ನಾವು ಮಾಡುವ ಪ್ರತಿಯೊಂದು ಅಡುಗೆಯಲ್ಲಿಯೂ ಕಾಳುಮೆಣಸನ್ನು ಉಪಯೋಗಿಸುತ್ತೇವೆ ಈ ಒಂದು ಕಾಳುಮೆಣಸನ್ನು ಸೇವನೆ ಮಾಡುವುದರಿಂದ ಆಗುವ ಆರೋಗ್ಯ ಕಾರಿ ಪ್ರಯೋಜನಗಳ ಬಗ್ಗೆ ತಿಳಿಯೋಣ:
ಈ ಒಂದು ಕಾಳುಮೆಣಸನ್ನು ಕಪ್ಪು ಬಂಗಾರ ವೆಂದು ಸಹ ಸಾಂಬಾರು ಪದಾರ್ಥಗಳಲ್ಲಿ ಇದನ್ನು ಕರೆಯಲಾಗುತ್ತದೆ ಮೊದಲನೆಯದಾಗಿ ಇದು ಸಕ್ಕರೆ ಕಾಯಿಲೆ
ಇದ್ದವರು ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ ಇದು ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ ಇನ್ನೂ ಶೀತ ಕೆಮ್ಮು ಸಮಸ್ಯೆ ಇರುವವರು ಇದನ್ನು ಚಹಾದಲ್ಲಿ ಸ್ವಲ್ಪ ಬೇಯಿಸಿ ಅದರೊಂದಿಗೆ ತುಳಸಿ ಎಲೆಗಳನ್ನೂ ಚಹಾದೊಂದಿಗೆ ಕುದಿಸಿ ಕುಡಿಯುವುದು ಒಳ್ಳೆಯದು ಹೀಗೆ ಮಾಡುವುದರಿಂದ ನೆಗಡಿ ಕೆಮ್ಮು ದೂರವಾಗುತ್ತದೆ ಅಲ್ಲದೆ ಇದನ್ನು ಬರದಂತೆ ತಡೆಯುತ್ತದೆ
ಅಷ್ಟೇ ಅಲ್ಲದೆ ಬೆಲ್ಲದೊಂದಿಗೆ ಕಾಳುಮೆಣಸನ್ನು ಮಿಶ್ರಣ ಮಾಡಿ ಸಣ್ಣ ಮಾತ್ರೆಗಳನ್ನಾಗಿ ಕೂಡ ಸೇವಿಸಬಹುದು ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ಕೆಮ್ಮು ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ ಶೀತದಿಂದ ಉಂಟಾಗುವ ಕಫದಿಂದ ಮುಕ್ತಿಯನ್ನು ಪಡೆಯಲು ಚಿಟಕಿ ಕರಿ ಮೆಣಸಿನ ಪುಡಿಯಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಒಣಶುಂಠಿ, ಕರಿಮೆಣಸು, ಏಲಕ್ಕಿ ಮತ್ತು ಸಕ್ಕರೆಯನ್ನು ಪುಡಿ ಮಾಡಿ ಅದಕ್ಕೆ ಒಣ ದ್ರಾಕ್ಷಿ ಮತ್ತು ತುಳಸಿ ಎಲೆಗಳ ಬೀಜಗಳನ್ನು ಪುಡಿ ಮಾಡಿ
ಈ ಒಂದು ಮಿಶ್ರಣಗಳನ್ನು ಮಾತ್ರೆಗಳ ರೀತಿಯಲ್ಲಿ ತಯಾರಿಸಿಕೊಂಡು ಒಣಗಿಸಿ ಸಹ ಸೇವಿಸಬಹುದು ಹೀಗೆ ಮಾಡುವುದರಿಂದ ಶೀತದಿಂದ ಉಂಟಾಗುವ ಕಫ ಕಡಿಮೆಯಾಗುತ್ತದೆ ಉಸಿರಾಟದ ತೊಂದರೆಯೂ ನಿವಾರಣೆಯಾಗುತ್ತದೆ ನಿಮಗೆ ಜ್ವರ ಇದ್ದರೆ ತುಳಸಿ ಮತ್ತು ಕರಿಮೆಣಸಿನ ಕಷಾಯವನ್ನು ಕುಡಿಯುವುದು ಒಳ್ಳೆಯದು ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಇದ್ದರೆ ಕರಿಮೆಣಸು ಮತ್ತು ಪುದಿನ ಚಹವನ್ನು ಕುಡಿಯಿರಿ ಇದು ನಿಮಗೆ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ ಇನ್ನು ಅಧಿಕ ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ.