ನಮಸ್ಕಾರ ಸ್ನೇಹಿತರೇ ಈ ಯೋಗವಿದ್ದರೆ ಕಷ್ಟವನ್ನೇ ನೀಡುವ ಶನಿಯು ಕೂಡ ಶುಭ ಫಲಗಳನ್ನು ನೀಡಲಾರಂಭಿಸುತ್ತಾನೆ.ಆ ಯೋಗ ಯಾವುದೂ ಈ ಯೋಗ ಜಾತಕದಲ್ಲಿ ಹೇಗೆ ರೂಪುಗೊಳ್ಳುತ್ತದೆ ಇದರ ಫಲವೇನು ಅನ್ನೋದನ್ನು ತಿಳಿದುಕೊಳ್ಳಬಹುದಾಗಿದೆ
ಜನ್ಮ ಕುಂಡಲಿಗಳ ಶುಭ ಮತ್ತು ಅಶುಭಗಳ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಉಂಟುಮಾಡುತ್ತದೆ.ಯಾರಾದರು ಜೀವನದಲ್ಲಿ ಅತ್ಯಂತ ಯಶಸ್ಸನ್ನು ಪಡೆದರು ಆ ವ್ಯಕ್ತಿಯ ಜನ್ಮ ಕುಂಡಲಿಯಲ್ಲಿ ಅಂತಹ ಕೆಲವು ಯೋಗಗಳು ಇದ್ದಿರಲೇಬೇಕು.ಅದು ಅವರಿಗೆ ಹೆಸರು ಪಡೆಯಲು ಸಹಾಯ ಮಾಡಿರುತ್ತದೆ.ಇದರೊಂದಿಗೆ ವ್ಯಕ್ತಿಯ ಸಂತೋಷವು ಆ ವ್ಯಕ್ತಿ ಅದೃಷ್ಟ ಮತ್ತು ಕರ್ಮದ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಈ ಶುಭಯೋಗಗಳಲ್ಲಿ ಒಂದಾದ ಪಂಚಮಾಪುರುಷ ಯೋಗದಲ್ಲಿ ಶಷಾಯೋಗವೂ ಕೂಡ ಒಂದು.ಇದು ಅತ್ಯಂತ ಮಂಗಳಕರ ಮತ್ತು ಪರಿಣಾಮಕಾರಿ ಯೋಗವಾಗಿದೆ ಯೋಗದಲ್ಲಿ ವ್ಯಕ್ತಿಯು ಶನಿಯಿಂದ ಶುಭ ಫಲವನ್ನು ಪಡೆಯುತ್ತಾನೆ ಮತ್ತು ಜೀವನದಲ್ಲಿ ಶನಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ.ಶಷಾಯೋಗವನ್ನು ಹೊಂದಿರುವ ವ್ಯಕ್ತಿಯ ಜೀವನದ ಪ್ರಮುಖ ಘಟನೆಗಳು ಶನಿದೇವನಿಂದ ಪ್ರಭಾವಿತವಾಗಿರುತ್ತವೆ ಶಷಾಯೋಗವು ವಿಶೇಷ ವಿಭಾಗಗಳ ಯೋಗದಲ್ಲಿ ಬರುತ್ತದೆ
ಶಷಾಯೋಗವು ಏನು ಎಂದು ನೋಡಿದರೆ ಶನಿದೇವರು ತನ್ನ ಸ್ವಂತ ರಾಶಿಯಲ್ಲಿ ಅಂದರೆ ಮಕರ ಕುಂಭದಲ್ಲಿ ಇರುವಾಗ ಅಥವಾ ಶನಿಯು ತನ್ನ ಉಚ್ಚ ರಾಶಿಯಾದ ತುಲಾ ರಾಶಿಯಲ್ಲಿ ಇರುವಾಗ ಮತ್ತು ಜಾತಕದ ಕೇ೦ದ್ರ ಮನೆಗಳಲ್ಲಿ ಸ್ಥಿತಗೊಂಡಾಗ ಈ ಯೋಗವು ಜಾತಕದಲ್ಲಿ ರೂಪುಗೊಳ್ಳುತ್ತದೆ. ಇದೊಂದು ನಂಬಿಕೆಯ ಪ್ರಕಾರ ಈ ಯೋಗವು ಕೇಂದ್ರದಲ್ಲಿ ಇರುವ ಕ್ಷೇತ್ರದಿಂದಲೂ ಕಂಡುಬರುತ್ತದೆ ಚಂದ್ರ ಕುಂಡಲಿಯನ್ನು ಮಾಡಿದ ನಂತರ ಶನಿಯು ಕೇಂದ್ರ ಸ್ಥಳಗಳಲ್ಲಿ ಸ್ಥಿತಗೊಂಡರೆ ಯೋಗವು ರೂಪುಗೊಳ್ಳುತ್ತದೆ
ಶಷಾಯೋಗದ ಪ್ರಯೋಜನಗಳು ಯಾವುವೆಂದರೆ ಶಷಾಯೋಗದ ಪ್ರಭಾವದಿಂದ ವ್ಯಕ್ತಿಯು ರೋಗಗಳು ಇದ್ದರೆ ತ್ವರಿತ ಆರೋಗ್ಯದ ವೃದ್ಧಿಯನ್ನು ಪಡೆಯಬಹುದು ಮತ್ತು ವ್ಯಕ್ತಿಯ ಜೀವನವು ದೀರ್ಘವಾಗಿರುತ್ತದೆ. ವ್ಯಕ್ತಿಯ ಸ್ವಭಾವದಲ್ಲಿ ಪ್ರಾಯೋಗಿಕತೆ ಗೋಚರತೆ ಆದರೆ ಕಲ್ಪನಾ ಲೋಕದಲ್ಲಿ ವಿಹಾರ ಮಾಡುವುದು ಬಿಟ್ಟು ಪ್ರಾಯೋಗಿಕವಾಗಿ ಕೆಲ್ಸ ಮಾಡುವ ಶ್ರಮಜೀವಿಗಳಾಗಿರುತ್ತಾರೆ ಇಂತಹ ವ್ಯಕ್ತಿಗಳು ಮೌನವಾಗಿ ಮತ್ತು ಗಂಭೀರವಾಗಿ ಕೆಲಸ ಮಾಡುತ್ತಾ ಹೋಗುತ್ತಾರೆ.ಇದರಿಂದ ಅಭಿವೃದ್ಧಿಯು ತನಗೆ ತಾನೇ ಆಗುತ್ತದೆ.