Kannada health tips:ಭಾರತಿಯಾ ಮನೆಗಳಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುತ್ತಾರೆ.ಇದು ತನ್ನ ವಿಶಿಷ್ಟ ಕಟುವಾದ ಪರಿಮಳದಿಂದ ಭಕ್ಷವನ್ನು ರುಚಿ ಆಗಿಸುತ್ತದೆ.ಈ ಬೆಳ್ಳುಳ್ಳಿಯು ಸಾಕಷ್ಟು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ.ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಒಟ್ಟಾರೆ ಬೆಳ್ಳುಳ್ಳಿ ಆಂಟಿ ಫಂಗಲ್ ಗುಣವನ್ನು ಹೊಂದಿದೆ. ಬೆಳ್ಳುಳ್ಳಿ ಎಣ್ಣೆಯು ಕೂಡ ಸಾಕಷ್ಟು ಪ್ರಯೋಜನಕಾರಿ. ಸಾಂಪ್ರದಾಯಕವಾಗಿ ಇದು ದಿವ್ಯ ಔಷಧಿಯಾಗಿದೇ. ಇದು ಅನೇಕ ಆರೋಗ್ಯ ಮತ್ತು ಸೌಂದರ್ಯ ಪರಿಸ್ಥಿತಿಗಳಿಗೆ ಈ ಎಣ್ಣೆಯೂ ಜನಪ್ರಿಯವಾಗಿದೆ.
1, ಬೆಳ್ಳುಳ್ಳಿ ಎಣ್ಣೆಯು ಮೊಡವೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಇದು ಮೊಡವೆಗಳನ್ನು ಚಿಕಿತ್ಸೆ ನೀಡಿ ಅದರಲ್ಲಿ ಇರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.ಮುಖ್ಯವಾಗಿ ಬೆಳ್ಳುಳ್ಳಿಯಲ್ಲಿ ಸೆಲೆನಿಯಂ ಅಲೆಸಿನ್ ವಿಟಮಿನ್ ಸಿ ತಾಮ್ರ ಮತ್ತು ಸತು ಇದೆ.ಇವೆಲ್ಲವೂ ಚರ್ಮದ ಆರೋಗ್ಯವನ್ನು ಹೆಚ್ಚು ಕಾಪಾಡುತ್ತದೆ.ಸತು ವಿಶೇಷವಾಗಿ ಮೆದುಳಿನ ಗ್ರಂಥಿಗಳ ಸ್ರವ ಉತ್ಪಾದನೆಯನ್ನು ನಿಯಂತ್ರಿಸುತ್ತದೆ.
2, ಬೆಳ್ಳುಳ್ಳಿ ಎಣ್ಣೆಯನ್ನು ನೀವು ಬಳಸುವ ಫೇಸ್ ಪ್ಯಾಕ್ ಗಳಲ್ಲಿ ಬಳಸಿ. ಇದರಿಂದ ಮೊಡವೆ ರಹಿತ ಚರ್ಮವನ್ನು ನೀವು ಪಡೆಯಬಹುದು.3, ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದು ಶೀತ ಮತ್ತು ಕೆಮ್ಮಿಗೆ ಚಿಕಿತ್ಸೆ ನೀಡುತ್ತದೆ.4,ಬೆಳ್ಳುಳ್ಳಿ ಎಣ್ಣೆಯೂ ಸಾಂಪ್ರದಾಯಕವಾದ ಔಷಧವಾಗಿದ್ದು ದೀರ್ಘಕಾಲದ ಅರೋಗ್ಯ ಸಮಸ್ಸೆಗಳು ಬಾರದಂತೆ ತಡೆಯುತ್ತದೆ.
5, ಬೆಳ್ಳುಳ್ಳಿ ಎಣ್ಣೆಯಲ್ಲಿ ವಿಟಮಿನ್ ಸಿ, ಬಿ1, ಬಿ6, ಕಬ್ಬಿಣ, ರಂಜಕ ಪೋಷಕಾಂಶಗಳು ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಹಾಗಾಗಿ ನಿಯಮಿತವಾಗಿ ಬೆಳ್ಳುಳ್ಳಿ ಎಣ್ಣೆಯನ್ನು ಬಳಸಿ.
6, ಇನ್ನು ಬೆಳ್ಳುಳ್ಳಿ ಎಣ್ಣೆಯನ್ನು ಅಲೀವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಉಗುರು ಬೆಚ್ಚಗೆ ಬಿಸಿ ಮಾಡಿಕೊಳ್ಳಿ. ತಣ್ಣಗೆ ಅದ ಬಳಿಕ ಹತ್ತಿಯ ಸಹಾಯದಿಂದ ಎರಡು ಹನಿ ಎಣ್ಣೆಯನ್ನು ಕೀವಿಗೆ ಹಾಕಿ.ಇದರಿಂದ ಕಿವಿಯ ಸೋಂಕು ನಿವಾರಣೆ ಆಗುತ್ತದೆ.
Kannada health tips:7,ಅಷ್ಟೇ ಅಲ್ಲದೇ ಬೆಳ್ಳುಳ್ಳಿ ಎಣ್ಣೆ ಉರಿಯುತ ಮತ್ತು ಹಲ್ಲಿನ ನೋವನ್ನು ಕಡಿಮೆ ಮಾಡುತ್ತದೆ.8, ಬೆಳ್ಳುಳ್ಳಿ ಚರ್ಮಕ್ಕೂ ಮತ್ತು ಕೂದಲಿಗೂ ಕೂಡ ಸಾಕಷ್ಟು ಪ್ರಯೋಜನಕರಿ ಆಗಿದೆ.