ಪೂಜೆ ಮಾಡುವಾಗ ಗಂಟೆ ಬಾರಿಸುವ ಕಾರಣ ಏನು ಗೊತ್ತಾ?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಯಾರೇ ಆಗಲಿ ಮನೆಯಲ್ಲಾಗಲಿ ಅಥವಾ ದೇವಸ್ಥಾನದಲ್ಲಿ ಆಗಲಿ ಪೂಜೆಯನ್ನು ಆರಂಭ ಮಾಡಿದ್ದಾರೆ ಎಂದರೆ ಗಂಟೆ ನಾದದಿಂದಲೇ ಪೂಜೆ ಆರಂಭವಾಗುತ್ತದೆ ಪೂಜೆ ಮಾಡುವಾಗ ಪ್ರತಿಯೊಬ್ಬರು ಗಂಟೆಯನ್ನು ಬಾರಿಸಿ ಪೂಜೆಯನ್ನು ಆರಂಭ ಮಾಡುತ್ತಾರೆ ಆಮೇಲೆ ಮಂಗಳಾರತಿ ಮಾಡುವಾಗಲೂ ಕೂಡ ಪೂಜೆಯನ್ನು ಮಾಡುತ್ತಾರೆ ಸಾಮಾನ್ಯವಾಗಿ ಭಕ್ತಾದಿಗಳು ದೇವಸ್ಥಾನಕ್ಕೆ ಹೋದಾಗ ಗಂಟೆಯನ್ನು ಬಾರಿಸಿ ಭಗವಂತನಿಗೆ ನಮಸ್ಕಾರ ಮಾಡುತ್ತಾರೆ ಗಂಟೆಯನ್ನು ಬಾರಿಸುವುದರಿಂದ ಸಾಕಷ್ಟು ಉತ್ತಮವಾದಂತಹ ಕಂಪನಗಳು ಏರ್ಪಡುವುದರಿಂದ ಆರೋಗ್ಯ ದೃಷ್ಟಿಯಿಂದ ಅದು ಬಹಳ ಉತ್ತಮ ಎಂದು ಹೇಳಬಹುದು ಅದರ ಹಿಂದೆ ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿವೆ,

ಗಂಟೆಯನ್ನು ಬಾರಿಸಿದಾಗ ಅದರ ಧ್ವನಿಯ ಜೊತೆಗೆ ದೊಡ್ಡ ಕಂಪನ ಉಂಟಾಗುತ್ತದೆ ಈ ಕಂಪನಗಳು ನಮ್ಮ ಸುತ್ತ ಬಹಳಷ್ಟು ದೂರ ಅದು ಸರಿದು ಹೋಗುತ್ತದೆ ಇದರ ಪ್ರಯೋಜನ ಏನಪ್ಪಾ ಎಂದರೆ ಅನೇಕ ರೀತಿಯ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಸುತ್ತಲಿನ ಪರಿಸರ ಶುದ್ಧವಾಗುತ್ತದೆ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶವು ಅತ್ಯಂತ ಪರಿಶುದ್ಧವಾಗಿ ಮತ್ತು ಪವಿತ್ರವಾಗಿರುತ್ತದೆ ಮುಖ್ಯವಾಗಿ ಇನ್ನು ಧಾರ್ಮಿಕ ಕಾರಣ ಏನಪ್ಪಾ ಎಂದರೆ ದೇವಾಲಯವನ್ನು ಪ್ರವೇಶಮಾಡಿದಾಗ ದೇವಾಲಯದಲ್ಲಿರುವ ದೇವರ ಅನುಮತಿಯನ್ನು ಪಡೆಯಲು ಅಥವಾ ನಾವು ಭಗವಂತನ ಚಿತ್ತವನ್ನು ನಮ್ಮ ಕಡೆ ಸೆಳೆಯಲು ಗಂಟೆಯನ್ನು ಬಾರಿಸುತ್ತೇವೆ ಎಂದು ಹೇಳುತ್ತಾರೆ

ಹಿರಿಯರು ಹಲವು ಬಾರಿ ದೇವಸ್ಥಾನದಲ್ಲಿ ದೇವತೆಗಳು ಸೂಕ್ತ ಸ್ಥಿತಿಯಲ್ಲಿ ಇರುತ್ತಾರಂತೆ ಅಂತಹ ಸಂದರ್ಭದಲ್ಲಿ ಮೊದಲು ಗಂಟೆಯನ್ನು ಬಾರಿಸಿ ಅವರನ್ನು ಎಬ್ಬಿಸಿ ನಂತರ ಪೂಜೆಯನ್ನು ಮಾಡಬೇಕು ಎಂದು ಹಿರಿಯರು ಹೇಳುವುದುಂಟು ದೇವತೆಗಳ ಸಂತೋಷಕ್ಕಾಗಿ ಕೂಡ ಗಂಟೆಗಳು ಮೊಳಗುತ್ತವೆ ಅದೇನೇ ಇದ್ದರೂ ಕೂಡ ದೇವತೆಗಳು ಗಂಟೆ ಶಬ್ದದಿಂದ ಸಂತುಷ್ಟರಾಗಿ ಭಕ್ತರನ್ನು ತಮ್ಮ ಅನುಗ್ರಹದಿಂದ ಪೊರೆಯುತ್ತಾರೆ ಎಂದು ಹೇಳುತ್ತಾರೆ ಗಂಟೆಗಳಿಗೆ ಸ್ವಲ್ಪ ಸಮಯ ನಿಂತು ಗಂಟ ಶಬ್ದವನ್ನು ಆನಂದಿಸಿದರೆ ಅದರ ಆನಂದವೇ ಬೇರೆಯಾಗಿರುತ್ತದೆ ಗಂಟೆ ಶಬ್ದದಿಂದ ಚಿಂತೆ ದೂರವಾಗುತ್ತದೆ ಮತ್ತು ಮನಸ್ಸು ಪ್ರಶಾಂತವಾಗುತ್ತದೆ ಹಾಗೂ ಪುಳಕಿತವಾಗುತ್ತದೆ ಗಂಟೆ ಶಬ್ದ ಸಂತೋಷಕ್ಕೆ ನಾಂದಿ ಹಾಡುತ್ತದೆ

Leave a Comment