ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಈ ಮೂರು ವಿಚಾರದಲ್ಲಿ ಯಾವಾಗಲೂ ಮುಂದಿರುತ್ತಾರೆಂದು ಹೇಳಿದ್ದಾನೆ ಸ್ತ್ರೀಯರು ಯಾವ ವಿಚಾರದಲ್ಲಿ ಪುರುಷರಿಗಿಂತ ಮುಂದಿರುತ್ತಾರೆ? ಇವುಗಳು ಸ್ತ್ರೀಯರಲ್ಲಿನ ಅದ್ಭುತ ಗುಣಗಳು ಅದೇನೆಂದು ಈ ದಿನ ತಿಳಿಯೋಣ ಬನ್ನಿ
ಚಾಣಕ್ಯ ನೀತಿಯನ್ನು ಅತ್ಯಂತ ತಾತ್ವಿಕ ಮತ್ತು ಪ್ರಾಮಾಣಿಕ ಪುಸ್ತಕವೆಂದು ಹೇಳಲಾಗುತ್ತದೆ ಯಾಕೆಂದರೆ ಇಂದಿಗೂ ಕೂಡ ಚಾಣಕ್ಯನು ಆ ಪುಸ್ತಕದಲ್ಲಿ ಬರೆದಿರುವ ತತ್ವಗಳನ್ನು ಜನರು ಅನುಸರಿಸಿಕೊಂಡು ಬರುತ್ತಿದ್ದಾರೆ ಚಾಣಕ್ಯ ನೀತಿಯಲ್ಲಿ ಮನುಷ್ಯನ ಪ್ರತಿನಿತ್ಯದ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ ಚಾಣಕ್ಯ ನೀತಿಯು ಕೇವಲ ಯಶಸ್ಸು, ಹಣ, ಇವುಗಳ ಮೇಲೆ ಮಾತ್ರ ತನ್ನ ಬೆಳಕನ್ನು ಚೆಲ್ಲಲಿಲ್ಲ ಬದಲಾಗಿ ಸ್ತ್ರೀ ಮತ್ತು ಪುರುಷರಿಗೆ ಸಂಬಂಧಿಸಿದ ವಿಷಯಗಳ ಕುರಿತು ಇದರಲ್ಲಿ ಚರ್ಚಿಸಲಾಗಿದೆ
ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀ ಮತ್ತು ಪುರುಷರ ನಡುವಿನ ಸಂಬಂಧವನ್ನು ಅವರ ಗುಣಗಳೊಂದಿಗೆ ಉಲ್ಲೇಖಿಸಿದ್ದಾನೆ ಚಾಣಕ್ಯನು ತನ್ನ ನೀತಿಯಲ್ಲಿ ಸ್ತ್ರೀಯರು ಪುರುಷರಿಗಿಂತ ಈ ಮೂರು ಈ ಮೂರು ವಿಚಾರದಲ್ಲಿ ಮುಂದಿರುತ್ತಾರೆ ಎಂದು ಹೇಳಿದ್ದಾನೆ, ಸ್ತ್ರೀಯರ ಯಾವ ಗುಣಗಳು ಅವರನ್ನು ಪುರುಷರಿಗಿಂತ ಒಂದು ಪಟ್ಟು ಮುಂದಿರುವಂತೆ ಮಾಡುತ್ತದೆ ಈಗ ತಿಳಿಯೋಣ
ಮೊದಲನೆಯದಾಗಿ ಹಸಿವು :-ಚಾಣಕ್ಯನು ತನ್ನ ನೀತಿಯಲ್ಲಿ ಪುರುಷರು ಮತ್ತು ಸ್ತ್ರೀಯರ ನಡುವಿನ ವ್ಯತ್ಯಾಸಗಳ ಬಗ್ಗೆ ಹೇಳುವಾಗ ಹೆಣ್ಣಿನ ಹಸಿವಿನ ಬಗ್ಗೆ ಮೊದಲು ಉಲ್ಲೇಖಿಸಿದ್ದಾನೆ ಅಂದರೆ ಮಹಿಳೆಯರು ಪುರುಷನಿಗಿಂತ ಎರಡು ಪಟ್ಟು ಹೆಚ್ಚು ಹಸಿವನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದಿದ್ದಾನೆ ಪುರುಷರಿಗಿಂತ ಹೆಚ್ಚು ಹಸಿವನ್ನು ಸ್ತ್ರೀಯರು ಅನುಭವಿಸುತ್ತಾರೆ ಮಹಿಳೆಯರಿಗೆ ಪುರುಷರಿಗಿಂತ ಹೆಚ್ಚು ಶಕ್ತಿಯ ಅವಶ್ಯಕತೆ ಇರುತ್ತದೆ ವಿಜ್ಞಾನದ ದೃಷ್ಟಿಕೋನದಿಂದ ನೋಡುವುದಾದರೆ ಸ್ತ್ರೀಯರಿಗೆ ಹೆಚ್ಚಿನ ಕ್ಯಾಲರಿಗಳ ಅವಶ್ಯಕತೆಯೂ ಇರುತ್ತದೆ
ಎರಡನೆಯದಾಗಿ ಬುದ್ಧಿವಂತಿಕೆ :- ಮಹಿಳೆಯರು ಪುರುಷರಿಗಿಂತ ಹೆಚ್ಚು ಬುದ್ಧಿವಂತರಾಗಿರುತ್ತಾರೆ ಆದ್ದರಿಂದಲೇ ಮಹಿಳೆಯರು ತಾವು ಮಾಡುವಂತಹ ಪ್ರತಿಯೊಂದು ಕೆಲಸವನ್ನು ಹೆಚ್ಚು ಏಕಾಗ್ರ ಮನಸ್ಸಿನಿಂದ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಅವರು ಬುದ್ಧಿವಂತಿಕೆಯಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥರು ಮಹಿಳೆಯರು ಎಂತಹದ್ದೇ ಕಷ್ಟದ ಸಂದರ್ಭ ಬಂದರು ಅದನ್ನ ಜಯಿಸಲು ಇದು ಒಂದು ಮುಖ್ಯ ಕಾರಣ
ಇನ್ನು ಮೂರನೆಯದಾಗಿ ಕೆಚ್ಚೆದೆ ಅಥವಾ ಧೈರ್ಯ :-ಆಚಾರ್ಯ ಚಾಣಕ್ಯನು ತನ್ನ ಚಾಣಕ್ಯ ನೀತಿಯಲ್ಲಿ ಒಂದೆಡೆ ಸಾಹಸಂ ಸರ್ವ ಗುಣವೆಂದು ಬರೆದಿದ್ದಾನೆ ಚಾಣಕ್ಯನು ಹೇಳುವ ಪ್ರಕಾರ ಸ್ತ್ರೀಯರು ಬುದ್ಧಿವಂತಿಕೆಯಲ್ಲಿ, ಹಸಿವನ್ನು ತಡೆದುಕೊಳ್ಳುವಲ್ಲಿ ಪುರುಷರಿಗಿಂತ ದುಪ್ಪಟ್ಟು ಸಾಮರ್ಥ್ಯ ಉಳ್ಳವರು ಮಾತ್ರವಲ್ಲ ಕೆಚ್ಚೆದೆಯಲ್ಲೂ ಪುರುಷರಿಗಿಂತ ಮಹಿಳೆಯರದ್ದೇ ಮೇಲುಗೈ
ಮಹಿಳೆಯರಲ್ಲಿ ಧೈರ್ಯವು ಪುರುಷರಿಗಿಂತ ಆರು ಪಟ್ಟು ಹೆಚ್ಚಾಗಿರುತ್ತದೆ ಒತ್ತಡ ಸಹಿಷ್ಣತೆ ಸ್ವಭಾವದಲ್ಲಿ ಅವರು ಪುರುಷರನ್ನು ಹಿಂದಿಕ್ಕುತ್ತಾರೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಅವರು ಪುರುಷರಿಗಿಂತ ಬಲವಾಗಿ ನಿಲ್ಲುತ್ತಾರೆ ಮತ್ತು ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಾರೆ ಚಾಣಕ್ಯ ನೀತಿಯ ಪ್ರಕಾರ ಮಹಿಳೆಯರು ಈ ಮೂರು ವಿಷಯಗಳಲ್ಲಿ ಪುರುಷರಿಗಿಂತ ಹೆಚ್ಚು ಸಮರ್ಥರಾಗಿರುತ್ತಾರೆ ಈ ವಿಚಾರಗಳಲ್ಲಿ ಮಹಿಳೆಯರನ್ನು ಹಿಂದಿಕ್ಕಲು ಪುರುಷರಿಂದ ಸಾಧ್ಯವಿಲ್ಲ