ಇನ್ನು ನವರಾತ್ರಿಗು ಮುನ್ನ ಈ ವಸ್ತುಗಳನ್ನು ಮನೆಯಿಂದ ಹೊರಗೆ ಇಡಬೇಕು.ಆ ವಸ್ತುಗಳು ಯಾವುದು ಎಂದರೆ1, ಮುರಿದು ಹೋದ ಅಥವಾ ಒಡೆದು ಹೋದ ವಿಗ್ರಹಗಳು-ಸಾಮಾನ್ಯವಾಗಿ ಮುರಿದುಹೋದ ಅಥವಾ ಹಾಳಾದ ದೇವರ ವಿಗ್ರಹಗಳನ್ನು ಹಾಗೆ ಇಟ್ಟು ಪೂಜೆ ಮಾಡುತ್ತಿರುತ್ತೇವೆ. ಅದರೇ ಇದು ವಾಸ್ತವದಲ್ಲಿ ಇದು ಅಶುಭ ಎಂದು ಹೇಳಲಾಗಿದೆ. ಒಡೆದು ಹೋದ ವಿಗ್ರಹಗಳು ಅನಾಹುತಕ್ಕೆ ಕಾರಣವಾಗಬಹುದು ಎನ್ನಲಾಗುತ್ತದೆ. ಯಾವುದೇ ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳು ಮುರಿದು ಹೋಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹಾಗಿದ್ದಲ್ಲಿ, ತಕ್ಷಣ ಅದನ್ನು ಮನೆಯಿಂದ ತೆಗೆದು ನದಿ ಅಥವಾ ಕೊಳದಲ್ಲಿ ಮುಳುಗಿಸಿ.
2,ಹಳಸಿದ ಆಹಾರ-ನವರಾತ್ರಿಯಂದು ದೇವಿಯ ಸ್ಥಾಪನೆಯ ಮೊದಲು, ನಿಮ್ಮ ಮನೆಯಲ್ಲಿ ಯಾವುದೇ ಆಹಾರ ಅಥವಾ ಪಾನೀಯವು ಕೆಟ್ಟಿದ್ದರೆ ಅಥವಾ ಅಡುಗೆಮನೆಯಲ್ಲಿ ಯಾವುದೇ ಹಳಸಿದ ಆಹಾರವಿದ್ದರೆ ಅದನ್ನು ಮನೆಯಿಂದ ಹೊರ ತೆಗೆಯಿರಿ.
3,ಬೆಳ್ಳುಳ್ಳಿ-ಈರುಳ್ಳಿ-ಜ್ಯೋತಿಷ್ಯ, ನವರಾತ್ರಿಯ ಒಂಬತ್ತು ದಿನಗಳು ಮನೆಯ ವಾತಾವರಣವು ಶುದ್ಧವಾಗಿರಬೇಕು ಮತ್ತು ಧನಾತ್ಮಕವಾಗಿರಬೇಕು. ಅದೇ ಸಮಯದಲ್ಲಿ, ನವರಾತ್ರಿ ಪೂಜೆಯ ಸಮಯದಲ್ಲಿ ಒಂಬತ್ತು ದಿನಗಳವರೆಗೆ ಮನೆಯಲ್ಲಿ ಸಾತ್ವಿಕ ಆಹಾರವನ್ನು ಮಾತ್ರ ತಯಾರಿಸಬೇಕು. ಈ ಕಾರಣಕ್ಕಾಗಿ, ನವರಾತ್ರಿಯಲ್ಲಿ ಬೆಳ್ಳುಳ್ಳಿ, ಈರುಳ್ಳಿ, ಮಾಂಸ, ಮದ್ಯ ಇತ್ಯಾದಿಗಳನ್ನು ಸೇವಿಸುವುದು ಮಾತ್ರವಲ್ಲ, ಅವುಗಳನ್ನು ಮನೆಯಲ್ಲಿ ಇಡುವುದು ಕೂಡಾ ಅಶುಭವೆಂದು ಪರಿಗಣಿಸಲಾಗಿದೆ.
4,ಹಳೆಯ ಬೂಟುಗಳು ಮತ್ತು ಚಪ್ಪಲಿಗಳು-ನವರಾತ್ರಿಯ ಸಮಯದಲ್ಲಿ ಹಳೆಯ ಪಾದರಕ್ಷೆಗಳು ಅಥವಾ ಚಪ್ಪಲಿಗಳು, ಒಡೆದ ಗಾಜಿನ ಸಾಮಾನುಗಳನ್ನು ಮನೆಯಲ್ಲಿ ಇಡುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ. ಅವನ್ನು ಎಸೆಯಿರಿ. ಬಳಕೆಗೆ ಬಾರದ ಅವುಗಳ ಮೇಲೆ ಅನಗತ್ಯ ಮೋಹ ಬೇಡ.
5, ನಿಂತು ಹೋದ ಗಡಿಯಾರ-ನಿಂತು ಹೋದ ಗಡಿಯಾರ ದುರದೃಷ್ಟಕರ ಅಂತ ಹೇಳಲಾಗುತ್ತದೆ. ಹೀಗಾಗಿ ನವರಾತ್ರಿಯಲ್ಲಿ ತಾಯಿಯಾ ಆಗಮನದ ಮೊದಲು ಕೆಟ್ಟ ಗಡಿಯಾರವನ್ನು ಮನೆಯಿಂದ ಹೊರಗೆ ಹಾಕಬೇಕು.ಇಂತಹ ವಿಷಯಗಳು ವ್ಯಕ್ತಿಯಾ ಪ್ರಗತಿಯಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತದೆ.