ನಮಸ್ಕಾರ ಸ್ನೇಹಿತರೆ, ಹಲವರ ಮನೆಯ ಹಿತ್ತಿಲಲ್ಲಿ ಇರುವ ಒಂದು ಅತ್ಯದ್ಭುತ ಸಸ್ಯವೆಂದರೆ ಅದೇ “ದೊಡ್ಡಪತ್ರೆ”. ಇದನ್ನು ಸಂಭರ ಬಳ್ಳಿ ಕರ್ಪೂರವಳ್ಳಿ ಎಂದು ಕೂಡ ಕರೆಯುತ್ತಾರೆ, ದೊಡ್ಡ ಪತ್ರೆ ಗಿಡ ಹಾಗೂ ಎಲೆಗಳು ನಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ ಆದ್ದರಿಂದ ಈ ದಿನ ಈ ಗಿಡದಿಂದ ದೊರೆಯುವ ಆರೋಗ್ಯ ಲಾಭಗಳೇನು? ಹಾಗೂ ಯಾವ ಆರೋಗ್ಯ ಸಮಸ್ಯೆಗೆ ಈ ದೊಡ್ಡಪತ್ರೆಯನ್ನು ಹೇಗೆ ಬಳಸಬಹುದು? ಎಂದು ತಿಳಿದುಕೊಳ್ಳೋಣ
ಜ್ವರ ಕೆಮ್ಮು ಶೀತ ಗಂಟಲು ನೋವುಗಳ ನಿವಾರಣೆಗೆ ಉತ್ತಮ ದೊಡ್ಡಪತ್ರೆಯ ಕಫವನ್ನು ಕರಗಿಸುವ ಗುಣವನ್ನು ಹೊಂದಿದ್ದು, ಇದರ ಎಲೆಯನ್ನು ಬಿಸಿ ಮಾಡಿ ಅದರ ರಸವನ್ನು ತೆಗೆದು ಜೇನುತುಪ್ಪದೊಂದಿಗೆ ಸೇವಿಸಿದರೆ ಜ್ವರ, ಶೀತಾ, ಕೆಮ್ಮು, ಗಂಟಲುನೋವು ನಿವಾರಣೆಯಾಗುತ್ತದೆ, ಇನ್ನು ಮಕ್ಕಳಿಗೆ ಜ್ವರ ಬಂದಾಗ ದೊಡ್ಡಪತ್ರೆ ಎಲೆಗಳನ್ನು ಸ್ವಲ್ಪ ಬಿಸಿಮಾಡಿ ನೆತ್ತಿಯ ಮೇಲೆ ಇಟ್ಟು ಕಟ್ಟಿ ಮಲಗಿಸಿದರೆ ಜ್ವರ ಕಮ್ಮಿ ಆಗುತ್ತದೆ.
ಹಳದಿ ಕಾಮಾಲೆಗೆ ದೊಡ್ಡಪತ್ರೆ ಉತ್ತಮ, ದೊಡ್ಡಪತ್ರೆಯ ರಸವನ್ನು ತೆಗೆದು ಒಂದು ವಾರದ ವರೆಗೆ ಪ್ರತಿದಿನ ಸೇವಿಸುವುದರಿಂದ ಹಳದಿ ಕಾಮಲೆ ಕೂಡ ಕಡಿಮೆಯಾಗುತ್ತದೆ, ಸುಟ್ಟ ಗಾಯಕ್ಕೆ ದೊಡ್ಡಪತ್ರೆ ಉತ್ತಮ ಸುಟ್ಟ ಗಾಯವಾಗಿದ್ದರೆ ತೆಂಗಿನ ಎಣ್ಣೆಯ ಜೊತೆಗೆ ದೊಡ್ಡಪತ್ರೆಯ ರಸವನ್ನು ಬೆರೆಸಿ ಸುಟ್ಟ ಗಾಯದ ಮೇಲೆ ಹಚ್ಚಿದರೆ ಬೇಗನೇ ಪರಿಹಾರ ದೊರೆಯುತ್ತದೆ, ಅಜೀರ್ಣ ಸಮಸ್ಯೆ ದೂರವಾಗುತ್ತದೆ ದೊಡ್ಡಪತ್ರೆಯ ಹಸಿ ಎಲೆಯ ಜೊತೆಗೆ ಉಪ್ಪು ಸೇರಿಸಿ ಜಗಿದು ತಿನ್ನುವುದರಿಂದ ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಬಹುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ದೊಡ್ಡಪತ್ರೆ ಎಲೆಯನ್ನು ಸೇವಿಸುವುದರಿಂದ ಅದರಲ್ಲಿರುವ “ಆಸ್ ಫಾರ್ಮಿಕ್” ಆಮ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗುಣವನ್ನು ಹೊಂದಿದೆ. ಹಸಿವನ್ನು ಹೆಚ್ಚಿಸುತ್ತದೆ ದೊಡ್ಡಪತ್ರೆಯ ಎಲೆಯನ್ನು ತೆಗೆದು ಅದಕ್ಕೆ ಹಸಿಶುಂಠಿಯ ರಸವನ್ನು ಸೇರಿಸಿ ಸೇವಿಸುವುದರಿಂದ ಅದು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ರೋಗಕ್ಕೆ ಉತ್ತಮ ದೊಡ್ಡಪತ್ರೆಯ ಎಲೆಯ ರಸವನ್ನು ತೆಗೆದುಕೊಂಡು ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ಮೇಲಿನ ದದ್ದುಗಳು ತುರಿಕೆ ನಿವಾರಣೆಯಾಗುತ್ತದೆ. ಮೂಗು ಕಟ್ಟಿದ್ದರೆ ನೆಗಡಿಯಾದಾಗ ಮೂಗು ಕಟ್ಟಿಕೊಂಡರೆ ದೊಡ್ಡಪತ್ರೆಯ ಎಲೆಯ ರಸವನ್ನು ತೆಗೆದು ಒಂದೆರಡು ಹನಿಯನ್ನು ಮೂಗಿನ ಒಳಗಡೆ ಬಿಟ್ಟರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ. ನೋಡಿದಿರಲ್ಲ ದೊಡ್ಡಪತ್ರೆ ಗಿಡದಿಂದ ಬರೀ ಇಷ್ಟೇ ಅಲ್ಲ ಇನ್ನೂ ಹಲವಾರು ಲಾಭಗಳೇ ದೊರೆಯುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವೀಡಿಯೋ ಪೂರ್ತಿ ನೋಡಿ