ನಿಂಬೆ ಹಣ್ಣಿನ ಸಿಪ್ಪೆ ಕಸಕ್ಕೆ ಹಾಕುವ ಮೊದಲು ಈ ಲೇಖನ ಓದಿ!

ನಿಂಬೆ ಹಣ್ಣಿನ ರಸವನ್ನು ನಾವೆಲ್ಲಾ ಉಪಯೋಗಿಸುತ್ತೇವೆ ಆಮೇಲೆ ನಿಂಬೆ ಹಣ್ಣಿನ ಸಿಪ್ಪೆಯನ್ನು ಎಸೆದು ಬಿಡುತ್ತೇವೆ ಆದರೆ ಈ ತಪ್ಪು ಮಾಡಲೇಬೇಡಿ.ನಿಂಬೆ ಹಣ್ಣಿಗಿಂತ ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ತುಂಬಾನೇ ಔಷಧೀಯ ಗುಣವಿರುತ್ತದೆ.ಇದು ನಿಮ್ಮ ಸೌಂದರ್ಯ ಹೆಚ್ಚಿಸುವುದರ ಜೊತೆಗೆ ತೂಕವನ್ನು ಇಳಿಸಲು ಉಪಯೋಗಕಾರಿ.ನಿಂಬೆ ಹಣ್ಣಿನ ಸಿಪ್ಪೆಯಲ್ಲಿ ಹೇರಳವಾದ ವಿಟಮಿನ್ ಸಿ , ಮಿನರಲ್ , ಕ್ಯಾಲ್ಸಿಯಂ , ಪೊಟ್ಯಾಷಿಯಂ ಇದೆ
ಹಾಗೆ ಹಲವಾರು ಔಷಧೀಯ ಗುಣಗಳು ಇದೆ.

ಇದು ನಿಮ್ಮ ಆರೋಗ್ಯಕ್ಕೆ , ಸೌಂದರ್ಯಕ್ಕೆ ತುಂಬಾನೇ ಒಳ್ಳೆಯದು ,ಇದರಲ್ಲಿ ಕ್ಯಾನ್ಸರನ್ನು ಬರದಂತೆ ತಡೆಯುವಂತೆ ಶಕ್ತಿಯಿದೆ,ಮೂಳೆಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು , ಹಲ್ಲುಗಳನ್ನು ಸದೃಢಗೊಳಿಸುತ್ತದೆ , ತೂಕವನ್ನು ಇಳಿಸಲು ತುಂಬಾನೇ ಸಹಾಯಕಾರಿ,ಹೃದಯದ ಆರೋಗ್ಯಕ್ಕೆ ಕೂಡ ಒಳ್ಳೆಯದು, ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳನ್ನು ಸರಿಪಡಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇಷ್ಟೆಲ್ಲ ಔಷಧೀಯ ಗುಣ ಇರುವ ಲಿಂಬೆ ಹಣ್ಣಿನ ಸಿಪ್ಪೆಯನ್ನು ಇನ್ನು ಯಾವತ್ತೂ ಕಸದ ಬುಟ್ಟಿಗೆ ಹಾಕಲೇಬೇಡಿ.ನಿಂಬೆಹಣ್ಣಿನ ಸಿಪ್ಪೆಯಿಂದ ಪುಡಿ ತಯಾರಿಸಿಕೊಂಡು ಬಳಸಿ.ಈ ನಿಂಬೆ ಹಣ್ಣಿನ ಪುಡಿಯನ್ನು ಹೇಗೆ ತಯಾರಿಸಿಕೊಳ್ಳುವುದು ಹೇಗೆ ಎಂದು ತಿಳಿಯೋಣ ಬನ್ನಿ..

ಮಾರುಕಟ್ಟೆಯಲ್ಲಿ ಈ ನಿಂಬೆಹಣ್ಣಿನ ಸಿಪ್ಪೆಯ ಪುಡಿ ದೊರೆಯುತ್ತದೆ ಆದರೆ ಬೆಲೆ ಸುಮಾರು 150/- ರೂಪಾಯಿಗಿಂತ ಮೇಲೆ ಇರುತ್ತದೆ.ಆದ್ದರಿಂದ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದು.ನಿಂಬೆಹಣ್ಣಿನ ಸಿಪ್ಪೆಯನ್ನು ಎರಡು ದಿನ ಚೆನ್ನಾಗಿ ಒಣಗಿಸಿ ಮಿಕ್ಸಿ ಜಾರಿಯಲ್ಲಿ ಪುಡಿ ಮಾಡಿ.ನಿಂಬೆಹಣ್ಣಿನ ಸಿಪ್ಪೆಯ ಪುಡಿಯನ್ನು ಹೇಗೆಲ್ಲಾ ಬಳಸಬಹುದು ?ನಿಮ್ಮ ಮುಖದಲ್ಲಿ ಮೊಡವೆಗಳು , ಡಲ್ ಸ್ಕಿನ್ , ರಿಂಕಲ್ಸ್ ಮತ್ತು ಪಿಗ್ಮೆಂಟೇಷನ್ ಸಮಸ್ಯೆ ಇದ್ರೆ ಈ ಸ್ಕ್ರಬ್ ಬಳಸಿ.

ಒಂದು ಬೌಲ್ಗೆ ಒಂದು ಚಮಚ ನಿಂಬೆ ಹಣ್ಣಿನ ಸಿಪ್ಪೆ ಪುಡಿ , ಒಂದು ಚಮಚ ಸಕ್ಕರೆ ,ಒಂದು ಚಮಚ ಜೇನುತುಪ್ಪ , ಒಂದು ಚಮಚ ಹಾಲು ಇವೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.ಈಗ ಸ್ಕ್ರಬ್ ರೆಡಿಯಾಯ್ತು.ಈಗ ಫೇಸ್ ನ ವಾಷ್ ಮಾಡ್ಕೊಳ್ಳಿ ,ವಾಷ್ ಮಾಡಿರುವ ಮುಖಕ್ಕೆ ಇದನ್ನು ಹಾಕಿ ಆಮೇಲೆ ಚೆನ್ನಾಗಿ ಸ್ಕ್ರಬ್ ಮಾಡಿ.ಈ ಪೇಸ್ಟ್ ಅನ್ನು ಸ್ಕ್ರಬ್ ಮಾಡೋದ್ರಿಂದ ಮುಖದಲ್ಲಿ ಇರುವಂತಹ ಪಿಂಪಲ್ ಸಮಸ್ಯೆ ,ಪಿಗ್ಮೆಂಟೇಷನ್ ಸಮಸ್ಯೆ ಹಾಗೆ ನಿಮ್ಮ ಮುಖ ಡಲ್ಲಾಗಿ ಇದ್ದರೆ ಅದನ್ನು ಕೂಡ ಹೋಗಲಾಡಿಸಬಹುದು.ಇದನ್ನು ನೀವು ವಾರದಲ್ಲಿ 2 ಸಲ ಮಾಡಬಹುದು ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.ಸ್ಕಿನ್ ವೈಟಿಂಗ್ ಫೇಸ್ ಪ್ಯಾಕ್ ಒಂದು ಬೌಲ್ ಗೆ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಒಂದು ಚಮಚ , 2 ಚಮಚದಷ್ಟು ಸ್ಯಾಂಡಲ್ ವುಡ್ ಪೌಡರ್ , 2 ಚಮಚ ರೋಸ್ ವಾಟರ್ ಹಾಗೂ ಎರಡು ಚಮಚ ಹಾಲು ಹಾಕಿ ,ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ.

ಈಗ ಫೇಸ್ ಪ್ಯಾಕ್ ರೆಡಿಯಾಯಿತು.ಇದನ್ನು ಮುಖ ವಾಷ್ ಮಾಡಿದ ನಂತರ ಬಳಸಿ.ಇದರಿಂದ ನಿಮ್ಮ ಸ್ಕಿನ್ ಮೇಲಿರುವ ತಹ ಟ್ಯಾನ್ ಹೋಗುತ್ತದೆ.ಸೂರ್ಯನ ಕಿರಣದಿಂದ ನಿಮ್ಮ ಮುಖ ಕಪ್ಪಾಗಿದ್ದರೆ ಈ ಫೇಸ್ ಪ್ಯಾಕ್ ನ ಬಳಸಿ ಇದರಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ.ಇನ್ನು ಈ ಫೇಸ್ ಪ್ಯಾಕನ್ನು ನೀವು ಪಿಗ್ಮೆಂಟೇಷನ್ ಸಮಸ್ಯೆಗೂ ಕೂಡ ಬಳಸಬಹುದು.ಹಾಗೂ ನಿಮ್ಮ ಕೈ , ಕಾಲು ಎಲ್ಲದಕ್ಕೂ ಬಳಸಬಹುದು.

ಹಲ್ಲುಗಳನ್ನು ಹೊಳೆಯುವಂತೆ ಮಾಡಬಹುದು-ಮೊದಲಿಗೆ ಬ್ರಶ್ ಮೇಲೆ ಪೇಸ್ನ ಹಾಕ್ಕೊಳ್ಳಿ ಆಮೇಲೆ ಸ್ವಲ್ಪ ನಿಂಬೆ ಹಣ್ಣಿನ ಸಿಪ್ಪೆಯ ಪುಡಿಯನ್ನು ಹಾಕಿ ಇದರಿಂದ ಹಲ್ಲನ್ನು ಉಜ್ಜಿ ,ರೌಂಡ್ ಸರ್ಕಲ್ ಪ್ರಮೋಷನ್ನಲ್ಲಿ ಉಜ್ಜ ಬೇಕು ಇದರಿಂದ ಹಲ್ಲು ಹೊಳೆಯುತ್ತದೆ. ಇದನ್ನು ವಾರದಲ್ಲಿ 2 ಸಲ ಮಾಡಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ .

ತುಟಿಯ ಸುತ್ತ ಕಪ್ಪಾಗಿದೆಯಾ ಒಂದು ಬೌಲ್ಗೆ ಒಂದು ಚಮಚ ನಿಂಬೆಹಣ್ಣಿನ ಸಿಪ್ಪೆ , ಒಂದು ಚಮಚ ಜೇನುತುಪ್ಪ , ಒಂದು ಚಮಚ ರೋಸ್ ವಾಟರ್ ಹಾಕಿ ಇವೆಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಫೇಸ್ ನ ವಾಶ್ ಮಾಡಿ ತುಟಿಯ ಸುತ್ತ ಇದನ್ನು ಅಪ್ಲೈ ಮಾಡಿ 30 ನಿಮಿಷ ಹಾಗೆ ಬಿಟ್ಟು ನಂತರ ವಾಷ್ ಮಾಡಿ.
ಈ ರೀತಿಯಾಗಿ ನೀವು ಪ್ರತಿದಿನ ಮಾಡೋದ್ರಿಂದ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ತೂಕವನ್ನು ಇಳಿಸಿಕೊಳ್ಳಬಹುದು ಒಂದು ಪಾತ್ರೆಗೆ ಒಂದು ಲೋಟ ನೀರನ್ನು ಹಾಕಿ ಅದಕ್ಕೆ ಒಂದು ಚಮಚ ನಿಂಬೆಹಣ್ಣಿನ ಸಿಪ್ಪೆಯ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಆರಲು ಬಿಡಿ ಸ್ವಲ್ಪ ಉಗುರು ಬೆಚ್ಚಗಾದ ಮೇಲೆ ಅದಕ್ಕೆ ಜೇನುತುಪ್ಪವನ್ನು ಬೆರೆಸಿ.ಇದನ್ನು ಖಾಲಿ ಹೊಟ್ಟೆಗೆ ಕುಡಿಯಿರಿ ,ದೇಹದ ತೂಕ ಬೇಗನೆ ಇಳಿಯುತ್ತದೆ.ಇದು ಮೆಟಬಾಲಿಸಮ್ ಜಾಸ್ತಿ ಮಾಡುತ್ತದೆ ಇದರಿಂದ ಬೇಗನೆ ತೂಕವನ್ನು ಇಳಿಸಬಹುದು.

ಧನ್ಯವಾದಗಳು.

Leave a Comment