Every woman who wears a thali must read it ನಮಸ್ಕಾರ ಸ್ನೇಹಿತರೆ,ವೈಹಿಕ ಪದ್ಧತಿಯ ವಿವಾಹವು ಜೀವನದ ಅವಿಭಾಜ್ಯ ಅಂಗ ಇನ್ನು ನಮ್ಮ ಧರ್ಮದಲ್ಲಿ ಮದುವೆಗೆ ತುಂಬಾ ಮಹತ್ವ ಇದೆ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕು ಅಷ್ಟೇ ಪ್ರಾಮುಖ್ಯತೆ ಇದೆ ಅದನ್ನೇ ನಾವು ಮಂಗಳಸೂತ್ರ ತಾಳಿ ಕಂಠಿ ಕರಿಮಣಿ ಮಾಂಗಲ್ಯ ಎಂದು ವಿವಿಧ ಹೆಸರುಗಳಿಂದ ಕರೆಯುತ್ತೇವೆ ಆದರೆ ಅತ್ಯಂತ ಭಾವನಾತ್ಮಕವಾದ ಆಭರಣ ಇದು ವೈವಾಹಿಕ ಸ್ಥಿತಿಯ ಸಂಕೇತವಾಗಿ ಮಹಿಳೆಯರು ಮಂಗಳಸೂತ್ರವನ್ನು ಕುತ್ತಿಗೆಗೆ ಧರಿಸುತ್ತಾರೆ
ಇನ್ನು ಸಾಮಾನ್ಯವಾಗಿ ಮಂಗಳಸೂತ್ರ ಹಿಡಿದಾಗ ಅದನ್ನು ಹರದಿದೆ ಅಂತ ಅನ್ನದೇ ಇರುವಂತಹ ಸಾಂಪ್ರದಾಯ ನಮ್ಮದು ಹೌದು ಮಂಗಳಸೂತ್ರ ಯಾವುದೇ ಕಾರಣಕ್ಕೂ ಹರಿದು ಕೈಗೆ ಬಂದಾಗ ಅದನ್ನು ಸಾಮಾನ್ಯವಾಗಿ ಹಿರಿಯರು ಇರುವ ಮನೆಯಲ್ಲಿ ಹೇಳೋದು ಏನಪ್ಪಾ ಅಂದರೆ ಮಂಗಳಸೂತ್ರ ಕೆಳಗೆ ಇಳಿದಿದೆ ಎಂದು ಹೇಳುತ್ತಾರೆ ಹರದಿದೆ ಅಂತ ಯಾವ ಬಾಯಿಂದಲೂ ಅನ್ನುವುದಿಲ್ಲ ಅದಕ್ಕೆ ಕಾರಣ ಇಷ್ಟೇ ಕೆಲವು ಮಂಗಳಕರವಾದ ವಸ್ತುಗಳಿಗೆ ನಾವು ಮುಗಿದಿದೆ ಹರಿದಿದೆ ಹೋಗಿದೆ ಅಂತ ಹೇಳಬಾರದು ಎನ್ನುವ ಸದುದ್ದೇಶ ಅಂತಹ ಒಂದು ಸಂಸ್ಕೃತಿಯಲ್ಲಿ ನಾವು ಮಂಗಳಸೂತ್ರ ಯಾವುದೇ ಕಾರಣಕ್ಕೆ ಕೆಳಗೆ ಇಳಿದಾಗ ಅದನ್ನ ನಾವು ತಕ್ಷಣವೇ ತೆಗೆಯಬಾರದು
ಕುತ್ತಿಗೆಗೆ ಅರಿಶಿನ ದಾರ ಅದಕ್ಕೊಂದು ಅರಿಶಿನದ ರಂಬೆಯನ್ನು ಕಟ್ಟಿಕೊಂಡು ಅದನ್ನ ಶುಕ್ರವಾರ ಮಂಗಳವಾರ ತೆಗೆಯದೆ ಬುದುವಾರ ಗುರುವಾರಗಳು ಬೆಳಗ್ಗೆ 9 ಗಂಟೆಯೊಳಗೆ ತೆಗೆದು ಮತ್ತೆ ಅದನ್ನು ಬಳಿಸಿಕೊಂಡು 9 ಗಂಟೆಯೊಳಗೆ ಬುದುವಾರ ಗುರುವಾರ ಗಳ ದಿನವೇ ಮತ್ತೆ ಕುತ್ತಿಗೆಗೆ ಧರಿಸಬೇಕು ಹೀಗೆ ಮಂಗಳಸೂತ್ರ ಯಾವುದೇ ಕಾರಣಕ್ಕೂ ಕೈಗೆ ಬಂದಾಗ ಅದನ್ನು ಇಳಿದಿದೆ ಅಂತ ಹೇಳಬೇಕಾಗಲ್ಲಿ ಹರದಿದೆ ಅಂತ ಹೇಳಬಾರದು ನಾವು ಮನೆಯಲ್ಲಿ ಅರಿಶಿನ ಕುಂಕುಮಕ್ಕೆ ಕೂಡ ಅದೇ ಪದಗಳನ್ನು ಉಪಯೋಗಿಸುತ್ತೇವೆ ಯಾವುದೇ ಕಾರಣಕ್ಕೂ ಅರಿಶಿನ ಆಗೋಗಿದೆ ಕುಂಕುಮ ಆಗಿಹೋಗಿದೆ ಅಂತ ಹೇಳುವುದಿಲ್ಲ ಕುಂಕುಮ ಬೆಳೆದಿದೆ ಅರಿಶಿಣ ಬೆಳೆದಿದೆ ಅಂತ ಹೇಳುತ್ತೇವೆ
ಹಾಗೆಯೇ ಮಂಗಳಕರವಾದ ಯಾವುದೇ ಪದಾರ್ಥ ಅರಿಶಿನ ಕುಂಕುಮ ಮತ್ತು ಇನ್ನಿತರ ಮಂಗಳದ್ರವ್ಯಗಳು ಕೂಡ ಬೆಳೆದಿದೆ ಅಂತೀವಿ ಆಗಲಿ ಮುಗಿದಿದೆ ಹೇಳೋದಿಲ್ಲ ಹಾಗೆ ಯಾವಾಗಲೂ ಅನ್ನಬಾರದು ಕೂಡ ಯಾಕೆಂದರೆ ಮನೆಯಲ್ಲಿ ಬೆಳೆದಿದೆ ಎಂದರೆ ಆ ವಸ್ತು ಗಳು ಇನ್ನಷ್ಟು ಸಮೃದ್ಧವಾಗಿ ಉಂಟಾಗುತ್ತವೆ ಎನ್ನುವ ಉದ್ದೇಶ ಅದರ ಹಿಂದೆ ಇದೆ ಆದ್ದರಿಂದ ಅಪ್ಪಿ ತಪ್ಪಿ ಕೂಡ ಕೆಟ್ಟಪದಗಳನ್ನು ಬಳಸದೆ ಮಾತನಾಡಬೇಕು ಇನ್ನು ಸಾಧ್ಯವಾದರೆ ಈ ಮಂಗಳಸೂತ್ರವನ್ನು ಸಿದ್ಧಪಡಿಸಿಕೊಂಡ ನಂತರ ಪತಿಯ ಕೈಯಿಂದಲೇ ಮತ್ತೆ ಕಟ್ಟಿಸಿಕೊಳ್ಳುವುದು ಒಂದು ವೇಳೆ ನಿಮಗೆ ಪತಿ ಅಲ್ಲಿ ಇಲ್ಲದಿದ್ದರೆ ಪತಿಯ ತಂಗಿಯ ಕೈಗಳಿಂದ ಆ ಮಂಗಳಸೂತ್ರವನ್ನು ಧರಿಸಿಕೊಳ್ಳಬೇಕು
ಸಾಧ್ಯವಾದಷ್ಟು ಸಂಧ್ಯಾ ಸಮಯದಲ್ಲಿ ಅಂದರೆ ಸೂರ್ಯ ಸಮಯದಲ್ಲಿ ಈ ಮಂಗಳಸೂತ್ರವನ್ನು ಧರಿಸುವುದಾಗಿ ಅಥವಾ ಇಳಿಸಿಕೊಂಡು ಸಿದ್ಧಪಡಿಸಿಕೊಳ್ಳುವುದು ಆಗಲಿ ಮಾಡಬಾರದು ಸಾಧ್ಯವಾದಷ್ಟು ಬೆಳಗ್ಗೆ 9 ಗಂಟೆ ಒಳಗೆ ಇವುಗಳನ್ನು ಸಿದ್ಧಪಡಿಸಿ ಕೊಳ್ಳುವುದಗಲ್ಲಿ ಧರಿಸಿಕೊಳ್ಳುವುದು ಆಗಲಿ ಮಾಡಬೇಕು ಹೀಗೆ ಇನ್ನು ಕೆಲವು ಸೂಕ್ಷ್ಮವಾದ ಕೆಲಸಗಳನ್ನು ಹಿರಿಯರು ಮತ್ತೆ ಮತ್ತೆ ಹೇಳುತ್ತಾ ಇರುತ್ತಾರೆ ಕಿವಿ ಮಾತುಗಳು ಆದಷ್ಟು ಮಂಗಳಕರವಾದ ಕೆಲಸಗಳನ್ನು ಮಂಗಳಕರವಾದ ದಿನಗಳಂದು ಮಾಡಿಕೊಳ್ಳಬೇಕು ಅದರಿಂದ ವೃತ್ತಿ ಆಯಶು ಬೆಳೆಯುತ್ತದೆ.