ಮಲಬದ್ಧತೆ ಸಮಸ್ಸೆ ಸಂಪೂರ್ಣವಾಗಿ ನಿವಾರಣೆಯಾಗಲು ಮಧ್ಯಾಹ್ನ, ರಾತ್ರಿ ಈ ಪಲ್ಯವನ್ನು ಸೇವನೆ ಮಾಡಿ!

Kannada News :ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗಲು ಮಧ್ಯಾಹ್ನ ಮತ್ತು ರಾತ್ರಿ ಈ ಪಲ್ಯವನ್ನು ಸೇವನೆ ಮಾಡಿ.ಮಲಬದ್ಧತೆ ಸಮಸ್ಯೆ ಇದೆಯಾ? ತಿಂದಂತ ಆಹಾರ ಜೀರ್ಣವಾಗುತ್ತಿಲ್ಲವಾ, ಮಲಬದ್ಧತೆ ಸಮಸ್ಯೆ ಇರುವ ಕಾರಣ ಟಾಬ್ಲೆಟ್ ಅನ್ನು ತೆಗೆದುಕೊಳ್ಳುತ್ತಿದ್ದರೆ ಅಂತವರಿಗೆ ಈ ಪವರ್ಫುಲ್ ಪಲ್ಯ ಬಗ್ಗೆ ತಿಳಿಸಿಕೊಡುತ್ತೇವೆ. ಈ ಪಲ್ಯವನ್ನು ನೀವು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ನೀವು ಟ್ಯಾಬ್ಲೆಟ್ ತೆಗೆದುಕೊಳ್ಳುವ ಅವಶ್ಯಕತೆ ಕೂಡ ಬರುವುದಿಲ್ಲ ಆಗಿದ್ದರೆ ಆ ಪಲ್ಯ ಯಾವುದು ಅನ್ನುವುದು ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಉತ್ತರ ಕರ್ನಾಟಕದಲ್ಲಿ ಇದಕ್ಕೆ ಕಿರೀಕ್ಸಲಿ ಪಲ್ಯ ಎಂದು ಕರೆಯುತ್ತೇವೆ ಇದರಲ್ಲಿ ಉತ್ತಮವಾದ ನಾರಿನಾಂಶ ಇರುವುದರಿಂದ ಇದನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಇದನ್ನು ನೀವು ಮಧ್ಯಾಹ್ನ ಮತ್ತು ರಾತ್ರಿ ಸೇವನೆ ಮಾಡುವುದರಿಂದ ಮರುದಿನ ಮಲಗಡ್ಡೆಯಾಗುವುದಿಲ್ಲ ಸರಳವಾಗಿ ಹೋಗುತ್ತದೆ ಮಲ ಗಡ್ಡೆಯಾಗಿ ಮಾಡುವುದರಿಂದ ನಿಮಗೆ ಮೂಲವಾದಿ ಅಂತಹ ಸಮಸ್ಯೆ ಕೂಡ ಕಾಡಬಹುದು ಹಾಗಾಗಿ ಯಾವಾಗಲೂ ಕೂಡ ಮಲಬದ್ಧತೆ ಸರಿಯಾಗಿ ಆಗಬೇಕು ಗಟ್ಟಿಯಾಗಿ ಆಗಬಾರದು ಆದಷ್ಟು ಮಲವನ್ನು ಮಾಡುವಾಗ ತಿನ್ಕಿ ಮಾಡಬಾರದು ಇದರಿಂದ ಮೂಲವಾದಿ ಸಮಸ್ಯೆ ಬೇಗನೆ ಬರುತ್ತದೆ.

ಇನ್ನು ಈ ಪಲ್ಯ ಯಾವ ರೀತಿಯಾಗಿ ಮಾಡಬೇಕು ಅಂತ ನೋಡುವುದಾದರೆ ಮೊದಲನೇದಾಗಿ ಇಲ್ಲಿ ನಾವು ಕೀರಿಕ್ಸಲಿ ಪಲ್ಯವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಸೋಸಿಕೊಂಡು ತೊಳೆದು ಇಟ್ಟುಕೊಳ್ಳಬೇಕು ನಂತರ ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ 4 ರಿಂದ 5 ಸ್ಪೂನ್ ನಷ್ಟು ಎಣ್ಣೆಯನ್ನು ಹಾಕಿ ನಂತರ ಇದಕ್ಕೆ ಜೀರಿಗೆ, ಸಾಸಿವೆ ಹಾಗೂ ಬೆಳ್ಳುಳ್ಳಿಯನ್ನು ಹಾಕಬೇಕು ಇವೆಲ್ಲವೂ ಕೂಡ ಚೆನ್ನಾಗಿ ಫ್ರೈ ಆದ ನಂತರ ಇದಕ್ಕೆ ಸ್ವಲ್ಪ ಕರಿಬೇವು ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಬೇಕು ನಂತರ ರುಚಿಗೆ ತಕ್ಕಷ್ಟು ಈರುಳ್ಳಿ ಹಾಕಬೇಕು ಇವೆಲ್ಲವನ್ನು ಕೂಡ ಚೆನ್ನಾಗಿ ಬಾಣೆಲೆಯಲ್ಲಿ ಫ್ರೈ ಮಾಡಬೇಕು ಈರುಳ್ಳಿ ಬ್ರೌನ್ ಕಲರ್ ಬರೋವರೆಗೂ ಕೂಡ ಫ್ರೈ ಮಾಡಬೇಕು.

ನಂತರ ಈ ಒಗ್ಗರಣೆ ರೆಡಿಯಾಗಿದೆ ಈಗ ಕ್ಲೀನ್ ಮಾಡಿ ಇಟ್ಟುಕೊಂಡಿರುವಂತಹ ಸೊಪ್ಪನ್ನು ಇದಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು ಒಗ್ಗರಣೆ ಈ ಸೊಪ್ಪಿನ ಜೊತೆಗೆ ಹೊಂದುವ ರೀತಿ ಮಿಕ್ಸಿ ಮಾಡುತ್ತಾ ಇರಬೇಕು ಕನಿಷ್ಠ ಐದು ನಿಮಿಷದವರೆಗೂ ಇದನ್ನು ಚೆನ್ನಾಗಿ ಮಿಕ್ಸ್ ಮಾಡುತ್ತಾ ಇರಬೇಕು ನಂತರ ಇದಕ್ಕೆ ರುಚಿಗೆ ತಕ್ಕಷ್ಟು ಖಾರ ಹಾಗೂ ಉಪ್ಪನ್ನು ಸೇರಿಸಿ ಮತ್ತೆ ಇದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕಾಗುತ್ತದೆ ಇದಕ್ಕೆ ನೀವು ಬೇಕಾದರೆ ಸ್ವಲ್ಪ ನೀರನ್ನು ಸೇರಿಸಿಕೊಳ್ಳಬಹುದು ಇದನ್ನು ಎರಡರಿಂದ ಮೂರು ನಿಮಿಷದವರೆಗೂ ಬೇಯಿಸಿ ಬಿಡಬೇಕಾಗುತ್ತದೆ ಈಗ ಕಿರಿಕ್ಸಲಿ ಪಲ್ಯ ರೆಡಿಯಾಗಿರುತ್ತದೆ. ಇದು ರೊಟ್ಟಿ ಮತ್ತು ಚಪಾತಿಯೊಂದಿಗೆ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ನೀವು ಕೂಡ ಈ ಪಲ್ಯವನ್ನು ಮಾಡಿಕೊಂಡು ಸೇವನೆ ಮಾಡಿ ನಿಮಗೆ ಏನಾದರೂ ಮಲಬದ್ಧತೆ ಸಮಸ್ಯೆ ಇದ್ದರೆ ಖಂಡಿತವಾಗಲೂ ಈ ಪಲ್ಯವನ್ನು ಮಾಡಿಕೊಂಡು ಸೇವನೆ ಮಾಡಿ ಇದರಿಂದ ಮಲಬದ್ಧತೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ

Leave a Comment