ತುಂಬೆ ಗಿಡದ ಉಪಯೋಗಗಳು!

Medicinal Benefits of leucas- tumbe plant,health benifits in kannadaತುಂಬೆ ಗಿಡ ನೆಲದಿಂದ ಒಂದೆರಡು ಎತ್ತರಕ್ಕೆ ಬೆಳೆದಿರುತ್ತದೆ. ಈ ಗಿಡ ಹೂವು ಬಿಟ್ಟಾಗ ಮಾತ್ರ ಸ್ವಲ್ಪ ಗಮನವನ್ನು ಸೆಳೆಯುತ್ತದೆ. ಇದರ ಹೂವು ಶಿವನಿಗೂ ಕೂಡ ಪ್ರಿಯವಾದ ಹೂವು. ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ ಹೂವುಗಳನ್ನು ಬಳಸಿದ್ದರು. ಈಗಲೂ ಕೂಡ ಶಿವನಿಗೆ ಈ ಹೂವು ಇಷ್ಟ ಅಂತ ಹೇಳಿ ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ.

ಬಹಳಷ್ಟು ಜನ ಈ ಗಿಡದಿಂದ ಏನು ಪ್ರಯೋಜನ ಇಲ್ಲವೆಂದು ನಿರ್ಲಕ್ಷ ಮಾಡುತ್ತಾರೆ. ಆದರೆ ಈ ಸಣ್ಣ ಗಿಡದಲ್ಲಿ ಔಷಧೀಯ ಗುಣವಿದೆ.ತುಂಬೆ ಗಿಡ ಪುಟ್ಟ ಗಿಡ ಹಾಗೂ ಬಿಳಿ ಬಣ್ಣದ ಹೂವುಗಳನ್ನು ಬಿಡುತ್ತದೆ.ಜೊತೆಗೆ ಅಪರೂಪಕ್ಕೆ ಬಣ್ಣದ ತುಂಬೆ ಹೂಗಳು ಅಲ್ಲಲ್ಲಿ ಕಂಡುಬರುತ್ತದೆ. ಇದರ ರಂಬೆ ಮತ್ತು ಕಾಂಡವು ತುಂಬಾ ಮೃದುವಾಗಿದ್ದು ಸಲೀಸಾಗಿ ಬಾಗುವಂತಹ ರಚನೆಯಲ್ಲಿ ಇರುತ್ತದೆ.

ಇದರ ಎಲೆಗಳು ತೆಳುವಾಗಿ ಉದ್ದವಾಗಿ ಇರುತ್ತದೆ. ಇದರ ಬೇರುಗಳು ಭೂಮಿಯಲ್ಲಿ ಹೆಚ್ಚು ಆಳಕ್ಕೆ ಇಳಿಯದೆ ಮೇಲ್ಮಟ್ಟದಲ್ಲಿ ಇರುತ್ತದೆ. ಈ ಗಿಡವು ವೈಜ್ಞಾನಿಕವಾಗಿ ಮತ್ತು ಸಾಮಾಜಿಕವಾಗಿ ಔಷಧೀಯ ಸಸ್ಯವಾಗಿ ಪರಿಗಣಿಸಲಾಗಿದೆ. ಹೊಟ್ಟೆಯಲ್ಲಿ ಹುಳ ಆಗಿದ್ದರೆ ತುಂಬೆ ಹೂವು ಮತ್ತು ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿದರೆ ಹೊಟ್ಟೆಯಲ್ಲಿ ಇರುವಂತಹ ಹುಳಗಳು ನಿವಾರಣೆಯಾಗುತ್ತದೆ.

health benifits in kannada ಇನ್ನು ಪದೇ ಪದೇ ಜ್ವರ ಬರುತ್ತಿದ್ದರೆ ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವನೆ ಮಾಡುವುದರಿಂದ ಜ್ವರ ಕಡಿಮೆಯಾಗುತ್ತದೆ. ಮನೆಯಲ್ಲಿ ಸೊಳ್ಳೆಗಳು ಜಾಸ್ತಿ ಇದ್ದರೆ ತುಂಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಅದನ್ನು ಒಣಗಿಸಿ ಹೊಗೆ ಹಾಕಿದರೆ ಸೊಳ್ಳೆಗಳ ಕಾಟ ಕಡಿಮೆಯಾಗುತ್ತದೆ. ಮನೆಯ ಹತ್ತಿರ ತುಂಬಿ ಗಿಡವನ್ನು ನೆಡುವುದರಿಂದ ಕೀಟಬಾಧೆಯಿಂದ ರಕ್ಷಿಸಬಹುದು. ಇನ್ನು ಮುಖದಲ್ಲಿ ಚರ್ಮ ಅಥವಾ ಅಲರ್ಜಿ ಸಮಸ್ಯೆ ಇದ್ದರೆ. ತುಂಬೆ ಎಲೆಯನ್ನು ಪೇಸ್ಟ್ ಮಾಡಿ ನಿಮ್ಮ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ತುರಿಕೆ ಮತ್ತು ಅಲರ್ಜಿ ಕಡಿಮೆಯಾಗುತ್ತದೆ. ತುಂಬೆ ಎಲೆಯ ಕಷಾಯದಿಂದ ಗಾಯವನ್ನು ತೊಳೆದರೆ ಗಾಯ ಬೇಗನೆ ನಿವಾರಣೆಯಾಗುತ್ತದೆ.ಇನ್ನು ಸಂಧಿವಾತ,ಚರ್ಮರೋಗ ಕೆಮ್ಮು,ಗಂಟಲು ನೋವು,ನೆಗಡಿ ಇನ್ನು ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

Leave a Comment