ಒಬ್ಬ ವ್ಯಕ್ತಿಯಲ್ಲಿ ಒಮ್ಮೆ ಮಧುಮೇಹ ಕಾಣಿಸಿಕೊಂಡರೆ, ಜೀವನ ಪರ್ಯಂತ ಅದು ಬೆನ್ನು ಬಿಡುವುದಿಲ್ಲ. ಪ್ಈರತಿ ದಿನ ಮಾತ್ರೆ ತಪ್ಪಿಸುವಂತಿಲ್ಲ. ಆಹಾರ ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಅಗತ್ಯವಾಗಿರುತ್ತದೆ. ಈ ರೋಗ ನಾನಾ ಕಾರಣಗಳಿಂದ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಅನುವಂಶಿಕ ಕಾರಣವೂ ಒಂದು. ಮಧುಮೇಹ ಸಾಮಾನ್ಯವಾಗಿ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಲೇ ಬರುತ್ತದೆ. ಈ ರೋಗ ಬಂತೆಂದರೆ ವಿಪರೀತ ಕಾಳಜಿ ವಹಿಸಬೇಕಾಗುತ್ತದೆ. ಇಲ್ಲವಾದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಕ್ಕೆಪುವ ಅಪಾಯವಿರುತ್ತದೆ. ಒಂದು ವೇಳೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರದಿದ್ದರೆ ಕಿಡ್ನಿ ರೋಗ, ಹೃದಯಾಘಾತ ಹೀಗೆ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಂದು ಮನೆಮದ್ದುಗಳ ಸೇವನೆ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು.
ಈ 4 ಎಲೆಗಳು ಮಧುಮೇಹದಲ್ಲಿ ಪರಿಣಾಮಕಾರಿ :1. ಅಶ್ವಗಂಧ -ಅಶ್ವಗಂಧವನ್ನು ಆಯುರ್ವೇದದ ನಿಧಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಇದು ಅನೇಕ ರೋಗಗಳಲ್ಲಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಎಲೆಗಳು ಮತ್ತು ಬೇರಿನ ಸಹಾಯದಿಂದ ಮಧುಮೇಹದ ಪರಿಣಾಮಗಳನ್ನು ನಿಯಂತ್ರಿಸಬಹುದು.
2. ಬೇವಿನ ಎಲೆಗಳು-ಬೇವಿನ ಎಲೆಗಳ ಔಷಧೀಯ ಬಳಕೆ ಅತಿ ಹೆಚ್ಚು. ಇದು ಮಧುಮೇಹದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಹೈಪರ್ಗ್ಲೈಸೆಮಿಕ್ ಆಗಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಬಹುದು.
3. ಅಮೃತ ಬಳ್ಳಿ -ಅಮೃತ ಬಳ್ಳಿ ಎಲೆಗಳು ಮಧುಮೇಹ ರೋಗಿಗಳಿಗೆ ಸಂಜೀವಿನಿ ಇದ್ದಂತೆ. ಇದು ಹೈಪರ್ಗ್ಲೈಸೆಮಿಕ್ ಆಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
4. ನುಗ್ಗೆ ಸೊಪ್ಪು : -ನುಗ್ಗೆ ಸೊಪ್ಪಿನಲ್ಲಿ ಅನೇಕ ಪೋಷಕಾಂಶಗಳು ಕಂಡುಬರುತ್ತವೆ. ಅಲ್ಲದೆ ಇದು ಮಧುಮೇಹ ವಿರೋಧಿ ಗುಣಗಳಲ್ಲಿ ಸಮೃದ್ಧವಾಗಿದೆ. ಮಧುಮೇಹಿಗಳು ಇದನ್ನು ಹೆಚ್ಚಾಗಿ ತಿನ್ನಬೇಕು ಎಂದು ಹೇಳಲಾಗುತ್ತದೆ. ಇದು ಮಧುಮೇಹ ರೋಗಿಗಳಿಗೆ ಇನ್ಸುಲಿನ್ನಂತೆ ಕಾರ್ಯನಿರ್ವಹಿಸುತ್ತದೆ.