆ 1.58 ಕೋಟಿ ಹೆಚ್ಚು ಫಲಾನುಭವಿಗಳನ್ನು ಸೇರಿಸಬಹುದು.

ಇದನ್ನೂ ಓದಿ : Gold Price Today : ಅಬ್ಬಬ್ಬಾ ಇಷ್ಟೊಂದು ಇಳಿಕೆಯಾಯ್ತಾ ಚಿನ್ನದ ಬೆಲೆ!

ಹಲವು ಕಾರಣಗಳಿಂದ ಪಡಿತರ ಚೀಟಿ ರದ್ದಾಗಿದೆ

ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಮಾತನಾಡಿ, ‘ಸಾಮಾನ್ಯ ನೋಂದಣಿ ಸೌಲಭ್ಯ’ (ನನ್ನ ಪಡಿತರ-ನನ್ನ ಹಕ್ಕು) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅರ್ಹ ಫಲಾನುಭವಿಗಳನ್ನು ಶೀಘ್ರವಾಗಿ ಗುರುತಿಸುವ ಗುರಿಯನ್ನು ಹೊಂದಿದೆ. ಅಲ್ಲದೆ, ಅಂತಹ ಜನರಿಗೆ ಪಡಿತರ ಚೀಟಿಗಳನ್ನು ನೀಡುವಲ್ಲಿ ಸಹಾಯ ಮಾಡಲು, ಇದರಿಂದ ಅವರು NFSA ಅಡಿಯಲ್ಲಿ ಅರ್ಹತೆಯ ಲಾಭವನ್ನು ಪಡೆಯಬಹುದು. ಕಳೆದ ಏಳೆಂಟು ವರ್ಷಗಳಲ್ಲಿ ಅಂದಾಜು 18ರಿಂದ 19 ಕೋಟಿ ಫಲಾನುಭವಿಗಳಿಗೆ ಸೇರಿದ ಸುಮಾರು 4.7 ಕೋಟಿ ಪಡಿತರ ಚೀಟಿಗಳು ನಾನಾ ಕಾರಣಗಳಿಂದ ರದ್ದಾಗಿವೆ ಎಂದರು.

ಸಧ್ಯ 11 ರಾಜ್ಯಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಆರಂಭ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಅರ್ಹ ಫಲಾನುಭವಿಗಳಿಗೆ ನಿಯಮಿತವಾಗಿ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಆರಂಭದಲ್ಲಿ ಹೊಸ ವೆಬ್ ಆಧಾರಿತ ಸೌಲಭ್ಯವು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಲಭ್ಯವಿರುತ್ತದೆ ಎಂದು ಕಾರ್ಯದರ್ಶಿ ಹೇಳಿದರು. ಈ ತಿಂಗಳ ಅಂತ್ಯದ ವೇಳೆಗೆ, ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಾರಂಭವಾಗುತ್ತವೆ. ಕಾರ್ಯದರ್ಶಿ ಪ್ರಕಾರ, ಈ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಸ್ಸಾಂ, ಗೋವಾ, ಲಕ್ಷದ್ವೀಪ, ಮಹಾರಾಷ್ಟ್ರ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ, ಪಂಜಾಬ್ ಮತ್ತು ಉತ್ತರಾಖಂಡ್ ನಲ್ಲಿ ಜಾರಿ ಮಾಡಲು ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ : Arecanut Price: ರಾಜ್ಯದ ಮಾರುಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment