ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸರಿಸುಮಾರು 25 ವರ್ಷಗಳ ಹಿಂದೆ ನಮ್ಮ ಹಳ್ಳಿಗಳಲ್ಲಿ ವಾರಕ್ಕೆ ಒಮ್ಮೆ ನಡೆಯುವ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುವ ಸಂತೆಗಳಿಗೆ ನಮ್ಮ ಹಿರಿಯರ ಜೊತೆಗೆ ಹೋದಾಗ ಅಲಲ್ಲಿ ವಿಭಿನ್ನ ಬಗೆಯ ಸಿರಿಧಾನ್ಯಗಳು ರಾಶಿ ರಾಶಿ ಕಾಣಲು ಸಿಗುತ್ತಿತ್ತು ಇದರ ಮಾರಾಟ ಕೂಡ ಅಷ್ಟೇ ಜೋರಾಗಿ ನಡೆಯುತ್ತಿತ್ತು ಆದರೆ ಕಾಲ ಬದಲಾಗಿ ಬಿಟ್ಟಿದೆ ಹಿಂದಿನ ಕಾಲದಲ್ಲಿ ಹೇರಳವಾಗಿ ಎಲ್ಲಾ ಕಡೆ ಲಭ್ಯವಿದ್ದ ಈ ಆರೋಗ್ಯಭರಿತ ಸಿರಿಧಾನ್ಯಗಳು
ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿರುವುದು ನಿಜಕ್ಕೂ ಬೇಜಾರಿನ ಸಂಗತಿ ಈಗಿನ ಪರಿಸ್ಥಿತಿ ಹೇಗೆ ಆಗಿದೆ ಎಂದರೆ ವರ್ಷಕ್ಕೊಮ್ಮೆ ನಮ್ಮ ಸರ್ಕಾರದ ವತಿಯಿಂದ ನಡೆಯುವ ಸಿರಿ ಧಾನ್ಯಗಳ ಜಾತ್ರೆ ಎಂಬ ವಿಶೇಷ ಸಂದರ್ಭದಲ್ಲಿ ಮಾತ್ರ ಇಂತಹ ಧಾನ್ಯಗಳು ಕಾಣಲು ಸಿಗುತ್ತವೆ ಅದು ಬಿಟ್ಟರೆ ಅಂದಿನ ಕಾಲದಲ್ಲಿ ನಮಗೆ ಸುಲಭವಾಗಿ ಸಿಗುತ್ತಿದ್ದ ಸಿರಿಧಾನ್ಯಗಳಾದ ಸಾಮೆ, ಸಜ್ಜೆ, ನವಣೆ ಇವೆಲ್ಲವೂ ಕೂಡ ಯಾವ ಅಂಗಡಿಗಳಲ್ಲಿ ಹುಡುಕಿದರೂ
ನಮ್ಮ ಕಣ್ಣಿಗೆ ಕಾಣ ಸಿಗುತ್ತಿಲ್ಲ ಕೆಲವೊಂದು ಹಳೆಯ ದಿನಸಿ ಅಂಗಡಿಯಲ್ಲಿ ಕಂಡು ಬರಬಹುದು ಬಿಟ್ಟರೆ ತುಂಬಾನೇ ವಿರಳ ಅಂತಾನೆ ಹೇಳಬಹುದು ಹೀಗಾಗಿ ಇತ್ತೀಚಿನ ಪೀಳಿಗೆಗೆ ಈ ಆರೋಗ್ಯ ಭರಿತ ಸಿರಿಧಾನ್ಯಗಳ ಅರಿವು ಕೂಡ ಕಡಿಮೆಯಾಗುತ್ತಾ ಹೋಗುತ್ತಿದೆ ಹಾಗಾದರೆ ಸಿರಿಧಾನ್ಯಗಳ ಆರೋಗ್ಯ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ
ಸಿರಿಧಾನ್ಯಗಳಲ್ಲಿ ಪೌಷ್ಟಿಕಾಂಶಗಳ ಭಂಡಾರವೇ ಅಡಗಿದೆ ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಎಲ್ಲ ಬಗೆಯ ಪೌಷ್ಟಿಕ ಸತ್ವಗಳು ಕೂಡ ಈ ಸಿರಿಧಾನ್ಯಗಳಲ್ಲಿ ಕಂಡುಬರುತ್ತದೆ ಮುಖ್ಯವಾಗಿ ತಾಮ್ರ, ಖನಿಜಾಂಶ, ಪ್ರೋಟೀನ್, ವಿಟಮಿನ್, ಮ್ಯಾಗ್ನೀಷಿಯಂ, ಪಾಸ್ಪರಸ್, ಮ್ಯಾಗ್ನಿಸ್ ನಾರಿನಂಶ ಹಾಗೂ ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಕಂಡು ಬರುತ್ತದೆ ಇನ್ನು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿರುವ ಸಿರಿಧಾನ್ಯಗಳನ್ನು ದಿನ ನಿತ್ಯದ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ದೇಹದ ತೂಕ ಕ್ರಮೇಣವಾಗಿ ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ
ಹೀಗಾಗಿ ಸಿರಿಧಾನ್ಯಗಳಿಂದ ಮಾಡಿದ ಪಾನೀಯವನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ದೇಹದ ತೂಕ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ದೇಹ ಸದೃಢತೆಯಿಂದ ಕೂಡಿರುತ್ತದೆ ಇನ್ನು ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿ ಹಾಗೂ ಅನಾರೋಗ್ಯ ಕಾರಿ ಆಹಾರ ಪದ್ಧತಿಯಿಂದಾಗಿ ದೀರ್ಘ ಕಾಲದ ಕಾಯಿಲೆಗಳಾದ ಹೃದಯದ ಸಮಸ್ಯೆಗಳು, ಪಾರ್ಶ್ವವಾಯು, ರಕ್ತದ ಒತ್ತಡ ಮಧುಮೇಹದಂತಹ ಕಾಯಿಲೆಗಳು ಮನುಷ್ಯನನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಹೀಗಾಗಿ ಇಂತಹ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕೆಂದರೆ ಪೌಷ್ಟಿಕಾಂಶ ಹೆಚ್ಚಾಗಿರುವ ಸಿರಿಧಾನ್ಯಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು
ಇನ್ನು ಆರೋಗ್ಯಕಾರಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ತಕ್ಕ ಮಟ್ಟಿಗೆ ಆದರೂ ಕೂಡ ನೈಸರ್ಗಿಕವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚು ಮಾಡಿಕೊಳ್ಳಬಹುದು ಇದಕ್ಕೊಂದು ಒಳ್ಳೆಯ ಉದಾಹರಣೆ ಏನೆಂದರೆ ಸಿರಿಧಾನ್ಯಗಳನ್ನು ತಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು ಇನ್ನು ಸಕ್ಕರೆ ಕಾಯಿಲೆ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಕೂಡ ಸಾಮಾನ್ಯ ಕಾಯಿಲೆಯಾಗಿ ಬಿಟ್ಟಿದೆ ನಾವು ಈ ಹಿಂದೆಯೂ ಹೇಳಿದಂತೆ ಒಮ್ಮೆ
ಈ ಕಾಯಿಲೆ ಕಾಣಿಸಿಕೊಂಡರೆ ಮತ್ತೆ ಅದನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ ಆದರೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಇದಕ್ಕಾಗಿ ಕಟ್ಟುನಿಟ್ಟಿನ ಆಹಾರ ಪದ್ಧತಿ ಸರಿಯಾದ ಜೀವನಶೈಲಿ ಹಾಗೂ ವೈದ್ಯರ ಸಲಹೆಗಳನ್ನು ಅನುಸರಿಸುವುದರ ಜೊತೆಗೆ ಸಿರಿಧಾನ್ಯಗಳನ್ನು ಕೂಡ ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿಕೊಂಡರೆ ಬಹಳ ಒಳ್ಳೆಯದು ಯಾಕೆಂದರೆ ಸಿರಿಧಾನ್ಯಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಂಡು ಸಕ್ಕರೆ ಕಾಯಿಲೆಯನ್ನು ಕಂಟ್ರೋಲ್ ಮಾಡುತ್ತವೆ.