ಭಗವಂತನಿಗೆ ಪೂಜೆ ಮಾಡಿಕೊಳ್ಳುವ ಸಾಧ್ಯವಾದಷ್ಟು ಶುಭ್ರವಾದಂತಹ ಸ್ವಚ್ಛವಾದಂತಹ ವಸ್ತುಗಳನ್ನು ಉಪಯೋಗಿಸಬೇಕು.ಇನ್ನು ಅನಾದಿಕಾಲದಿಂದಲೂ ನಮ್ಮಲ್ಲಿ ಭಗವಂತನ ಪೂಜೆಯಲ್ಲಿ ತೆಂಗಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ.ಭಗವಂತನಿಗೆ ಸಮರ್ಪಿಸಲು ಪ್ರತಿಯೊಬ್ಬರೂ ತೆಂಗಿನಕಾಯಿಯನ್ನು ಒಡೆಯುತ್ತಾರೆ.ಮುಖ್ಯವಾಗಿ ಭಕ್ತಿ ಶ್ರದ್ಧೆಗಳಿಂದ ಶುಭ್ರವಾದ ಮನಸ್ಸಿನಿಂದ ತೆಂಗಿನಕಾಯಿಯನ್ನು ದೇವರಿಗೆ ಸಮರ್ಪಿಸಿ ನೈವೇದ್ಯವಾಗಿ ಕೊಡುತ್ತೇವೆ.
ಹೀಗೆ ನಾವು ಭಕ್ತಿಯಿಂದ ಸಮರ್ಪಿಸಿದ ತೆಂಗಿನಕಾಯಿಯು ಒಮ್ಮೊಮ್ಮೆ ಒಂದೊಂದು ರೀತಿಯಲ್ಲಿ ಒಡೆಯುತ್ತದೆ.ಕೆಲವರು ಹೀಗೆ ಒಡೆದ್ರೆ ಸರಿಯಲ್ಲ , ಇನ್ನೊಬ್ಬರು ಹೀಗೆ ಒಡೆದರೆ ಸರಿಯಲ್ಲ ಅಂತ ಹೇಳುತ್ತಿರುತ್ತಾರೆ ಆದರೆ ನಾವು ಸಮರ್ಪಿಸುವ ತೆಂಗಿನ ಕಾಯಿಯು ಹೇಗೆ ಒಡೆಯುತ್ತದೆ ಎಂಬುದು ಮುಖ್ಯವಲ್ಲ ಬದಲಾಗಿ ನಾವು ಭಕ್ತಿ ಶ್ರದ್ಧೆಗಳಿಂದ ಸಮರ್ಪಿಸುವುದು ಮುಖ್ಯ.ಇನ್ನು ಅನಾದಿ ಕಾಲದಿಂದಲೂ ಕೆಲವು ಸೂಚನೆಗಳು ಭಗವಂತ ನೀಡುತ್ತಾನೆ.ಅದೇ ರೀತಿ ತೆಂಗಿನಕಾಯಿ ಸರಿಯಾಗಿ ಒಡೆದರೆ ಮನೆಯಲ್ಲಿ ಶುಭ ಜರುಗುತ್ತದೆ ಎಂದು ಹೇಳಲಾಗುತ್ತದೆ.
ತೆಂಗಿನಕಾಯಿಯನ್ನು ಭಗವಂತನಿಗೆ ಸಮರ್ಪಿಸಿದಾಗ ಅದು ಸಮ ರೀತಿಯಲ್ಲಿ ಒಡೆದಾಗ ಮನೆಯಲ್ಲಿ ಶುಭಮಂಗಳ ಕಾರ್ಯಗಳು ಜರುಗುತ್ತವೆ ಎನ್ನುವುದರ ಸಂಕೇತವಾಗಿದೆ.ಉದ್ದವಾಗಿ ಒಡೆದಾಗ ಅದನ್ನು ತೊಟ್ಟಿಲು ಕಾಯಿ ಮನೆಯಲ್ಲಿ ಸಂತಾನ ಅಭಿವೃದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ.ಒಮ್ಮೊಮ್ಮೆ ಕೆಲವೊಂದು ಬಾರಿ ತೆಂಗಿನಕಾಯಿಯು ಅಡ್ಡ ದಿಡ್ಡಿಯಾಗಿ ಒಡೆಯುತ್ತದೆ ಆಗ ಅದು ಕೂಡ ಒಳ್ಳೆಯ ಸೂಚನೆಯೇ ಹೊರತು ಯಾವ ಕೆಟ್ಟ ಸಂದೇಶವನ್ನು ಅದು ನೀಡುವುದಿಲ್ಲ.
ತೆಂಗಿನಕಾಯಿಯು ಹೇಗೆ ಒಡೆದರೂ ಭಗವಂತನಿಗೆ ನಿವೇದಿಸಿದ್ದು , ಶುಭ್ರವಾದ ಮನಸ್ಸಿನಿಂದ ಅರ್ಪಿಸಿದ್ದಾಗಿರುತ್ತದೆ.ಇನ್ನು ಒಮ್ಮೊಮ್ಮೆ ತೆಂಗಿನೆಕಾಯಿ ಒಡೆದಾಗ ಕೆಟ್ಟು ಹೋಗಿರುತ್ತದೆ ಆಗ ಅನೇಕರು ತಮ್ಮಿಂದ ಏನೋ ಅಪಚಾರವಾಯಿತೇನೋ ಎಂದು ಸಂಶಯ ಪಡುತ್ತಾರೆ ಆದರೆ ಹೀಗೆ ಪೂಜೆಗೆಂದು ತಂಡ ತೆಂಗಿನಕಾಯಿಯು ಕೆಟ್ಟಿದ್ದರೆ ಅದರ ಅರ್ಥ ದೇವರು ನಿಮ್ಮ ಪೂಜೆಯನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎಂದು ಅರ್ಥ. ಕಾಯಿ ಒಡೆದಾಗ ಹೂವು ಬಂದ್ರೆ ಶುಭ ಜರುಗುತ್ತದೆ ಎನ್ನುವುದರ ಸಂಕೇತವಾಗಿದೆ.
ಒಮ್ಮೊಮ್ಮೆ ಮನೆಗಳಿಗೆ ಮತ್ತು ವಾಹನಗಳಿಗೆ ಹೀಗೆ ಕೆಟ್ಟ ಕಾಯಿಗಳು ಏನಾದರೂ ಬಂದರೆ ಅದನ್ನು ತೆಗೆದು ಮತ್ತೊಂದು ಹೊಸ ಕಾಯಿ ಒಡೆಯುವುದು ಅದರಿಂದ ಯಾವುದೇ ದೋಷ ಇಲ್ಲ.ಇನ್ನು ತೆಂಗಿನಕಾಯಿಯನ್ನು ಒಡೆಯುವಾಗ ಯಾವುದೇ ಕಾರಣಕ್ಕೂ ಅನುಮಾನ ಮಾತ್ರ ಇಟ್ಟುಕೊಳ್ಳಬಾರದು ಬದಲಾಗಿ ಬೇಕಾಗಿರುವುದು ಮನಸ್ಸಿನ ಸಮರ್ಪಣೆಯ ಹೊರತು ವಸ್ತುಗಳ ಸಮರ್ಪಣೆಯಲ್ಲ ಅದ್ದರಿಂದ ಭಕ್ತಿ ಶ್ರದ್ಧೆಗಳಿಂದ ನಾವು ಏನನ್ನು ಸಮರ್ಪಿಸಲಿ ಮುಖ್ಯವಾಗಿ ಬೇಕಾಗಿರುವುದು ಶ್ರದ್ಧೆ ಮತ್ತು ಭಕ್ತಿ.ಧನ್ಯವಾದಗಳು.