ಮಂಗಳವಾರದ ದಿನ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ!

Kannada Astrology :ಮಂಗಳವಾರದಂದು ನಾವು ಈ 4 ತಪ್ಪುಗಳನ್ನು ಮಾಡುವುದರಿಂದ ಭಗವಾನ್‌ ಹನುಮಂತನು ನಮ್ಮ ಮೇಲೆ ಕೋಪಿಸಿಕೊಳ್ಳುತ್ತಾನೆ ಎಂದು ಹೇಳಲಾಗುತ್ತದೆ. ಮಂಗಳವಾರದಂದು ನಾವು ಯಾವ 4 ತಪ್ಪುಗಳನ್ನು ಮಾಡಬಾರದು..? ಮಂಗಳವಾರ ಈ 4 ತಪ್ಪುಗಳನ್ನು ಮಾಡಿದರೆ ಹನುಮನು ನಮ್ಮ ಮೇಲೆ ಕೋಪಿಸಿಕೊಳ್ಳುವನು ಎಚ್ಚರ..ತುಂಬೆ ಗಿಡದ ಉಪಯೋಗಗಳು!

ಇಂದು ಮಂಗಳವಾರ ಈ ದಿನದಂದು ಸಂಕಟ ಮೋಚನ ಹನುಮಂತನನ್ನು ಪ್ರಾರ್ಥಿಸುವ ಮೂಲಕ ನಮ್ಮ ಎಲ್ಲಾ ದುಃಖಗಳು ಕೊನೆಗೊಳ್ಳುತ್ತವೆ. ಸನಾತನ ಧರ್ಮವನ್ನು ನಂಬುವವರು ಹನುಮಂತನಲ್ಲಿ ವಿಶೇಷ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆದರೆ ಇತರ ಪಂಗಡಗಳ ಜನರು ಸಹ ಹನುಮಂತನನ್ನು ಸಮಾನ ಗೌರವ ಮತ್ತು ನಂಬಿಕೆಯಿಂದ ಪೂಜಿಸುತ್ತಾರೆ. ಏಕೆಂದರೆ ಹನುಮಂತನ ಕೃಪೆ ಎಲ್ಲಾ ಸಮಾಜಕ್ಕೂ ಒಂದೇ. ಸಂಕಟ ಮೋಚನ ಹನುಮಂತನನ್ನು ಮನಃಪೂರ್ವಕವಾಗಿ ಪೂಜಿಸಿ ಪ್ರಾರ್ಥಿಸುವವನ ಎಲ್ಲಾ ರೀತಿಯ ಕಷ್ಟಗಳು ಶೀಘೃದಲ್ಲೇ ಮುಕ್ತಾಯವಾಗುತ್ತದೆ ಎನ್ನುವ ನಂಬಿಕೆಯಿದೆ. ಈ ದಿನ ಹನುಮಂತನನ್ನು ಪೂಜಿಸುವುದರೊಂದಿಗೆ ಹನುಮಾನ್‌ ಚಾಲೀಸಾವನ್ನು ಕೂಡ ಆಚರಿಸಲಾಗುತ್ತದೆ.

ಕೆಲವೆಡೆ ಈಗಾಗಲೇ ಜ್ಯೇಷ್ಠ ಮಾಸವು ಆರಂಭವಾಗಿದ್ದು, ಜ್ಯೇಷ್ಠ ಮಾಸದಲ್ಲಿ ಬರುವ ಮಂಗಳವಾರವನ್ನು ದೊಡ್ಡ ಮಂಗಳವಾರ ಎಂದು ಆಚರಿಸಲಾಗುತ್ತದೆ. ಈ ದಿನ ಹನುಮಂತನನ್ನು ಪೂರ್ಣ ಭಕ್ತಿ ಮತ್ತು ಶ್ರದ್ಧೆಯಿಂದ ಪೂಜಿಸಬೇಕು ಎನ್ನುವ ನಂಬಿಕೆಯಿದೆ. ಈ ದಿನ ಈ 4 ಕೆಲಸಗಳನ್ನು ಮರೆತು ಕೂಡ ಮಾಡಬಾರದು ಎಂದು ಹೇಳಲಾಗುತ್ತದೆ. ಈ 4 ಕೆಲಸಗಳನ್ನು ಮಾಡುವುದರಿಂದ ಭಗವಾನ್‌ ಹನುಮಂತನು ನಮ್ಮ ಮೇಲೆ ಕೋಪಿಸಿಕೊಳ್ಳಬಹುದು ಎನ್ನುವ ನಂಬಿಕೆಯಿದೆ. ಹನುಮಂತನ ಕೋಪವು ನಮ್ಮ ಜೀವನವನ್ನು ದುಃಖದ ಸಾಗರದಲ್ಲಿ ಮುಳುಗಿಸುತ್ತದೆ.ತುಂಬೆ ಗಿಡದ ಉಪಯೋಗಗಳು!

ಮಂಗಳವಾರದ ಈ 4 ಕೆಲಸಗಳನ್ನು ಮಾಡಬೇಡಿ:ಈ ಮಂಗಳವಾರದ ದಿನದಂದು ಓರ್ವ ವ್ಯಕ್ತಿಯು ಹನುಮಂತನ ನಾಮಸ್ಮರಣೆಯನ್ನು ಮಾಡುವುದರಿಂದ ಅವನು ಎಲ್ಲಾ ತೊಂದರೆಗಳು ಮತ್ತು ದುಃಖಗಳಿಂದ ಮುಕ್ತಿಯನ್ನು ಪಡೆಯುತ್ತಾನೆ. ಆ ವ್ಯಕ್ತಿಯ ಯಾವುದೇ ಕೆಲಸವು ಅರ್ಧಕ್ಕೆ ನಿಂತುಕೊಂಡಿದ್ದರೆ ಹನುಮಂತನ ನಾಮ ಸ್ಮರಣೆಯಿಂದ ಮತ್ತೆ ಪುನರಾರಂಭಗೊಳ್ಳುತ್ತದೆ. ಮಂಗಳವಾರದಂದು ನಾವು ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಗೊತ್ತೇ..?

ಸಾಲ ಪಡೆಯಬೇಡಿ:ಆರ್ಥಿಕ ಸಮೃದ್ಧಿಗಾಗಿ, ಯಾವುದೇ ರೀತಿಯ ಸಾಲದ ವಹಿವಾಟುಗಳನ್ನು ಮಂಗಳವಾರದಂದು ತಪ್ಪಿಸುವುದು ಅವಶ್ಯಕ. ಈ ದಿನ ನೀವು ಯಾವುದೇ ವ್ಯಕ್ತಿಗೆ ಸಾಲ ನೀಡಬೇಡಿ ಅಥವಾ ಯಾರಿಂದಲೂ ಸಾಲ ಪಡೆಯಬೇಡಿ.

ಈ ದಿಕ್ಕಿನತ್ತ ಪ್ರಯಾಣ ಮಾಡಬೇಡಿ:ಮಂಗಳವಾರವು ಸಂಕಟ ಮೋಚನ ಹನುಮಂತನ ದಿನವಾಗಿದೆ. ಈ ದಿನ ನೀವು ಯಾವುದೇ ಕೆಲಸವನ್ನು ಮಾಡಲು ಹೊರಟರೆ ಮೊದಲು ಹನುಮಂತನ ನಾಮ ಸ್ಮರಣೆಯನ್ನು ಮಾಡಿ ನಂತರ ಕೆಲಸವನ್ನು ಆರಂಭಿಸಬೇಕು. ಆದರೆ ಅಗತ್ಯವಿಲ್ಲದಿದ್ದರೆ, ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದನ್ನು ತಪ್ಪಿಸಬೇಕು. ತೀರಾ ಅವಶ್ಯವಿದ್ದಲ್ಲಿ ಬೆಲ್ಲವನ್ನು ತಿಂದು ನಂತರ ಈ ದಿಕ್ಕಿನಲ್ಲಿ ಪ್ರಯಾಣವನ್ನು ಆರಂಭಿಸಬಹುದು.

ಈ ಬಣ್ಣದ ಬಟ್ಟೆಯನ್ನು ಧರಿಸಬಾರದು:ಹನುಮಂತನಿಗೆ ಕೆಂಪು ಬಣ್ಣ ತುಂಬಾ ಪ್ರಿಯವೆಂದು ಪರಿಗಣಿಸಲಾಗುವುದು. ಆದ್ದರಿಂದ, ಈ ದಿನ ಶನಿದೇವನಿಗೆ ಪ್ರಿಯವಾದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಹನುಮಂತನ ಆಶೀರ್ವಾದವನ್ನು ಪಡೆಯುವುದಿಲ್ಲ. ಮಂಗಳವಾರದಂದು ಜನರು ಕಪ್ಪು ಬಟ್ಟೆಗಳನ್ನು ಧರಿಸಬಾರದು.

ಇವುಗಳನ್ನು ಸೇವಿಸಬಾರದು:ಮಂಗಳವಾರದಂದು ಹನುಮಂತನನ್ನು ಪೂಜಿಸಿದ ನಂತರ, ಆ ಕುಟುಂಬದ ಯಾವುದೇ ಸದಸ್ಯರು ಮೊಟ್ಟೆ, ಮಾಂಸ, ಮೀನು, ಮದ್ಯ ಸೇವಿಸಬಾರದು. ಈ ದಿನ ಅವರು ಸಾತ್ವಿಕ ಜೀವನ ನಡೆಸಬೇಕು. ಉಪ್ಪನ್ನು ಕೂಡ ಮಂಗಳವಾರದಂದು ಬಳಸಬಾರದು.Kannada Health Tips :ಆಲೂಗಡ್ಡೆಯಲ್ಲಿ ಸೌಂದರ್ಯದ ಗುಣಗಳು ಏನು ಗೊತ್ತಾ?

Kannada Astrology :ಮಂಗಳವಾರದಂದು ಈ ಮೇಲಿನ ಕೆಲಸಗಳನ್ನು ಮಾಡುವುದರಿಂದ ಭಗವಾನ್‌ ಹನುಮಂತನು ನಿಮ್ಮ ಮೇಲೆ ಕೋಪಿಸಿಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಇದರಿಂದ ನಿಮ್ಮೆಲ್ಲಾ ಕೆಲಸಗಳು ಅರ್ಧಕ್ಕೆ ನಿಂತು ಹೋಗಬಹುದು ಹಾಗೂ ನಮ್ಮ ಜೀವನವು ದುಃಖದ ಸಾಗರದಲ್ಲಿ ಮುಳುಗಿ ಹೋಗಬಹುದು.

Leave a Comment