ಮು ಟ್ಟಿನ ಸಮಯದಲ್ಲಿ ನವರಾತ್ರಿ ಆಚರಣೆ ಹೇಗೆ..? ನವರಾತ್ರಿ ಪೂಜೆ ಮಧ್ಯದಲ್ಲಿ ಮುಟ್ಟದರೆ ಏನು ಮಾಡಬೇಕು?

ನವರಾತ್ರಿ ಹಬ್ಬವು 2022 ರ ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗುತ್ತಿದ್ದು, ನವರಾತ್ರಿಯ ಈ 9 ದಿನಗಳಲ್ಲಿ ದುರ್ಗಾ ದೇವಿಯ ಪೂಜೆಯನ್ನು ಮತ್ತು ಉಪವಾಸ ವ್ರತವನ್ನು ಮಾಡಲಾಗುತ್ತದೆ. ಮಹಿಳೆಯರಿಗೆ ನವರಾತ್ರಿ ಹಬ್ಬವು ವಿಶೇಷವಾಗಿದ್ದು, ಈ ಸಮಯದಲ್ಲಿ ಪೂಜೆ ಮತ್ತು ಉಪವಾಸವನ್ನು ಇಟ್ಟುಕೊಳ್ಳುತ್ತಾರೆ. ಒಂದು ವೇಳೆ, ನವರಾತ್ರಿ ಸಮಯದಲ್ಲಿ ಮಹಿಳೆಯರಿಗೆ ಮುಟ್ಟಾದರೆ ಪೂಜೆಯನ್ನು ಮಾಡಬಹುದೇ..? ಮುಟ್ಟಿನ ಸಮಯದಲ್ಲಿ ನವರಾತ್ರಿ ಪೂಜೆಯ ನಿಯಮಗಳಾವುವು..?

ನವರಾತ್ರಿಯನ್ನು ಒಂಬತ್ತು ದಿನಗಳ ಬಹಳ ದೀರ್ಘವಾದ ಹಬ್ಬವೆಂದು ಪರಿಗಣಿಸಲಾಗಿದೆ ಮತ್ತು ಈ ಹಬ್ಬವು ಧ್ಯಾನ, ಪಠಣ ಮತ್ತು ಪೂಜೆಯ ಮೂಲಕ ಆಧ್ಯಾತ್ಮಿಕ ಶಕ್ತಿಯ ಅಭಿವೃದ್ಧಿಗೊಳಿಸುತ್ತದೆ. ವರ್ಷಕ್ಕೊಮ್ಮೆ ಬರುವ ನವರಾತ್ರಿ ಹಬ್ಬದಂದು ಮಹಿಳೆಯರಾಗಲಿ, ಪುರುಷರಾಗಲಿ ವ್ರತವನ್ನು ಮಾಡುವ ಮೂಲಕ ದೇವಿಯ ಆಶೀರ್ವಾದ ಪಡೆಯಲು ಇಚ್ಛಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಮಹಿಳೆಯರಿಗೆ ಮುಟ್ಟಿನ ಅವಧಿಯು ಎದುರಾದರೆ ನವರಾತ್ರಿಯನ್ನು ಆಚರಿಸಬಹುದೆ..? ಯಾವೆಲ್ಲಾ ವ್ರತ ನಿಯಮಗಳನ್ನು ಅವರು ಪಾಲಿಸುವುದು ಉತ್ತಮ..?

​ಮುಟ್ಟಿನ ಮಹಿಳೆಯರು ದುರ್ಗಾ ಪೂಜೆ ಮಾಡಬಹುದೇ..?ಜ್ಯೋತಿಷಿಗಳ ಪ್ರಕಾರ, ನಿಮ್ಮ ಪ್ರೀತಿ, ಕೋಪ ಮತ್ತು ದ್ವೇಷವನ್ನು ನೀವು ಯಾವಾಗ ಬೇಕಾದರೂ ವ್ಯಕ್ತಪಡಿಸಬಹುದು. ಅದೇ ರೀತಿಯಲ್ಲಿ, ನಿಮ್ಮ ನಾಲಿಗೆಯಿಂದ ನೀವು ಯಾವಾಗಲಾದರೂ ಕಹಿಯಾಗಿರುವಂತೆ ಅಥವಾ ಸಿಹಿಯಾದಂತಹ ಮಾತುಗಳನ್ನು ಮಾತನಾಡಬಹುದು. ಹಾಗೆಯೇ ನಿಮ್ಮ ಮನಸ್ಸಿನಲ್ಲಿ ಶುಭ-ಅಶುಭ ಆಲೋಚನೆಗಳನ್ನು ತರಬಹುದು.

ಅದೇ ರೀತಿಯಲ್ಲಿ, ಯಾವುದೇ ಸಮಯದಲ್ಲಿ, ಎಲ್ಲಿಯಾದರೂ, ಯಾವುದೇ ಪರಿಸ್ಥಿತಿಯಲ್ಲಿ, ನೀವು ಭಗವಂತನನ್ನು ಧ್ಯಾನಿಸಬಹುದು, ಸ್ಮರಿಸಿಕೊಳ್ಳಬಹುದು, ಪ್ರಾರ್ಥಿಸಬಹುದು ಅಥವಾ ಮಾನಸಿಕವಾಗಿ ಜಪಿಸಬಹುದು. ಆದ್ದರಿಂದ ಸಂಪ್ರದಾಯಗಳು ಮತ್ತು ಆಚರಣೆಗಳು ಮುಟ್ಟಿನ ಸಮಯದಲ್ಲಿ ದೇವರ ವಿಗ್ರಹದ ಸ್ಪರ್ಶ, ಹೋಮ, ಹವನ ಮತ್ತು ದೇವಸ್ಥಾನಕ್ಕೆ ಹೋಗುವುದು ಅಥವಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವುದನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಶುಭ ಚಿಂತನೆ ಮತ್ತು ಉಪವಾಸವನ್ನು ಇಟ್ಟುಕೊಳ್ಳುವುದರಲ್ಲಿ ಏನು ಅಭ್ಯಂತರವಿರುವುದಿಲ್ಲ. ಋತುಸ್ರಾವದ ಸಮಯದಲ್ಲಿ ಮಹಿಳೆಯರು ಉಪವಾಸವನ್ನು ಇಟ್ಟುಕೊಳ್ಳಬಹುದು ಎಂದು ಹೇಳಲಾಗುತ್ತದೆ, ಆದರೆ ಈ ಮಧ್ಯೆ ದೇವರು ಮತ್ತು ದೇವತೆಗಳ ಭೌತಿಕ ವಿಗ್ರಹವನ್ನು ಮುಟ್ಟಬಾರದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

​ಮಹಿಳೆಯರು ವ್ರತ ಮಾಡಬಹುದೇ..?ನವರಾತ್ರಿಯ 9 ದಿನಗಳು ಅತ್ಯಂತ ಶುದ್ಧ ಮತ್ತು ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಶಕ್ತಿ ದೇವಿಯ ಆರಾಧನೆಯಿಂದಾಗಿ, ಈ ಹಬ್ಬವು ಮಹಿಳೆಯರಿಗೆ ಅತ್ಯಂತ ಮಹತ್ವದ್ದಾಗಿದೆ. ನವರಾತ್ರಿ ಹಬ್ಬದ 9 ದಿನಗಳ ಮಧ್ಯದಲ್ಲಿ ಮಹಿಳೆಯರಿಗೆ ಮುಟ್ಟಾಗುವ ಸಂದರ್ಭಗಳು ಎದುರಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯರು ಪೂಜೆ ಮಾಡಬೇಕೋ ಬೇಡವೋ ಎಂಬ ಸಂದಿಗ್ಧತೆಗೆ ಸಿಲುಕುತ್ತಾರೆ. ನವರಾತ್ರಿಯ ಹಬ್ಬದಲ್ಲಿ ಬಹುತೇಕ ಮನೆಗಳಲ್ಲಿ ಘಟ ಪ್ರತಿಷ್ಠಾಪನೆ ಮಾಡಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಹೆಚ್ಚಾಗಿ ಮಹಿಳೆಯರು ಈ ಸಮಯದಲ್ಲಿ ಉಪವಾಸ ವ್ರತವನ್ನು ಮಾಡುತ್ತಾರೆ.

ಮಹಿಳೆಯರು ಋತುಚಕ್ರವು ಸರ್ವೇ ಸಾಮಾನ್ಯವಾದ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಇದು ಪ್ರತಿ 22 ರಿಂದ 28 ದಿನಗಳಿಗೊಮ್ಮೆ ಪುನರಾವರ್ತನೆಯಾಗುತ್ತದೆ. ನವರಾತ್ರಿಯ ಮಧ್ಯದಲ್ಲಿ ಈ ಸಮಸ್ಯೆ ಬರಬಹುದು ಎಂಬ ಆತಂಕ ನಿಮಗೆ ಈಗಾಗಲೇ ಇದ್ದರೆ, ನೀವು ಉಪವಾಸವನ್ನು ಪ್ರಾರಂಭಿಸಬಾರದು. ಅಂತಹ ಪರಿಸ್ಥಿತಿಯಲ್ಲಿ, ನೀವು ಬಯಸಿದರೆ, ನೀವು ಮೊದಲ ಮತ್ತು ಕೊನೆಯ ದಿನದಂದು ಮಾತ್ರ ವ್ರತವನ್ನು ಮಾಡಬಹುದು. ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ತಲೆಸುತ್ತು, ಅತಿಯಾದ ಹಸಿವು ಮತ್ತು ಮಲಬದ್ಧತೆಯಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ, ನೀವು ಉಪವಾಸ ಮಾಡಬಾರದು. ಆದರೆ ಅಂತಹ ಸಮಸ್ಯೆಗಳಿಲ್ಲದ ಮಹಿಳೆಯರು ಉಪವಾಸವನ್ನು ಮಾಡಬಹುದು. ಈ ಸಮಯದಲ್ಲಿ ನೀವು ತಾಯಿಯ ಮೂರ್ತಿಯನ್ನು ಮುಟ್ಟಬಾರದು ಮತ್ತು ಯಾವುದೇ ಪೂಜಾ ಸಾಮಗ್ರಿಗಳನ್ನು ಮುಟ್ಟಬಾರದು. ನೀವು ನಿಜವಾದ ಭಕ್ತಿಯಿಂದ ಉಪವಾಸ ಮಾಡಬಹುದು ಮತ್ತು ನೀವು ಫಲವನ್ನು ಸಹ ಪಡೆಯಬಹುದು. ಭಕ್ತಾದಿಗಳ ಮನಸ್ಸಿನಲ್ಲಿ ದೇವರ ಬಗ್ಗೆ ಪ್ರಾಮಾಣಿಕ ಭಾವನೆಗೆ ಮೊದಲ ಆದ್ಯತೆಯಿರುತ್ತದೆ ಹಾಗೂ ದೈಹಿಕ ಶುದ್ಧೀಕರಣವು ನಂತರವೆಂದು ಪರಿಗಣಿಸಲಾಗುತ್ತದೆ.

ಉಪವಾಸದೊಂದಿಗೆ ಪಠಿಸಬಹುದು-ಮುಟ್ಟಿನ ಸಮಸ್ಯೆ ಇರುವ ಮಹಿಳೆಯರು ಉಪವಾಸದ ಜೊತೆಗೆ ಮನಸ್ಸಿನಲ್ಲಿಯೇ ದುರ್ಗಾ ಸಪ್ತಶತಿ ಪಾರಾಯಣವನ್ನು ಮಾಡಬಹುದು. ನಿಮಗೆ ಈ ಪಾಠ ನೆನಪಿಲ್ಲದಿದ್ದರೆ ಅಥವಾ ಬರದಿದ್ದರೆ ನಿಮ್ಮ ಮೊಬೈಲ್ನಲ್ಲಿ ಇಂಟರ್ನೆಟ್ ಮೂಲಕ ಇದನ್ನು ಪಠಿಸಬಹುದು. ನೀವು ಬಯಸಿದರೆ, ನೀವು ಏಕಾಂತ ಸ್ಥಳದಲ್ಲಿ ಕುಳಿತು ಈ ಪಾರಾಯಣವನ್ನು ಮಾಡಬಹುದು. ಸ್ವಚ್ಛವಾದ ಬಟ್ಟೆ ಧರಿಸಿ ಸ್ನಾನ ಮಾಡಿದ ನಂತರ ಈ ಪಾಠವನ್ನು ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

ನವರಾತ್ರಿಗಿಂತ ಮೊದಲೇ ನಿಮಗೆ ಮುಟ್ಟಿನ ಸಮಸ್ಯೆ ಎದುರಾದರೆ, ನೀವು ಉಪವಾಸ ಮಾಡಬಾರದು. ಇನ್ನೂ, ನೀವು ಉಪವಾಸ ಮಾಡಲು ನಿರ್ಧರಿಸಿದ್ದರೆ, ಪೂಜೆಯನ್ನು ನೀವೇ ಮಾಡಬೇಡಿ. ಬದಲಾಗಿ ಮನೆಯಲ್ಲಿ ಬೇರೆಯವರಿಂದ ಪೂಜೆ ಮಾಡಿಸಿ, ನೀವು ವ್ರತ ಮಾಡಬಹುದು. ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ಮತ್ತು ಕೇಳುವುದರಿಂದ ವ್ರತದ ಸಂಪೂರ್ಣ ಫಲವನ್ನು ನೀವು ಪಡೆಯುತ್ತೀರಿ.ಮಾನಸಿಕ ಪಠಣ ಮತ್ತು ಮಾನಸಿಕ ಧ್ಯಾನವನ್ನು ಮಾಡಿ

ನವರಾತ್ರಿಯ ಮಧ್ಯಂತರದಲ್ಲಿ ಮುಟ್ಟಿನ ಸಮಸ್ಯೆ ಎದುರಾದರೆ ನೀವು ನಿರಾಶೆಗೊಳ್ಳಬೇಕಾಗಿಲ್ಲ. ಈ ಸಮಯದಲ್ಲಿ, ನೀವು ದುರ್ಗಾ ದೇವಿಯ ಮಾನಸಿಕ ಪಠಣ ಮತ್ತು ಮಾನಸಿಕ ಧ್ಯಾನವನ್ನು ಮಾಡುವುದು ಅವಶ್ಯಕ. ಹೀಗೆ ಮಾಡುವುದರಿಂದ ಪೂಜೆಯ ಸಂಪೂರ್ಣ ಫಲವನ್ನು ಪಡೆಯುತ್ತೀರಿ ಮತ್ತು ತಾಯಿ ಭಗವತಿ ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ.

​ಮುಟ್ಟಿನ ಕೊನೆಯ ದಿನ ಪೂಜೆ ಮಾಡಬಹುದೇ..?ಕೆಲವೊಮ್ಮೆ ಋತುಚಕ್ರದ ಕೊನೆಯ ದಿನ ಮತ್ತು ಮುಟ್ಟಿನ ಕೊನೆಯ ದಿನ ಕೂಡ ಒಂದೇ ಬಾರಿ ಬರಬಹುದು. ಆ ಸಮಯದಲ್ಲಿ ಪೂಜೆ ಮಾಡಬಹುದೇ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಬಹುದು. ನವರಾತ್ರಿ ಹಬ್ಬದ ಕೊನೆಯ ದಿನದಂದೇ ನಿಮ್ಮ ಮುಟ್ಟಿನ ಕೊನೆಯ ದಿನವೂ ಆಗಿದ್ದರೆ, ಆ ಸಂದರ್ಭದಲ್ಲಿ ನೀವು ಸ್ನಾನ ಮಾಡಿ, ಶುದ್ಧವಾದ ಬಟ್ಟೆಯನ್ನು ಧರಿಸಿ ನಂತರ ದುರ್ಗಾ ದೇವಿಯನ್ನು ಪೂಜಿಸಬಹುದು.

Leave a Comment