ಸೀಬೆಕಾಯಿ, ಪೇಚೆ ಕಾಯಿ, ಪೇರಳೆಕಾಯಿ ಎಂದೆಲ್ಲಾ ಕರೆಸಿಕೊಳ್ಳುವ ಈ ಫಲ ಬಿಳಿ, ತಿಳಿ ಹಳದಿ,ಕೆಂಪು ಅಥವಾ ತಿಳಿ ಗುಲಾಬಿ ಬಣ್ಣದಲ್ಲಿ ಬರುತ್ತದೆ ಪೇರಳೆಯನ್ನು ತೀರ ಮಾಗಿದ ಮೇಲೆ ತಿನ್ನುವುದಕ್ಕಿಂತ ಸ್ವಲ್ಪ ಕಾಯಿ ಇದ್ದಾಗಲೇ ತಿನ್ನುವುದು ಸೂಕ್ತ ತೀರಾ ಹಣ್ಣಾಗಿದ್ದರೆ ನೆಗಡಿ, ಕೆಮ್ಮಿನಂತಹ ಸಮಸ್ಯೆಗಳು ಕಾಣಬಹುದು ಸ್ವಲ್ಪ ಸಿಹಿ ಚೂರು ಹುಳಿ ಸ್ವಭಾವವನ್ನು ಹೊಂದಿರುವ ಈ ಫಲ ಕಾಯಿ ಇದ್ದಾಗ ಸ್ವಲ್ಪ ಒಗರು ಇರುತ್ತದೆ
ಪೇರಳೆ ಹಣ್ಣಿನ ಬಣ್ಣ ಯಾವುದೇ ಇರಲಿ ಈ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವ ಶಕ್ತಿ ಇದೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು ತೂಕ ಇಳಿಸುವವರಿಗೆ ಒಳ್ಳೆಯ ಆಯ್ಕೆ ನಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿ ಚರ್ಮದ ಕಾಂತಿಗೆ ನೆರವಾಗುತ್ತದೆ ಕೆಂಪು ಪೆರಳಯ ಗುಣಗಳನ್ನು ನೋಡುವುದಾದರೆ ಇದರಲ್ಲಿ ನೀರಿನ ಪ್ರಮಾಣ ಹೆಚ್ಚು, ವಿಟಮಿನ್ ಸಿ,ಸಕ್ಕರೆಯ ಅಂಶ ಕಡಿಮೆ ಕೆಂಪು ಬಣ್ಣಕ್ಕೆ ಕಾರಣವಾಗುವಂತಹ ಕೆರಟನೈಡ್ಗಳು ಮತ್ತು ಫಾಲಿಫಿನ್ಗಳ ಇರುವಿಕೆಯಿಂದಲೇ ಕೆಂಪು ಬಣ್ಣಕ್ಕೆ ಕಾರಣವಾಗುತ್ತದೆ
ತಿಳಿ ಗುಲಾಬಿಯಿಂದ ಪೇರಳೆಯ ಬಣ್ಣ ಕೆಂಪು ಬಣ್ಣಕ್ಕೆ ತಿರುಗುತ್ತದೆ ಇನ್ನು ಬಿಳಿ ಅಥವಾ ತಿಳಿ ಹಳದಿ ಬಣ್ಣದ ಪೆರಳಿಯ ಬಗ್ಗೆ ಹೇಳುವುದಾದರೆ ಇದರಲ್ಲಿ ಸಕ್ಕರೆಯ ಪ್ರಮಾಣ ಕೆಂಪು ಪೆರಳೆಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ, ಬೀಜವು ಹೆಚ್ಚಾಗಿದ್ದು ವಿಟಮಿನ್ ಸಿ ಮತ್ತು ಸ್ಟಾರ್ಚ್ ಪ್ರಮಾಣವೂ ಅಧಿಕವಾಗಿರುತ್ತದೆ ನಾರಿನಂಶ,ವಿಟಮಿನ್ A ಅಂತಹ ಅಂಶಗಳು ಈ ಎರಡು ಬಣ್ಣದ ಪೇರಳೆಗಳಲ್ಲಿ ಕಂಡುಬರುತ್ತದೆ ಇನ್ನು ಒಮ್ಮೆ ಕತ್ತರಿಸಿದ ನಂತರ ಈ ಹಣ್ಣನ್ನು ಇಡಬಾರದು ಪೂರ್ತಿಯಾಗಿ ತಿಂದು ಖಾಲಿ ಮಾಡಬೇಕು.