ಈ 5 ಧಾನ್ಯಗಳನ್ನು ತಿಂದರೆ ಈ ಜನ್ಮದಲ್ಲಿ ಕಾಯಿಲೆ ಬರೋಲ್ಲ!

ಮನುಷ್ಯ ಅಂದ ಮೇಲೆ ಕಾಯಿಲೆ ಬಂದೆ ಬರುತ್ತದೆ. ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತೇವೆ. ಇಷ್ಟೆಲ್ಲಾ ಮಾಡೋ ಬದಲು ನಿಮ್ಮ ಹತ್ತಿರ ಇರೋ ದಿನಸಿ ಅಂಗಡಿಗೆ ಹೋಗಿ ಕೆಳಗೆ ತಿಳಿಸಿರೋ ಸಿರಿಧಾನ್ಯಗಳನ್ನ ತೊಗೊಂಡ್ ಬಂದು ತಿಂದ್ರೆ ತುಂಬಾ ಆರೋಗ್ಯವಾಗಿರುತ್ತೀರಿ.

ರುಚಿರುಚಿಯಾದ ಬಿಸಿಬೇಳೆಬಾತ್, ಪಲಾವ್, ಇಡ್ಲಿ, ದೋಸೆ, ನಿಪ್ಪಟ್ಟು, ಚಕ್ಕುಲಿ, ಉಪ್ಪಿಟ್ಟು, ರೊಟ್ಟಿ, ಪೊಂಗಲ್ ಎಲ್ಲಾ ಮಾಡ್ಕೊಂಡು ತಿಂದ್ರೆ ಅಕ್ಕಿ, ಗೋಧಿಗಿಂತ ಹೆಚ್ಚು ಕ್ಯಾಲ್ಶಿಯಂ, ಐರನ್ ಮತ್ತು ಫಾಸ್ಫರಸ್ ಮತ್ತು ಮ್ಯಾಂಗನೀಸ್ ಅಂಶ ಈ ಕೆಳಗಿನ ಧಾನ್ಯಗಳಿಂದ ಸಿಗತ್ತಂತೆ.

ಭಾರತದ ಅತೀ ಹೆಚ್ಚು ಆಯಸ್ಸು ಮತ್ತು ಅರೋಗ್ಯ ಇರೋರು ಹಿಮಾಲಯದ ತಪ್ಪಲಲ್ಲಿ ವಾಸಿಸುವ “ಹುಂಝ” ಜನಾಂಗದವರು. ಇದೇ ಸಿರಿಧಾನ್ಯಗಳನ್ನ (ಮಿಲ್ಲೆಟ್ಸ್) ದಿನಾ ತಿಂತಾರೆ.ಭಾರತದ ಅತೀ ಹೆಚ್ಚು ಆಯಸ್ಸು ಮತ್ತು ಅರೋಗ್ಯ ಇರೋರು ಹಿಮಾಲಯದ ತಪ್ಪಲಲ್ಲಿ ವಾಸಿಸುವ “ಹುಂಝ” ಜನಾಂಗದವರು. ಇದೇ ಸಿರಿಧಾನ್ಯಗಳನ್ನ (ಮಿಲ್ಲೆಟ್ಸ್) ದಿನಾ ತಿಂತಾರೆ.

ತೆಳು ಹಳದಿ ಬಣ್ಣದ ನವಣೆ ಅಕ್ಕಿ ಶರೀರದ ನರನಾಡಿಗಳಿಗೆ ಹುರುಪು ಕೊಡತ್ತೆ :-ಸರ್ವಜ್ಞ ತನ್ನ ತ್ರಿಪದಿಯಲ್ಲಿ ಇದನ್ನ ಕೊಂಡಾಡಿದ್ದಾನೆ. ಮುಷ್ಟಿ ರೋಗ ತಡೆಗಟ್ಟತ್ತೆ. ಗರ್ಭಿಣಿಯರಿಗೆ ಒಳ್ಳೆಯದು. ಅಂಗಾಂಗಗಳ ಯಾವುದೇ ನೋವು ಕಡಿಮೆಯಾಗತ್ತೆ. ಬಾಣಂತಿಯರು 1 ವರ್ಷ ತಿನ್ನೋ ಹಾಗಿಲ್ಲ.

ಮಾಸಲು ಬಿಳಿ ಬಣ್ಣದ ಸಾಮೆ ಅಕ್ಕಿ ಸಂತಾನೋತ್ಪತ್ತಿಯ ತೊಂದರೆಗಳನ್ನು ಸರಿಪಡಿಸತ್ತೆ :-ಹೆಣ್ಣು ಮಕ್ಕಳಲ್ಲಿ ಅಂಡಾಶಯದ ತೊಂದರೆಯನ್ನ ಸರಿಪಡ್ಸತ್ತೆ. ಗಂಡು ಮಕ್ಕಳಲ್ಲಿ ವೀರ್ಯಾಣುಗಳ ಕೊರತೆಯನ್ನ ನೀಗಿಸತ್ತೆ.ನಸುಗೆಂಪು ಬಣ್ಣದ ಆರ್ಕ ಅಕ್ಕಿ ದೇಹದಲ್ಲಿನ ರಕ್ತನ ಶುದ್ಧಿ ಮಾಡತ್ತೆ :-ರಕ್ತ ಶುದ್ಧಿಯಾದರೆ ಯಾವ ರೋಗವೂ ಹತ್ರ ಬರಲ್ಲ.ಬಿಳಿ ಬಣ್ಣದ ಊದಲು ಅಕ್ಕಿ ಲಿವರ್ನ ಶುದ್ಧಿ ಮಾಡತ್ತೆ :-ಸಕ್ಕರೆ ಖಾಯಿಲೆಗೆ ಹೇಳಿ ಮಾಡಿಸಿದ ಪ್ರಕೃತಿಯ ಔಷಧಿ.

ತಿಳಿ ಹಸಿರು ಬಣ್ಣದ ಕೊರಲೆ ಅಕ್ಕಿ ಪಚನಾಂಗಗಳ ಕಾರ್ಯ ದಕ್ಷತೆಯನ್ನ ಹೆಚ್ಚಿಸುತ್ತದೆ :-ಅತಿ ಹೆಚ್ಚು ನಾರಿನಂಶ ಇರತ್ತೆ. ಬೆಳಗ್ಗೆ ಎದ್ರೆ ಸಲೀಸಾಗಿ ಕಕಸ್ಸು ಆಗತ್ತೆ!ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ, ರಾತ್ರಿ ಊಟ ಅಂತ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡ್ತೀವಿ. ಅಂದ್ರೆ ವಾರದಲ್ಲಿ 21 ಬಾರಿ ತಿಂತೀವಿ. ಅದ್ರಲ್ಲಿ 15 ಬಾರಿ ತಿನ್ನೋ ಆಹಾರದಲ್ಲಿ ಈ ಸಿರಿ/ಕಿರುಧಾನ್ಯಗಳನ್ನು ಅಳವಡಿಸಿಕೊಳ್ಳಿ. ಇನ್ನು 6 ಬಾರಿ ಅಕ್ಕಿ, ಗೋಧಿ ಅಥವಾ ರಾಗಿಯ ಪದಾರ್ಥ ತಿನ್ನುವುದರಿಂದ ಯಾವ ರೋಗವೂ ನಿಮ್ಮ ಹತ್ತಿರ ಸುಳಿಯಲ್ಲ.

Leave a Comment