Mangal Gochar 2022: ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ

ಮಂಗಳ ಗೋಚಾರ ಪ್ರಭಾವ: ನವಗ್ರಹಗಳಲ್ಲಿ ಕಮಾಂಡರ್ ಗ್ರಹ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹವು ಆಗಸ್ಟ್ 10ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿರುವ ಮಂಗಳನು ಆಗಸ್ಟ್ 10ರ ರಾತ್ರಿ 9:32 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನದಲ್ಲಿದ್ದರೆ ಅವರು ನಿರ್ಭೀತರಾಗಿ ಇರುತ್ತಾರೆ. ಪ್ರತಿ ಕಾರ್ಯದಲ್ಲೂ ಯಶಸ್ಸು ಪಡೆಯಲಿದ್ದಾರೆ ಎಂಬ ನಂಬಿಕೆ ಇದೆ. ಮಂಗಳ ರಾಶಿ ಪರಿವರ್ತನೆಯು ಎಲ್ಲಾ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಆದರೂ, ಕೆಲವು ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಮಂಗಳಕರವಾಗಿರುತ್ತದೆ. ಆಗಸ್ಟ್ 10 ರಂದು ಮಂಗಳ ಗ್ರಹದ ಸಂಕ್ರಮಣದಿಂದ ಯಾವ ರಾಶಿಚಕ್ರದ ಚಿಹ್ನೆಗಳು ಸಂತೋಷವನ್ನು ಪಡೆಯಲಿವೆ. ಅವರ ಜೀವನದ ಮೇಲೆ ಯಾವ ರೀತಿ ವಿಶೇಷ ಪರಿಣಾಮ ಬೀರಲಿದೆ ತಿಳಿಯೋಣ…

ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ  : 
ವೃಷಭ ರಾಶಿ : 

ಆಗಸ್ಟ್ 10 ರಂದು, ಮಂಗಳ ಗ್ರಹವು ಮೇಷ ರಾಶಿಯನ್ನು ತೊರೆದು ಇದೇ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯವು ವೃಷಭ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಇವರಿಗೆ ಉದ್ಯೋಗದ ಜೊತೆಗೆ ವ್ಯಾಪಾರ-ವ್ಯವಹಾರದಲ್ಲಿಯೂ ಪ್ರಗತಿ ಸಿಗಲಿದೆ. ನಿಮ್ಮ ಬಹುದಿನಗಳಿಂದ ಸ್ಥಗಿತಗೊಂಡಿರುವ ಕಾಮಗಾರಿಗಳು ಈಗ ಪೂರ್ಣಗೊಳ್ಳಲಿವೆ. 

ಇದನ್ನೂ ಓದಿ- Nag Panchami 2022: ಹಲವು ವರ್ಷಗಳ ಬಳಿಕ ನಾಗ ಪಂಚಮಿಯಂದು ಈ ಅದ್ಭುತ ಯೋಗ ನಿರ್ಮಾಣಗೊಳ್ಳುತ್ತಿದೆ

ಕರ್ಕಾಟಕ ರಾಶಿ :  
ಮಂಗಳನ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗ ಹುದುಕುತ್ತಿರುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸಮಯ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಜೊತೆಗೆ ಪ್ರಮೋಷನ್ ಕೂಡ ದೊರೆಯುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಸಾಲದಿಂದ ಮುಕ್ತರಾಗುವಿರಿ.

ಸಿಂಹ ರಾಶಿ : 
ವೃಷಭ ರಾಶಿಯಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ವಿಶೇಷ ಫಲ ನೀಡಲಿದೆ. ಆರ್ಥಿಕ ಸ್ಥಿತಿ ಬಳವಾಗಿರಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಉತ್ತಮ ಲಾಭ ದೊರೆಯಲಿದೆ. ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಇದು ಶುಭ ಸಮಯ.

ಇದನ್ನೂ ಓದಿ- Palmistry: ಅಂಗೈಯಲ್ಲಿರೋ ಈ ಒಂದು ಗುರುತು ಅದೃಷ್ಟದ ಸುಳಿವು ನೀಡುತ್ತೆ

ಧನು ರಾಶಿ: 
ಈ ಸಮಯದಲ್ಲಿ, ನೀವು ನಿಮ್ಮ ಸ್ವಂತ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಇದರೊಂದಿಗೆ ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ನೀವು ಬಯಸಿದ ಸೌಭಾಗ್ಯ ನಿಮ್ಮದಾಗಲಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ…
Android Link – https://bit.ly/3hDyh4G
Apple Link – https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.



Source link

Leave a Comment