ಶನಿ ದೇವನನ್ನು ನ್ಯಾಯದ ದೇವರು ಎಂದು ಪರಿಗಣಿಸಲಾಗಿದೆ. ಮನುಷ್ಯನಿಗೆ ಕರ್ಮಕ್ಕನುಗುಣವಾಗಿ ಶನಿದೇವ ಫಲವನ್ನು ನೀಡುತ್ತಾನೆ. ಅಕ್ಟೋಬರ್ 23ರಂದು ಅಂದರೆ ಭಾನುವಾರ ಬೆಳಗಿನ ಜಾವ 4:19ಕ್ಕೆ ಶನಿಯು ತನ್ನದೇ ಆದ ಮಕರ ರಾಶಿಯಲ್ಲಿ ಉದಯಿಸುತ್ತಾನೆ. ಶನಿ ಈ ರಾಶಿಯ ಅಧಿಪತಿ. ಶನಿದೇವರ ಈ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭವಾದರೆ, ಇನ್ನೂ ಕೆಲವು ರಾಶಿಗಳ ಮೇಲೆ ಕೆಟ್ಟ ಪರಿಣಾಮವಾಗುತ್ತದೆ. ಶನಿದೇವನು ಯಾವುದೇ ರಾಶಿಯವರಿಗೆ ದಯೆ ತೋರಿದರೆ ಅವರ ಜೀವನದಲ್ಲಿ ಸಾಕಷ್ಟು ಪ್ರಗತಿಯಾಗುತ್ತದೆ. ಎಲ್ಲೆಡೆಯಿಂದ ಅವರಿಗೆ ಶುಭ ಫಲಿತಾಂಶಗಳು ಬರಲು ಪ್ರಾರಂಭಿಸುತ್ತವೆ ಮತ್ತು ಬಹಳಷ್ಟು ಹಣವನ್ನು ಸಹ ಗಳಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಯಾವ ರಾಶಿಗಳ ಮೇಲೆ ಶನಿಯ ಉತ್ತಮ ಪರಿಣಾಮವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ.
ವೃಷಭ ರಾಶಿ: ವೃಷಭ ರಾಶಿಯ ಮೇಲೆ ಶನಿಯು ಪಥದಲ್ಲಿರುವುದರ ಪರಿಣಾಮವು ಉತ್ತಮವಾಗಿರುತ್ತದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ವಿತ್ತೀಯ ಲಾಭದಿಂದ ಆದಾಯದಲ್ಲಿ ಹೆಚ್ಚಳ ಕಂಡುಬರಲಿದೆ. ಕುಟುಂಬದಲ್ಲಿ ಗೌರವ ಹೆಚ್ಚಾಗುತ್ತದೆ. ಅದೇ ರೀತಿ ಉದ್ಯೋಗದಲ್ಲಿ ಬಡ್ತಿಯ ಅವಕಾಶಗಳು ಸಹ ಸಿಗುತ್ತವೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಶನಿಯು ಮಾರ್ಗದಲ್ಲಿ ಇರುವುದರಿಂದ ಶುಭ ಫಲಗಳು ದೊರೆಯುತ್ತವೆ. ಇದರಿಂದ ಅವರ ಮನಸ್ಸಿಗೆ ಸಂತೋಷವಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಪೂರ್ಣಗೊಳ್ಳಲಿವೆ. ಈ ರಾಶಿಯ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಕಾಣಬಹುದು. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ.
ಸಿಂಹ ರಾಶಿ: ಸಿಂಹ ರಾಶಿಯವರು ವಾಹನ ಮತ್ತು ಮನೆಯ ಸುಖವನ್ನು ಪಡೆಯಬಹುದು. ನೀವು ಬಹಳ ಸಮಯದಿಂದ ಯಾವುದಾದರೂ ಕೆಲಸ ಪ್ರಾರಭಿಸಲು ಯೋಜಿಸುತ್ತಿದ್ದರೆ ಅಥವಾ ಪೂರ್ಣಗೊಳಿಸಬಯಸಿದರೆ ಇದು ಅನುಕೂಲಕರ ಸಮಯ. ನೀವು ಪೋಷಕರಿಂದ ಆರ್ಥಿಕ ಸಹಾಯ ಪಡೆಯುತ್ತೀರಿ. ನೀವು ಮಕ್ಕಳ ಸಂತೋಷವನ್ನು ಪಡೆಯಬಹುದು. ಉದ್ಯೋಗಿಗಳಿಗೂ ಇದು ಉತ್ತಮ ಸಮಯವಾಗಿರುತ್ತದೆ.
ತುಲಾ ರಾಶಿ: ನಿಮಗೆ ಕಚೇರಿ ಅಥವಾ ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ಉದ್ಯಮಿಗಳಿಗೆ ಇದು ಉತ್ತಮ ಸಮಯ. ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಸ್ನೇಹಿತರ ಬೆಂಬಲ ಸಿಗುತ್ತದೆ ಮತ್ತು ಆದಾಯ ಹೆಚ್ಚಾಗುತ್ತದೆ. ನೀವು ಸಾಲದ ಸಮಸ್ಯೆಯಿಂದ ಮುಕ್ತರಾಗುತ್ತೀರಿ.
ಮಕರ ರಾಶಿ: ಉದ್ಯೋಗದಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಜೀವನ ಮಧುರವಾಗಿ ಉಳಿಯುತ್ತದೆ. ಮಗುವಿನ ಕಡೆಯಿಂದ ಒಳ್ಳೆಯ ಸುದ್ದಿ ಬರಬಹುದು. ಆಸ್ತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಯೂ ಇದೆ. ಕೆಲಸದ ಸ್ಥಳದಲ್ಲಿ ಅಧಿಕಾರಿಗಳ ಸಹಕಾರವಿರುತ್ತದೆ. ನೀವು ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತರಾಗುತ್ತೀರಿ.
ಮೀನ ರಾಶಿ: ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು. ನಿಮಗೆ ಸಂಗಾತಿಯ ಬೆಂಬಲ ಸಿಗಲಿದೆ. ಇದರಿಂದಾಗಿ ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಧನ ಲಾಭವಾಗುತ್ತದೆ. ನೀವು ಯಾವುದೇ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಲಾಭವಾಗಲಿದೆ.