ಮಂಗಳ ಗ್ರಹನನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಮಂಗಳನ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಅಕ್ಟೋಬರ್ 16 2022 ರಂದು ಮಧ್ಯಾಹ್ನ 12:04 ಕ್ಕೆ ಮಂಗಳ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸಿತ್ತು. ಇನ್ನೂ ಮೂರು ದಿನಗಳ ಕಾಲ ಅಂದರೆ ನವೆಂಬರ್ 13ರವರೆಗೆ ಮಂಗಳ ಮಿಥುನ ರಾಶಿಯಲ್ಲಿಯೇ ಇರಲಿದ್ದಾನೆ. ಹೀಗಾಗಿ ಈ ಮೂರೂ ದಿನಗಳು ಕೆಳಗಿನ ಐದು ರಾಶಿಯವರಿಗೆ ಭಾರೀ ಅದೃಷ್ಟ ತರಲಿದೆ. ಒಂದರ್ಥದಲ್ಲಿ ಈ ಮೂರೂ ದಿನ ಐದು ರಾಶಿಯವರ ಪಾಲಿಗೆ ವರದಾನವಿದ್ದಂತೆ.
ಮೇಷ ರಾಶಿ- ಮೇಷ ರಾಶಿಯ ಮೂರನೇ ಮನೆಯಲ್ಲಿ ಮಂಗಳವು ಸಾಗಿತ್ತು. ಹೀಗಿರುವಾಗ ಉದ್ಯೋಗಿಗಳಿಗೆ ಬಡ್ತಿಯ ಅವಕಾಶಗಳಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯವೆನದು ಸಾಬೀತಾಗಲಿದೆ. ಸಹೋದರ ಸಹೋದರಿಯರ ಬೆಂಬಲ ಸಿಗಲಿದೆ.
ಸಿಂಹ ರಾಶಿ- ಮಂಗಳವು ಸಿಂಹ ರಾಶಿಯ ಹನ್ನೊಂದನೇ ಮನೆಗೆ ಪ್ರವೇಶಿಸಿತ್ತು.ಈ ಸಮಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸದೃಢವಾಗಿರಲಿದೆ. ಹೂಡಿಕೆಯಿಂದ ಲಾಭವಾಗಲಿದೆ. ಆಸ್ತಿಯಲ್ಲಿ ಹೂಡಿಕೆಗೆ ಅವಕಾಶವಿರುತ್ತದೆ. ವಾಹನ ಖರೀದಿ ಯೋಗ ಇರಲಿದೆ.
ಕನ್ಯಾರಾಶಿ – ಕನ್ಯಾರಾಶಿಯ ಹತ್ತನೇ ಮನೆಯಲ್ಲಿ ಮಂಗಳ ಗ್ರಹ ಸಾಗಿತ್ತು. ಮುಂಬರುವ ಮೂರು ದಿನಗಳಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಕೆಲಸದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಪ್ರತಿಷ್ಠೆ ಹೆಚ್ಚಾಗಲಿದೆ.
ಮಕರ ರಾಶಿ – ಮಂಗಳ ಗ್ರಹ ಮಕರ ರಾಶಿಯ ಆರನೇ ಮನೆಯನ್ನು ಪ್ರವೇಶಿಸಿದೆ. ಮುಂದಿನ ಮೂರು ದಿನಗಳಲ್ಲಿ ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ಉದ್ಯೋಗದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಉತ್ತಮ ಸಮಯ.
ಮೀನ ರಾಶಿ – ಮಂಗಳನು ಮೀನ ರಾಶಿಯ ನಾಲ್ಕನೇ ಮನೆಗೆ ಕಾಲಿಟ್ಟಿದೆ. ಈ ಸಮಯದಲ್ಲಿ ಹಠಾತ್ ಆರ್ಥಿಕ ಲಾಭವಾಗಬಹುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಕೂಡಾ ಯಶಸ್ವಿಯಾಗಲಿದ್ದಾರೆ.