Kannada health News ಅವರೆಕಾಳಿನಲ್ಲಿ ಹಲವಾರು ಬಗೆಯ ವಿಟಮಿನ್ ಗಳು ಖನಿಜಾಂಶಗಳು ಪ್ರೊಟೀನ್ ಮತ್ತು ನಾರಿನಂಶವಿದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಅವರೇಕಾಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಶೀತ ನೆಗಡಿಗೆ ಒಳ್ಳೆಯದು.ಇದರಿಂದ ಆರೋಗ್ಯದ ಲಾಭಗಳು ದೊರೆಯುತ್ತದೆ. ಹಾಗಾದರೆ ಅವರೆಕಾಳಿನಿಂದ ಸಿಗುವ ಆರೋಗ್ಯದ ಲಾಭದ ಬಗ್ಗೆ ತಿಳಿಯೋಣ.
1,ಇದು ಜೀರ್ಣಕ್ರಿಯೆಗೆ ಉತ್ತಮ.–ಅವರೆಕಾಳು ಸೇವನೆಯು ಜೀರ್ಣಕ್ರಿಯೆಗೆ ಉತ್ತಮ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದರಿಂದ ಕರುಳಿನ ಆರೋಗ್ಯವೂ ಸುಧಾರಿಸುತ್ತದೆ.ಇನ್ನು ಇದರಲ್ಲಿರುವ ನಾರಿನಾಂಶವು ಕರುಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
Body Heat :ದೇಹದ ಉಷ್ಣತೆ ಶೀಘ್ರವಾಗಿ ಕಡಿಮೆ ಆಗಬೇಕು ಎಂದರೆ ಒಂದು ಕಪ್ ಇದನ್ನು ತಿನ್ನಿ ಸಾಕು!
2, ಅವರೆಕಾಳು ದೇಹದಲ್ಲಿ ಶಕ್ತಿಯನ್ನು ವೃದ್ಧಿಸುತ್ತದೆ.-ಅವರೆಕಾಳಿನಲ್ಲಿ ವಿಟಮಿನ್ ಬಿ ಹೆಚ್ಚಾಗಿರುವುದರಿಂದ ಇದು ದೇಹದ ಅಂಗಾಂಗಗಳಿಗೆ ಬೇಕಾಗಿರುವ ಶಕ್ತಿಯನ್ನು ನೀಡುತ್ತದೆ. ಅವರೆಕಾಳು ದೇಹಕ್ಕೆ ಅಗತ್ಯ ಇರುವ ಶಕ್ತಿಯನ್ನು ಒದಗಿಸುತ್ತಾದೆ ಮತ್ತು ನಿಶಕ್ತಿಯನ್ನು ದೂರಮಾಡುತ್ತದೆ.
3, ಮೆದುಳಿನ ಆರೋಗ್ಯಕ್ಕೆ ಉತ್ತಮ.-ಅವರೆಕಾಳನ್ನು ಸೇವನೆ ಮಾಡುವುದರಿಂದ ಮೆದುಳಿನ ಕ್ರಿಯೆಯು ಉತ್ತಮವಾಗಿರುತ್ತದೆ. ಇದರಲ್ಲಿ ಇರುವಂತಹ ತಾಮ್ರದ ಅಂಶವು ಮಾನಸಿಕ ನಿಶಕ್ತಿಯನ್ನು ಕಡಿಮೆ ಮಾಡುತ್ತದೆ ಮತ್ತು ಏಕಾಗ್ರತೆಯನ್ನು ವೃದ್ಧಿಸುತ್ತದೆ.
4, ಅವರೆಕಾಳು ಸೇವನೆ ಮಾಡುವುದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಲ್ಲಿರುವ ಮೆಗ್ನೀಷಿಯಂ ಅಂಶವು ಒತ್ತಡವನ್ನು ಸುಧಾರಣೆ ಮಾಡುತ್ತದೆ.ಮೆಗ್ನೀಷಿಯಂ ನಿದ್ರಾಹೀನತೆಯನ್ನು ತಡೆಯುತ್ತದೆ. ಇದನ್ನು ಸೇವನೆ ಮಾಡುವುದರಿಂದ ರಾತ್ರಿವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.
5, ಇನ್ನು ಅವರೆಕಾಳು ಸೇವನೆ ಮಾಡುವುದರಿಂದ ರಕ್ತದ ಒತ್ತಡವನ್ನು ತಗ್ಗಿಸುತ್ತದೆ. ಇದರಲ್ಲಿ ಇರುವ ಉತ್ತಮ ಪೋಷಕಾಂಶ ಆರೋಗ್ಯಕ್ಕೆ ತುಂಬಾ ಒಳ್ಳೆಯದು.6, ಶ್ವಾಸಕೋಶದ ಕಾರ್ಯ ಸುಧಾರಣೆಗೆ ಉತ್ತಮ.-ಶ್ವಾಸಕೋಶ ಸಮಸ್ಯೆಯಿರುವವರಿಗೆ ಅವರೆಕಾಳಿನಿಂದ ಹಲವಾರು ಲಾಭಗಳು ಸಿಗುತ್ತದೆ.ಇದು ಉರಿಯೂತವನ್ನು ಕಡಿಮೆ ಮಾಡಿ ವಾಯು ನಾಳವನ್ನು ತೆರೆಯುತ್ತದೆ. ಇದರಿಂದ ಸರಿಯಾಗಿ ಉಸಿರಾಡಲು ಸಾಧ್ಯ.
Body Heat :ದೇಹದ ಉಷ್ಣತೆ ಶೀಘ್ರವಾಗಿ ಕಡಿಮೆ ಆಗಬೇಕು ಎಂದರೆ ಒಂದು ಕಪ್ ಇದನ್ನು ತಿನ್ನಿ ಸಾಕು!
7, ಅವರೆಕಾಳು ಸೇವನೆ ಮಾಡುವುದರಿಂದ ಮೂಳೆಗಳನ್ನು ಬಲಪಡಿಸಬಹುದು.8, ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.9, ಹೃದಯದ ಆರೋಗ್ಯವನ್ನು ಇದು ಸುಧಾರಿಸುತ್ತದೆ. ಇದರಲ್ಲಿ ಕಬ್ಬಿಣ ಅಂಶ ಇರುವುದರಿಂದ ರಕ್ತಹೀನತೆಗೆ ಉತ್ತಮ.
10, ನಾರಿನಂಶವಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಇಷ್ಟೆಲ್ಲಾ ಲಾಭವಿರುವ ಅವರೆಕಾಳನ್ನು ಎಲ್ಲರೂ ಸೇವನೆ ಮಾಡುವ ಆಗಿಲ್ಲ. ಅಧಿಕ ರಕ್ತದೊತ್ತಡ ಇರುವವರು ಮಾತ್ರೆಗಳನ್ನು ತೆಗೆದುಕೊಳ್ಳುವವರು ಅವರೆಕಾಳನ್ನು ಸೇವನೆ ಮಾಡಬಾರದು. ಇನ್ನು ಇದನ್ನು ಅತಿಯಾಗಿ ಸೇವನೆ ಮಾಡಬಾರದು. ಇದರಿಂದ ಗ್ಯಾಸ್ ಹೊಟ್ಟೆ ಉಬ್ಬರದ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲದೇ ಗರ್ಭಿಣಿ ಮಹಿಳೆಯರು ಕೂಡ ಸೇವನೆ ಮಾಡಬಾರದು.Kannada health News