ಬಾಳೆಹಣ್ಣು ಮನುಷ್ಯನ ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುವಂತ ಹಲವು ವಿಶೇಷ ಗುಣಗಳನ್ನು ಹೊಂದಿದೆ. ಬಾಳೆಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಸಿಗುವ ಆರೋಗ್ಯಕಾರಿ ಲಾಭಗಳೇನು ಅನ್ನೋದನ್ನ ತಿಳಿಯುವುದಾದರೆ ಇದರಲ್ಲಿ ಪ್ರೊಟೀನ್ ಅಂಶವಿದೆ ಹಾಗೂ ದೇಹವನ್ನು ಬೆಳವಣಿಗೆ ಮಾಡುವಂತ ಹಾರ್ಮೋನ್ ಬೆಳವಣಿಗೆ ಪೂರಕವಾಗಿವೆ. ಬಾಳೆಹಣ್ಣು ಅಷ್ಟೇ ಅಲ್ಲದೆ ಇದರ ಸಿಪ್ಪೆಯು ಕೂಡ ಸೌಂದರ್ಯವನ್ನು ವೃದ್ಧಿಸುವಂತ ವಿಶೇಷ ಗುಣಗಳನ್ನು ಹೊಂದಿದೆ.
ವಿಷ್ಯಕ್ಕೆ ಬರೋಣ ಪ್ರತಿದಿನ ಬಾಳೆಹಣ್ಣು ಸೇವನೆಯಿಂದ ಎಷ್ಟೆಲ್ಲ ಲಾಭವಿದೆ ಅನ್ನೋದಾದರೆ ಈ ಹಣ್ಣಿನಲ್ಲಿ ವಿಟಮನ್ ಅಂಶವಿರುವುದರಿಂದ ಹಾಗೂ ಪ್ರೊಟೀನ್ ಲಭ್ಯವಿರುವ ಕಾರಣಕ್ಕೆ ಮೆದುಳಿನ ಆರೋಗ್ಯಕ್ಕೆ ಉತ್ತಮ ಹಣ್ಣಾಗಿದೆ ಇನ್ನು ದೇಹದ ಬೆಳವಣಿಗೆಗೆ ಹಾಗೂ ದೇಹವನ್ನು ಉತ್ತಮ ರೀತಿಯಲ್ಲಿ ಬೆಳೆಯಲು ಸಹಕಾರಿಯಾಗುವಂತ ಸ್ನಾಯುಗಳ ಬೆಳವಣಿಗೆಗೆ ಹೆಚ್ಚು ಪೂರಕವಾಗಿದೆ. ರಕ್ತದೊತ್ತಡ ನಿವಾರಿಸುತ್ತದೆ ಹಾಗೂ ದೇಹದಲ್ಲಿನ ರಕ್ತಸಂಚಲನವನ್ನು ಹೆಚ್ಚಿಸುತ್ತದೆ.
ಕೆಲವರಲ್ಲಿ ಕಂಡುಬರುವಂತ ಅಲ್ಸರ್ ಸಮಸ್ಯೆಗೆ ಬಾಳೆಹಣ್ಣು ಉತ್ತಮ ಉಪಯೋಗಕಾರಿಯಾಗಿದೆ, ಅಷ್ಟೇ ಅಲ್ದೆ ವಿಟಮಿನ್ ಬಿ ಅಂಶವನ್ನು ಹೊಂದಿರುವಂತ ಬಾಳೆಹಣ್ಣು ನರ ರೋಗಗಳನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಪ್ರತಿದಿನ ಬಾಳೆಹಣ್ಣು ಸೇವನೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುವುದು. ಹಾಗೂ ದೇಹವನ್ನು ಪೌಷ್ಟಿಕಾಂಶ ಭರಿತವಾಗಿ ಬೆಳೆಯಲು ಬಾಳೆಹಣ್ಣು ಸಹಕಾರಿಯಾಗಿದೆ.