Kaal Sarp Dosh: ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಹೆದರಬೇಡಿ, ಊಹೆಗೂ ಮೀರಿ ಲಾಭ ನಿಮ್ಮದಾಗುತ್ತದೆ

Kaal Sarp Dosh Benefits: ಜೋತಿಷ್ಯ ಶಾಸ್ತ್ರದ ಪ್ರಾಚೀನ ಗ್ರಂಥಗಳಲ್ಲಿ ಕಾಲಸರ್ಪ ದೋಷದ ಯಾವುದೇ ಉಲ್ಲೇಖವಿಲ್ಲ. ಕಳೆದ ಸುಮಾರು 100 ವರ್ಷಗಳಲ್ಲಿ ಇದು ಪ್ರಚಲಿತದಲ್ಲಿ ಬಂದಿದೆ. ಈ ಯೋಗದ ಕಾರಣ ವ್ಯಕ್ತಿಯ ಜೀವನದಲ್ಲಿ ಅನಾವಶ್ಯಕವಾಗಿ ಕೆಲ ಶಾರೀರಿಕ ಹಾಗೂ ಮಾನಸಿಕ ಪೀಡೆಗಳು ಎದುರಾಗುತ್ತವೆ ಎನ್ನಲಾಗುತ್ತದೆ. ಈ ಯೋಗದ ವಿಪರೀತ ಸ್ಥಿತಿಯ ಕಾರಣ ವ್ಯಕ್ತಿಗೆ ಜೀವನದಲ್ಲಿ ಎಲ್ಲಾ ರೀತಿಯ ಪರಿಶ್ರಮದ ಹೊರತಾಗಿಯೂ ಕೂಡ ಅನೇಕ ದುಃಖಗಳು ಎದುರಾಗುತ್ತವೆ. ಆದರೆ, ಒಂದು ವೇಳೆ ವ್ಯಕ್ತಿಯ ಜಾತಕದಲ್ಲಿ ರಾಹುವಿನ ಸ್ಥಿತಿ ಅನುಕೂಲಕರವಾಗಿದ್ದರೆ, ಕಾಲಸರ್ಪ ದೋಷ ವ್ಯಕ್ತಿಗೆ ಊಹೆಗೂ ಮೀರಿ ಯಶಸ್ಸನ್ನು ನೀಡುತ್ತದೆ ಎನ್ನಲಾಗುತ್ತದೆ.

ಈ ಗಣ್ಯರ ಜಾತಕದಲ್ಲಿದೆ ಕಾಲಸರ್ಪ ದೋಷ
ಕಾಲ್ ಸರ್ಪ್ ದೋಷವು ವ್ಯಕ್ತಿಯಲ್ಲಿ ಅನ್ಯಾಯದ ವಿರುದ್ಧ ಹೋರಾಡಲು ಚೈತನ್ಯ, ಶಕ್ತಿ ಮತ್ತು ಅದಮ್ಯ ಸಾಹಸವನ್ನುನೀಡುತ್ತದೆ. ಈ ಯೋಗವು ಆಧ್ಯಾತ್ಮಿಕ ಮಹಾಪುರುಷರಿಗೆ ಮತ್ತು ರಾಜಕೀಯದಲ್ಲಿ ಎತ್ತರಕ್ಕೆ ತಲುಪಿದ ಜನರಿಗೆ ವಿಶೇಷ ಜನಪ್ರಿಯತೆಯನ್ನು ನೀಡುತ್ತದೆ. ಈ ಯೋಗದ ಜನರು ಜೀವನದ ವಿವಿಧ ಕ್ಷೇತ್ರಗಳಲ್ಲಿ ಪರಾಕಾಷ್ಠೆಯನ್ನು ತಲುಪಿದ್ದಾರೆ. ಉದಾಹರಣೆಗೆ – ವ್ಯಾಪಾರ, ಕಲೆ, ಸಾಹಿತ್ಯ, ಕ್ರೀಡೆ, ಚಲನಚಿತ್ರ ಉದ್ಯಮ, ರಾಜಕೀಯ ಮತ್ತು ಆಧ್ಯಾತ್ಮಿಕತೆ ಇತ್ಯಾದಿ. ಈ ಯೋಗವು ಗೌತಮ ಬುದ್ಧ, ಆಚಾರ್ಯ ಶ್ರೀರಾಮ ಶರ್ಮ, ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ, ಓಶೋ ರಜನೀಶ್ ಮತ್ತು ಕಥೆಗಾರ ಮುರಾರಿ ಬಾಪು ಅವರಂತಹ ವ್ಯಕ್ತಿಗಳನ್ನು ಆಧ್ಯಾತ್ಮಿಕತೆಯ ಉತ್ತುಂಗಕ್ಕೆ ತಂದರೆ, ಚಕ್ರವರ್ತಿ ಹರ್ಷವರ್ಧನ್, ಅಕ್ಬರ್, ಷಹಜಹಾನ್, ರಾಣಿ ವಿಕ್ಟೋರಿಯಾ, ರಾಣಿ ಎಲಿಜಬೆತ್ ಮುಂತಾದವರಿಗೆ ಮುನ್ನಡೆಯುವ ಶಕ್ತಿಯನ್ನು ನೀಡಿದೆ. ಈ ಯೋಗವು ಅಬ್ರಹಾಂ ಲಿಂಕನ್, ಜವಾಹರಲಾಲ್ ನೆಹರು, ಸರ್ದಾರ್ ಪಟೇಲ್, ಗುಲ್ಜಾರಿಲಾಲ್ ನಂದಾ, ಚಂದ್ರಶೇಖರ್, ಐ.ಕೆ.ಗುಜ್ರಾಲ್ ಮುಂತಾದವರನ್ನು ರಾಜಕೀಯದ ಉತ್ತುಂಗದಲ್ಲಿ ಪ್ರತಿಷ್ಠಾಪಿಸಿದೆ. ಅಮೃತಾ ಪ್ರೀತಮ್, ಮಧುಬಾಲಾ, ಲತಾ ಮಂಗೇಶ್ಕರ್, ಸತ್ಯಜಿತ್ ರೇ, ಹೃಷಿಕೇಶ್ ಮುಖರ್ಜಿ, ಧೀರೂಭಾಯಿ ಅಂಬಾನಿ, ಗೋವಿಂದ, ಸಚಿನ್ ತೆಂಡೂಲ್ಕರ್ ಮುಂತಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದಿದ್ದಾರೆ. ಅಷ್ಟ ಅಲ್ಲ ಸ್ವತಂತ್ರ ಭಾರತವೂ 1947ರ ಆಗಸ್ಟ್ 15ರಂದು ಕಾಲಸರ್ಪ ಯೋಗದಲ್ಲಿ ಜನ್ಮ ಪಡೆದಿದೆ ಎಂದು ಹೇಳಿದರೆ ನಿಮಗೂ ಕೂಡ ಆಶ್ಚರ್ಯವಾಗಬಹುದು.

ಇದನ್ನೂ ಓದಿ-Nag Panchami 2022: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

ಕಾಲಸರ್ಪ ಯೋಗಕ್ಕೆ ಹೆದರುವ ಅವಶ್ಯಕತೆ ಇಲ್ಲ 
ಹೀಗಾಗಿ ಕಾಲಸರ್ಪ ದೋಷವಿರುವ ಜನರು ಹೆಚ್ಚಿಗೆ ಹೆದರಬೇಕಾದ ಅವಶ್ಯಕತೆ ಇಲ್ಲ.  ಕಾಲಸರ್ಪ ಯೋಗದಿಂದ ಬಳಲುತ್ತಿರುವ ಜನರು ಅದೃಷ್ಟವಂತರು ಮತ್ತು ಅಸಾಧಾರಣ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂಬುದು ಅನುಭವದ ಆಧಾರದ ಮೇಲೆ ಹೇಳಬಹುದು. ಇವರಲ್ಲಿ ಅಪಾರ ಚೈತನ್ಯ ತುಂಬಿರುತ್ತದೆ ಮತ್ತು ಅನ್ಯಾಯದ ವಿರುದ್ಧ ಹೋರಾಡುವ ಅಪಾರ ಸಾಮರ್ಥ್ಯವನ್ನು ಇವರು ಹೊಂದಿರುತ್ತಾರೆ. ಕಾಲ ಸರ್ಪ ಯೋಗದಲ್ಲಿ ಸ್ವರಾಶಿ, ಶ್ರೇಷ್ಠ ಗುರು, ಗಜಕೇಸರಿ ಯೋಗ ಮತ್ತು ರಾಹುವಿನ ಉತ್ತಮ ಸ್ಥಾನವು ವಿಶೇಷ ಲಾಭವನ್ನು ನೀಡುತ್ತದೆ.

ಇದನ್ನೂ ಓದಿ-Shani Dev Ashubh Sanket: ನಿಮ್ಮ ಮೇಲೆ ಶನಿ ವಕ್ರದೃಷ್ಟಿ ಬೀರಿದ್ದಾನೆ ಎನ್ನುತ್ತವೆ ಈ 6 ಸಂಕೇತಗಳು, ಈ ಉಪಾಯ ಅನುಸರಿಸಿ

ಕಾಲಸರ್ಪ ಯೋಗ ನಿಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ
ಶಿವನನ್ನು ಆರಾಧಿಸುವ ಮೂಲಕ, ದೋಷವನ್ನು ಶಮನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರ ಮೂಲಕ ಮತ್ತು ನವನಾಗ್ ಸ್ತೋತ್ರವನ್ನು ನಿರಂತರವಾಗಿ ಪಠಿಸುವ ಮೂಲಕ ನೀವು ನಿಮ್ಮ ಜಾತಕದಲ್ಲಿನ ಕಾಲ ಸರ್ಪ್ ಯೋಗವನ್ನು ಅನುಕೂಲಕರವಾಗಿ ಮಾಡಬಹುದು.  ಕಾಲ್ ಸರ್ಪ್ ಯೋಗವು ಭಯವನ್ನು ಹುಟ್ಟಿಸುವ ಮತ್ತು ನಿರುತ್ಸಾಹಗೊಳ್ಳುವ ಯೋಗವಲ್ಲ, ಆದರೆ ಅದು ಜೀವಂತಿಕೆ ಮತ್ತು ಹೋರಾಟದ ಮೂಲಕ ಸಂದರ್ಭಗಳಿಗೆ ಹೊಂದಿಕೊಳ್ಳುವ ಮೂಲಕ ನಿಮ್ಮ ಜೀವನವನ್ನು ಉತ್ತುಂಗಕ್ಕೆ ತಲುಪಿಸುವ ಯೋಗವಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment