Kannada News :ಸಕ್ಕರೆ ಕಾಯಿಲೆ ಒಮ್ಮೆ ಬಂದರೆ ಜೀವನಪೂರ್ತಿ ಇರುತ್ತದೆ. ಜೊತೆಗೆ ಮನುಷ್ಯನನ್ನು ಇಂಡಿ ಇಂಪ್ಪಿಮಾಡುತ್ತದೆ. ಈ ಕಾಯಿಲೆ ಬಗ್ಗೆ ವೈದ್ಯರು ಹೇಳುವ ಪ್ರಕಾರ ಒಮ್ಮೆ ಈ ಕಾಯಿಲೆ ಮನುಷ್ಯನಿಗೆ ಬಂದರೆ ಮತ್ತೆ ಹೋಗುವುದಿಲ್ಲ. ಅದರೆ ಕೆಲವೊಂದು ತರಕಾರಿಗಳನ್ನು ಸೇವನೆ ಮಾಡುವ ಮೂಲಕ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
ಸಕ್ಕರೆ ಕಾಯಿಲೆ ಇರುವವರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಇನ್ನು ಕೆಲವು ಆಹಾರವನ್ನು ಸಂಪೂರ್ಣವಾಗಿ ಬಿಡಬೇಕಾಗುತ್ತದೆ. ಇನ್ನು ವೈದ್ಯರು ನೀಡುವ ಔಷಧಿಯನ್ನು ಸರಿಯಾಗಿ ತೆಗೆದುಕೊಂಡು ವೈದ್ಯರು ಸೂಚಿಸಿರುವ ಆಹಾರ ಪದ್ದತಿಯನ್ನು ಸರಿಯಾಗಿ ಅನುಸರಿಸಿಕೊಂಡು ಹೋದರೆ ಮದುಮೇಹ ಸಮಸ್ಸೆಯಾ ಕಾಟದಿಂದ ಸ್ವಲ್ಪ ಮಟ್ಟಿಗಾದರೂ ಪಾರಾಗಬಹುದು.
ಸಕ್ಕರೆ ಕಾಯಿಲೆ ಇರುವವರು ಕಟ್ಟುನಿಟ್ಟಿನ ಆಹಾರದ ಜೊತೆಗೆ ಹೂಕೋಸು ಎಲೆಕೋಸು ಹಾಗು ಬ್ರೊಕೋಲಿ ಅಥವಾ ಕೋಸು ಗಡ್ಡೆಯನ್ನು ಆಹಾರದಲ್ಲಿ ಬಳಸಿದರೆ ಬಹಳ ಒಳ್ಳೆಯದು.ಆರೋಗ್ಯ ತಜ್ಞರು ಹೇಳುವ ಹಾಗೆ ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶ ಮತ್ತು ಪ್ರೊಟೀನ್ ಅಂಶವನ್ನು ಒಳಗೊಂಡಿರುವ ತರಕಾರಿಗಳನ್ನು ಸೇವನೆ ಮಾಡಿದರೆ ಅಥವಾ ಕಾರ್ಬೋಹೈಡ್ರೇಟ್ ಅಂಶಗಳನ್ನು ಒಳಗೊಂಡ ತರಕಾರಿ ತಿನ್ನುವುದರಿಂದ ಉತ್ತಮವಾದ ಆರೋಗ್ಯವನ್ನು ಹೊಂದಬಹುದು.
ದೇಹಕ್ಕೆ ಬಹಳ ಮುಖ್ಯವಾಗಿ ಬೇಕಾದ ಪ್ರೋಟೀನ್ ಅಂಶಗಳು, ಆರೋಗ್ಯಕರ ಕೊಬ್ಬಿನ ಅಂಶಗಳು, ಕಡಿಮೆ ಕಾರ್ಬೋಹೈಡ್ರೇಟ್ ಅಂಶ ಹಾಗೂ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಇರುವ ಆಲೂಗಡ್ಡೆ, ಬ್ರೊಕೋಲಿ, ಎಲೆಕೋಸು ಇತ್ಯಾದಿಗಳು ಮಧುಮೇಹ ಸಮಸ್ಯೆಗೆ ರಾಮಬಾಣವಾಗಿ ಕೆಲಸ ಮಾಡುತ್ತವೆ.
ಆರೋಗ್ಯ ತಜ್ಞರ ಪ್ರಕಾರ ಇವುಗಳನ್ನು ಸೇವನೆ ಮಾಡಿದ ನಂತರ ನಮ್ಮ ಆಹಾರ ಪದ್ಧತಿಯಲ್ಲಿ ಕಂಡುಬರುವ ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಅಂಶವನ್ನು ನಮ್ಮ ದೇಹ ಹೀರಿಕೊಳ್ಳುವಂತೆ ಇವುಗಳು ಮಾಡುತ್ತವೆ. ಜೀವಕೋಶಗಳ ಭಾಗದಲ್ಲಿ ಹೀರಿಕೊಂಡ ಗ್ಲೂಕೋಸ್ ಅಂಶ ಶಕ್ತಿಯ ರೂಪಕ್ಕೆ ಬದಲಾಗುತ್ತದೆ.
ಅತಿಯಾದ ಇನ್ಸುಲಿನ್ ಅಂಶ ಪ್ಯಾಂಕ್ರಿಯಾಸ್ ಮೂಲಕ ಹಾರ್ಮೋನಿನ ರೂಪದಲ್ಲಿ ರಕ್ತದ ಹರಿವಿಗೆ ಬಿಡುಗಡೆಯಾಗುತ್ತದೆ. ಅತಿಯಾದ ಇನ್ಸುಲಿನ್ ಮಟ್ಟ ಮಧುಮೇಹ ಸಮಸ್ಯೆಯನ್ನು ಉಂಟು ಮಾಡುವ ಎಲ್ಲಾ ಬಗೆಯ ರೋಗಲಕ್ಷಣಗಳಿಗೆ ಮೊದಲೇ ಕಾರಣವಾಗಿರುತ್ತದೆ.
ಮಧುಮೇಹ ಸಮಸ್ಯೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಳ್ಳಲು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ತರಕಾರಿಗಳನ್ನು ಅಂದರೆ ಬ್ರಕೋಲಿ ಸೇವನೆ ಮಾಡಬೇಕು.