ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು!

ಕುಂಭ ರಾಶಿಯಲ್ಲಿ ಜನಿಸಿದವರು ಉತ್ತಮವಾದ ಮೈಕಟ್ಟು ಹೊಂದಿದವರಾಗಿರುತ್ತಾರೆ ನೋಡಲು ಮೃದುವಾಗಿ ಕಂಡರೂ ತೀಕ್ಷ್ಣವಾದ ಬುದ್ಧಿಯನ್ನು ಹೊಂದಿರುತ್ತಾರೆ ಯಾವಾಗಲೂ ಉತ್ಸಾಹ ಮತ್ತು ಚಟುವಟಿಕೆಗಳಿಂದ ಇರುವ ಇವರು ಯಾರನ್ನಾದರೂ ನೋಡಿದ ಕೂಡಲೇ ಅವರ ಗುಣ ಸ್ವಭಾವಗಳನ್ನು ನಿಖರವಾಗಿ ತಿಳಿಯುವ ಅಥವಾ ಹೇಳುವ ಸ್ವಭಾವವನ್ನು ಹೊಂದಿರುತ್ತಾರೆ ಶಾಸ್ತ್ರ ಮತ್ತು ವೇದಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ

ಇವರು ರಹಸ್ಯವನ್ನು ಜೋಪಾನವಾಗಿ ಕಾಪಾಡುತ್ತಾರೆ ಗುಟ್ಟನ್ನು ಬಿಟ್ಟು ಕೊಡುವುದಿಲ್ಲ ಬಹಳ ಜ್ಞಾನವಂತರಾದ ಇವರು ಹಠವಾದಿಗಳಾಗಿರುತ್ತಾರೆ ಹೊಟ್ಟೆಕಿಚ್ಚು,ದ್ವೇಷ, ಮತ್ಸರಗಳಂತಹ ಗುಣಗಳು ಇವರಲ್ಲಿ ಇರುವುದಿಲ್ಲ ಆದರೆ ಯಾರಿಗೂ ತಲೆಬಾಗದಂತಹ ಸ್ವಾಭಿಮಾನಿಗಳಾಗಿರುತ್ತಾರೆ ದಾನ ಮಾಡುವ ಗುಣವು ಹೆಚ್ಚಾಗಿದ್ದು ಸಾಮಾನ್ಯವಾಗಿ ವಿದ್ಯೆಯಲ್ಲಿ ಪರಿಣಿತರಾಗಿರುತ್ತಾರೆ ಜೊತೆಗೆ ಮುಖದಲ್ಲಿ ಆಕರ್ಷಕವಾದ ಕಾಂತಿ ಇರುತ್ತದೆ

ಇವರು ಬೇಗನೆ ಬೇರೆಯವರಿಗೆ ಆಕರ್ಷಕರಾಗುತ್ತಾರೆ ಆದ್ದರಿಂದ ಕುಂಭ ರಾಶಿಯವರಲ್ಲಿ ಪ್ರೇಮ ವಿವಾಹ ಹೆಚ್ಚಾಗಿ ಕಂಡುಬರುತ್ತದೆ ಕುಂಭ ರಾಶಿಗೆ ಶನಿ ಗ್ರಹವು ಅಧಿಪತಿ ಆಗಿರುವುದರಿಂದ ಈ ರಾಶಿಯವರಿಗೆ ವಕೀಲ ವೃತ್ತಿಯೂ ಸರಿಯಾಗಿ ಹೊಂದುತ್ತದೆ ಜೊತೆಗೆ ವ್ಯಾಪಾರ ವ್ಯವಹಾರಗಳು, ಇಂಜಿನಿಯರಿಂಗ್, ಡ್ರೈವಿಂಗ್ ಕೆಲಸಗಳು ಉತ್ತಮವಾಗಿರುತ್ತದೆ.

ಅದೃಷ್ಟ ರತ್ನ-ನೀಲಾ.ಅದೃಷ್ಟ ಬಣ್ಣ-ನೀಲಿ ಮತ್ತು ಹಸಿರು.ಅದೃಷ್ಟದ ದಿನ-ಶನಿವಾರ ಹಾಗೂ ಬುಧವಾರ.ಅದೃಷ್ಟದೇವತೆ-ಶನಿ ದೇವರು ಮತ್ತು ಆಂಜನೇಯ ಸ್ವಾಮಿ.ಶುಭ ಸಂಖ್ಯೆ-5 ಮತ್ತು6.ಮಿತ್ರ ರಾಶಿಗಳು-ಮಿಥುನ, ತುಲಾ.ಶತ್ರು ರಾಶಿಗಳು-ಮೀನಾ, ಸಿಂಹ.ವಿಶೇಷ ಗುಣಗಳು-ಬಹಳ ದಯಾಳುಗಳು, ಜ್ಞಾನಿಗಳು,ಕಲ್ಮಶರಹಿತ ಮನಸ್ಸು.ಸರ್ವ ಬಾಧೆ ನಿವಾರಣೆಗೆ ಶನಿ ಮಂತ್ರ ಪಠಿಸಬೇಕು ಹಾಗೆಯೇ ಶನಿ ದೇವರು ಮತ್ತು ಆಂಜನೇಯ ಸ್ವಾಮಿ ಆರಾಧನೆಯು ಬಹಳ ಸೂಕ್ತವಾಗಿರುತ್ತದೆ

https://www.youtube.com/watch?v=gW7LTzP5d8Q

Leave a Comment