ಎಲ್ಲರಿಗೂ ತಮ್ಮ ಮನೆಯಲ್ಲಿ ಮಹಾಲಕ್ಷ್ಮೀ ಸದಾ ನೆಲೆಸಿರಬೇಕು , ಸಾಲದ ಬಾಧೆ ಇರಬಾರದು , ಸದಾಕಾಲ ಶಾಂತಿ ನೆಮ್ಮದಿ ಸಮೃದ್ಧಿ ಇರಬೇಕು ಎಂದು ಆಸೆ ಇರುತ್ತದೆ ಆದರೆ ಹೀಗೆ ಇರಲು ಮನೆಯನ್ನು ನಾವು ಮೊದಲು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರಮುಖವಾದ ಅಂಶವಾಗಿದೆ ಹಾಗೂ ಪ್ರತಿ ಶುಕ್ರವಾರ ಮಂಗಳವಾರ ತಪ್ಪದೆ ದೀಪಾರಾಧನೆ ನಡೆಸಲೇಬೇಕು.
ಯಾರ ಮನೆಯಲ್ಲಿ ಪ್ರತಿದಿನ ದೀಪಾರಾಧನೆ ನಡೆಯುತ್ತದೆಯೋ ಆ ಮನೆಯಲ್ಲಿ ಸ್ವತಃ ಮಹಾಲಕ್ಷ್ಮಿಯೇ ಸ್ಥಿರವಾಗಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.ಬೆಳಗ್ಗಿನ ದೀಪಾರಾಧನೆ ಮತ್ತು ಸಾಯಂಕಾಲದ ದೀಪಾರಾಧನೆಗೆ ಅದರದ್ದೇ ಆದ ಮಹತ್ವ ಇದೆ.ಆದಷ್ಟು ತುಪ್ಪದಿಂದ ದೀಪಾರಾಧನೆ ಮಾಡಿದರೆ ಒಳ್ಳೆಯದು ಹಾಗಂತ ದೊಡ್ಡ ದೀಪಕ್ಕೆ ತುಪ್ಪ ಹಾಕಿ ಹಚ್ಚುವ ಬದಲು ಪುಟ್ಟ ದೀಪಗಳನ್ನು ಕೊಂಡು ಅದರಲ್ಲಿ ತುಪ್ಪ ಹಾಕಿ ದೀಪಾರಾಧನೆ ಮಾಡಿ ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಚಿಂತನೆ ಹೆಚ್ಚಾಗುತ್ತದೆ.
ಇನ್ನು ಸಾಯಂಕಾಲ ದೀಪಾರಾಧನೆ ಮಾಡುವುದರಿಂದ ಮನೆಯಲ್ಲಿರುವ ದರಿದ್ರವು ನಾಶವಾಗುತ್ತದೆ.ಇನ್ನು ಈ ಮಂತ್ರವನ್ನು ಬೆಳಗ್ಗೆ ಮತ್ತು ಸಾಯಂಕಾಲ ಪೂಜೆ ಮಾಡುವ ಸಮಯದಲ್ಲಿ 5 ಅಥವಾ 7 ಬಾರಿ ಪಠಿಸಿದರೆ ಮಹಾಲಕ್ಷ್ಮಿ ಪ್ರಸನ್ನಳಾಗುತ್ತಾಳೆ.
// ಧನ ವಶೀಕರಣ ಮಂತ್ರ \”ಓಂ ಕ್ಲೀಮ್ ಶ್ರೀಮ್ ಲಕ್ಷ್ಮೀ ಶರಣಂ” ಇದು ಒಂದು ಬಿಜಾಕ್ಷರಿ ಮಂತ್ರವಾಗಿದೆಇದು ಮಹಾಲಕ್ಷ್ಮಿಯ ಧನ ವಶೀಕರಣ ಮಂತ್ರವಾಗಿದೆ.ನಿಮಗೆ ಸಮಯವಿದ್ದು ಮತ್ತು ನಿಮಗೆ ಸಮೃದ್ಧಿ ಹೊಂದಬೇಕು ಎಂಬ ಆಸೆ ಇದ್ದರೆ 108 ಎಂಟು ಬಾರಿ ಪಿಕ್ತಿಸ ಸಬಹುದಾಗಿದೆಇನ್ನು ಈ ಮಂತ್ರವನ್ನು ಪ್ರತಿದಿನ ಪಠಿಸುವುದರಿಂದ ನಿಮಗೆ ಇದರ ಲಾಭ ತಿಳಿಯುತ್ತದೆ ಹಾಗೂ ಲಕ್ಷ್ಮಿ ಮಹಾಲಕ್ಷ್ಮಿಯ ಅನುಗ್ರಹ ನಿಮಗೆ ದೊರೆಯುತ್ತದೆ.ಧನ್ಯವಾದಗಳು.