ಮೀನು ಎಂದರೆ ಬಹಳಷ್ಟು ಮಂದಿಗೆ ಇಷ್ಟ. ಮಾಂಸಾಹಾರ ಪ್ರಿಯರಲ್ಲಿ ಬಹಳಷ್ಟು ಮಂದಿ ಇವನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಸಾರು, ಖಾದ್ಯಗಳು, ಬಿರಿಯಾನಿ …ಹೀಗೆ ಏನು ಮಾಡಿದರೂ, ಹೇಗೆ ಮಾಡಿದರೂ ಮೀನನ್ನು ಚೆನ್ನಾಗಿ ಅರಗಿಸುವವರಿಗೆ ಬರವಿಲ್ಲ. ಅದೆಲ್ಲಾ ಓಕೆ. ಮೀನು ಸವಿಯುವಾಗ ಅಚಾನಕ್ ಆಗಿ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದರೆ? ಹೌದು ಒಮ್ಮೊಮ್ಮೆ ಈ ರೀತಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕೆಲವರು ಮೀನನ್ನು ತಿನ್ನಬೇಕಾದರೆ ಹಿಂಜರಿಯುತ್ತಾರೆ.
ತುಂಬಾ ನಿಧಾನಕ್ಕೆ ತಿನ್ನುತ್ತಾರೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಒಮ್ಮೊಮ್ಮೆ ಅಚಾನಕ್ ಆಗಿ ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬೀಳುವ ಸಾಧ್ಯತೆಗಳಿವೆ. ಆಗ ಏನು ಮಾಡಬೇಕು ಗೊತ್ತಾ..? ಅದನ್ನೇ ಈಗ ತಿಳಿದುಕೊಳ್ಳೋಣ ಬನ್ನಿ.ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬಗ್ಗಲೂ ಹೇಳಬೇಕು. ಆಗ ಯಾರಾದರೂ ಆ ವ್ಯಕ್ತಿಯ ಬೆನ್ನಿನ ಮೇಲೆ ನಿಧಾನಕ್ಕೆ ಗುದ್ದಾಬೇಕು ಇದರಿಂದ ಮುಳ್ಳು ಹೊರಬರುತ್ತದೆ. ಆ ಸಮಯದಲ್ಲಿ ಬಾಯಿ ತೆರೆದು ಕೊಂಡು ಇರಬೇಕಾಗುತ್ತದೆ.
ಮೀನಿನ ಮುಳ್ಳು ಗಂಟಲಲ್ಲಿ ಸಿಕ್ಕಿಬಿದ್ದಾಗ ಒಂದು ಮುಷ್ಟಿ ಅನ್ನವನ್ನು ಆಗ್ನೇಯದೆ ಹಾಗೇ ನುಂಗಬೇಕು. ಕೂಡಲೇ ನೀರು ಕುಡಿಯಬೇಕು. ಇದರಿಂದ ಗಂಟಲಲ್ಲಿ ಇರುವ ಮುಳ್ಳು ಹೋಗುತ್ತದೆ.ಒಂದು ಬಾಳೆಹಣ್ಣು ತೆಗೆದುಕೊಂಡು ಅರ್ಧ ಕಚ್ಚಿಕೊಂಡು ಆಗೇಯದ ಅದೇ ರೀತಿ ಅದನ್ನು ನುಂಗಬೇಕು. ಆ ಬಳಿಕ ನೀರು ಕುಡಿಯಬೇಕು ಈ ರೀತಿ ಮಾಡಿದರೆ ಗಂಟಲಲ್ಲಿ ಸಿಕ್ಕಿಬಿದ್ದ ಮುಳ್ಳು ಹೋಗುತ್ತದೆ.ಎರಡು ಟೇಬಲ್ ಸ್ಫೂನ್ ಕಡಲೆ ಬೀಜ ತೆಗೆದುಕೊಂಡು ಚೆನ್ನಾಗಿ ಜಗ್ಗೇದು ನುಂಗಬೇಕು. ಇದು ಸಹ ಮುಳ್ಳುಗಳನ್ನು ತೆಗೆದುಕೊಂಡು ಹೋಗುತ್ತೇವೆ.ಬ್ರೌನ್ ಬ್ರೆಡ್ ಪೀಸ್ ತೆಗೆದುಕೊಂಡು ಅದಕ್ಕೆ ಎರಡು ಕಡೆ peanut butter ಸವರಿ ಆ ಬಳಿಕ ಆ ಬ್ರೆಡ್ ಅನ್ನು ಮೆತ್ತಗೆ ಜಗ್ಗೀಯ ಬೇಕು ನಿಧಾನ ನುಂಗಬೇಕು. ಕೂಡಲೇ ನೀರು ಕುಡಿಯಬೇಕು. ಇನ್ನು ಬೇರೆ ಪ್ರಯೋಗ ಮಾಡುವುದನ್ನು ಬಿಟ್ಟು ಬೇಗ ವೈದ್ಯರನ್ನು ಕಾಣುವುದು ಉತ್ತಮ.