ದೀಪಾವಳಿ ಲಕ್ಷ್ಮೀ ಪೂಜೆಯಂದೇ ಗೋಚರಿಸಲಿದೆ ಸೂರ್ಯ ಗ್ರಹಣ, ಹಾಗಿದ್ದರೆ ಪೂಜೆಯ ಮುಹೂರ್ತ ಯಾವಾಗ ?

ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದ ಅಮಾವಾಸ್ಯೆಯಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ದೀಪಾವಳಿ 24 ಅಕ್ಟೋಬರ್ 2022 ರಂದು ಬರುತ್ತದೆ. ಆದರೆ ಮಾರನೇ ದಿನ ಅಂದರೆ ಲಕ್ಷ್ಮೀ ಪೂಜೆಯ ದಿನವೇ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ.  ಈ ಹಿನ್ನೆಲೆಯಲ್ಲಿ ದೀಪಾವಳಿ  ಲಕ್ಷ್ಮೀ ಪೂಜೆ, ಗೋವರ್ಧನ ಪೂಜೆಯನ್ನು ಆ ದಿನ ಮಾಡಬಹುದೇ ? ಎನ್ನುವ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕ, ಅನುಮಾನ ಮೂಡುವುದು ಸಹಜ.  ಸೂರ್ಯಗ್ರಹಣದ ಕಾರಣದಿಂದ ದೀಪಾವಳಿಯ ಲಕ್ಷ್ಮೀ ಪೂಜೆ ಮತ್ತು ಗೋವರ್ಧನ ಪೂಜೆಯ ಮೇಲೆ ಏನು ಪರಿಣಾಮ ಬೀರುತ್ತದೆ? ಸೂತಕ ಅವಧಿಯು ಎಷ್ಟು ಕಾಲದವರೆಗೆ ಇರುತ್ತದೆ ಎನ್ನುವ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. 

ದೀಪಾವಳಿ 2022 ದಿನಾಂಕ :ದೀಪಾವಳಿಯನ್ನು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. 2022 ರಲ್ಲಿ, ಕಾರ್ತಿಕ ಮಾಸದ ಅಮಾವಾಸ್ಯೆ ದಿನಾಂಕವು ಅಕ್ಟೋಬರ್ 24 ರ ಸಂಜೆ 5:28 ರಿಂದ ಪ್ರಾರಂಭವಾಗಿ, ಅಕ್ಟೋಬರ್ 25 ರ ಸಂಜೆ 4:18 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ, ಅಕ್ಟೋಬರ್ 24 ರಂದು ದೀಪಾವಳಿಯನ್ನು ಆಚರಿಸುವುದು ಮಂಗಳಕರವಾಗಿರುತ್ತದೆ. ಅಕ್ಟೋಬರ್ 25 ರಂದು, 2022 ರ ಕೊನೆಯ ಸೂರ್ಯಗ್ರಹಣ ಸಂಭವಿಸುತ್ತಿದೆ.  

ಸೂರ್ಯಗ್ರಹಣ ಸೂತಕ ಕಾಲ:ಪಂಚಾಂಗದ ಪ್ರಕಾರ, ವರ್ಷದ ಕೊನೆಯ ಸೂರ್ಯಗ್ರಹಣವು ಅಕ್ಟೋಬರ್ 25, 2022 ರಂದು ಮಧ್ಯಾಹ್ನ 2:29 ಕ್ಕೆ ಸಂಭವಿಸುತ್ತದೆ. ಇದರ ಸೂತಕ ಅವಧಿಯು 12 ಗಂಟೆಗಳ ಮುಂಚಿತವಾಗಿ ಅಂದರೆ ಅಕ್ಟೋಬರ್ 24 ರ ಮಧ್ಯರಾತ್ರಿ 2.30 ಕ್ಕೆ ಪ್ರಾರಂಭವಾಗುತ್ತದೆ. ಈ ಸೂರ್ಯಗ್ರಹಣವು ಭಾರತದಲ್ಲಿ  ಗೋಚರಿಸುವುದಿಲ್ಲ. ಆ ದ್ದರಿಂದ, ಅದರ ಸೂತಕ ಅವಧಿಯು ಭಾರತದಲ್ಲಿ ಮಾನ್ಯವಾಗಿರುವುದಿಲ್ಲ. ಸೂರ್ಯಗ್ರಹಣದಿಂದ ದೀಪಾವಳಿಯ ಲಕ್ಷ್ಮೀ ಪೂಜೆಗೆ ಯಾವುದೇ ಅಡಚಣೆ ಉಂಟಾಗುವುದಿಲ್ಲ. ಹಾಗಾಗಿ ಮತ್ತು ಜನರು  ಅದೆ ದಿನ ಶಾಸ್ತ್ರ ಬದ್ಧವಾಗಿ ಪೂಜೆ ಮಾಡುವ ಮೂಲಕ ಹಬ್ಬ ಆಚರಿಸಲು ಯಾವುದೇ ರೀತಿಯ ಅಭ್ಯಂತರವಿಲ್ಲ. 

ಗೋವರ್ಧನ ಪೂಜೆಯ ಮೇಲೆ ಸೂರ್ಯಗ್ರಹಣದ ಪರಿಣಾಮ:ದೀಪಾವಳಿಯ ಮರುದಿನ ಗೋವರ್ಧನ ಪೂಜೆ ಕೂಡಾ ನಡೆಯುತ್ತದೆ. ಈ ದಿನ ಸೂರ್ಯಗ್ರಹಣ ಇರುತ್ತದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲವಾದ್ದರಿಂದ, ಭಾರತದಲ್ಲಿ ಗೋವರ್ಧನ ಪೂಜೆಯ ಹಬ್ಬವನ್ನು ಆಚರಿಸಲು ಯಾವುದೇ ತೊಂದರೆಯಾಗುವುದಿಲ್ಲ. 

Leave a Comment