ಮನೆಯ ಮುಖ್ಯದ್ವಾರ ತುಂಬಾನೇ ಮುಖ್ಯವಾಗಿರುತ್ತದೆ. ಈ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಇದು ಪ್ರವೇಶದ್ವಾರ ಆಗಿರುವುದರಿಂದ ಯಾವುದಾದರೂ ದೇವರು ಪ್ರವೇಶ ಮಾಡುವುದಕ್ಕೂ ಮತ್ತು ಮನುಷ್ಯ ಪ್ರವೇಶ ಮಾಡುವುದಕ್ಕೂ ಇದು ತುಂಬಾ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದಕ್ಕೆ ಸಂಬಂಧಪಟ್ಟ ಹಾಗೆ ಈ ಕೆಲವು ತಪ್ಪುಗಳನ್ನು ಯಾವತ್ತಿಗೂ ಮಾಡಬಾರದು.
1, ಯಾವಾಗಲೂ ಮನೆಯ ಮುಖ್ಯದ್ವಾರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು.ಈ ಒಂದು ದ್ವಾರದಿಂದ ಮನೆಗೆ ಲಕ್ಷ್ಮಿ ಬರುತ್ತಾಳೆ. ಅದರಿಂದ ನೀವು ಎಷ್ಟು ಸ್ವಚ್ಛವಾಗಿ ಇಡುತ್ತಿರೋ ಅಷ್ಟು ಒಳ್ಳೆಯದು.2,ಮನೆಯ ಮುಖ್ಯದ್ವಾರದ ಬಳಿ ಜಾಸ್ತಿ ಚಪ್ಪಲಿಗಳನ್ನು ಇಡಬಾರದು.ಒಂದು ವೇಳೆ ಲಕ್ಷ್ಮಿ ಮನೆಗೆ ಪ್ರವೇಶ ಮಾಡುವಾಗ ಚಪ್ಪಲಿಗಳನ್ನು ನೋಡಿದರೆ ಮನೆಗೆ ಪ್ರವೇಶ ಮಾಡುವುದಿಲ್ಲ.ಹಾಗಾಗಿ ಚಪ್ಪಲಿಗಳನ್ನು ಸರಿಯಾಗಿ ಜೋಡಿಸಿ ಒಂದು ಕಡೆ ಇಟ್ಟುಕೊಳ್ಳಿ.
3, ಮನೆಯ ಮುಖ್ಯ ದ್ವಾರದ ಮುಂದೆ ರಂಗೋಲಿಯನ್ನು ಹಾಕುವುದು ತುಂಬಾನೇ ಒಳ್ಳೆಯದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಮತ್ತು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ.
4, ಮನೆಯ ಮುಖ್ಯದ್ವಾರದಲ್ಲಿ ಯಾವಾಗಲೂ ತೋರಣವನ್ನು ಕಟ್ಟಬೇಕು.ಈ ರೀತಿ ವಾರಕ್ಕೆ ಒಮ್ಮೆಯಾದರೂ ಮಾಡಿದರೆ ತುಂಬಾನೇ ಒಳ್ಳೆಯದು.5, ಒಂದು ವೇಳೆ ಮನೆಯ ಮುಖ್ಯದ್ವಾರದ ಬಳಿ ಕತ್ತಲು ಇದ್ದರೆ ಒಂದು ಲೈಟ್ ಅನ್ನು ಹಾಕಿದರೆ ತುಂಬಾನೇ ಒಳ್ಳೆಯದು . ಒಂದು ವೇಳೆ ಮುಖ್ಯದ್ವಾರದ ಬಳಿ ಕತ್ತಲು
ಇದ್ದರೆ ನೆಗೆಟಿವಿಟಿ ಹೆಚ್ಚಾಗುತ್ತದೆ.ಹಾಗಾಗಿ ಇದಕ್ಕೆ ನೀವು ಒಂದು ವ್ಯವಸ್ಥೆ ಮಾಡಿದರೆ ಬಹಳ ಒಳ್ಳೆಯದು.6, ಮನೆಯ ಮುಖ್ಯ ದ್ವಾರದ ಮೇಲೆ ಸರಿಯಾದ ರೀತಿಯಲ್ಲಿ ದೇವರ ಫೋಟೋಗಳನ್ನು ಹಾಕಿದರೆ ಮಾತ್ರ ಲಾಭ ಸಿಗುತ್ತದೆ. ಆದಷ್ಟು ದೇವರ ಫೋಟೋಗಳನ್ನು ಮನೆಯ ಒಳಗಡೆ ಹಾಕಿದರೆ ಒಳ್ಳೆಯದು. ಮನೆಯ ಹೊರಗಡೆ ದೇವರ ಫೋಟೋಗಳನ್ನು ಹಾಕಿದರೆ ತುಂಬಾ ಕೆಟ್ಟ ಪ್ರಭಾವಗಳನ್ನು ಅನುಭವಿಸಬೇಕಾಗುತ್ತದೆ.