ದಿನ ಬೆಳಿಗ್ಗೆ ಬೇಗನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದರೆ ಆಗೋ ಪರಿಣಾಮಗಳು ಏನು ಗೊತ್ತಾ?

Waking up early in the morning on Brahmi Muhurta :ಪುರಾತನ ಹಿಂದೂ ಪವಿತ್ರ ಗಂಥಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಎಲ್ಲರೂ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ವಿದ್ಯಾಭ್ಯಾಸ ಮಾಡಿದರೆ ಅವರಿಗೆ ಕಷ್ಟವಾದದ್ದು ಕೂಡಾ ಸುಲಭವಾಗಿ ಅರ್ಥವಾಗುವುದಂತೆ. ಅಷ್ಟೇ ಅಲ್ಲ. ದೀರ್ಘಕಾಲದವರೆಗೆ ಅದು ನೆನಪಿರುತ್ತದೆ.

ಹಿರಿಯರು ಇರುವ ಮನೆಯಲ್ಲಿ ಯಾರಾದರೂ ತಡವಾಗಿ ಎದ್ದರೆ ಮುಗಿಯಿತು. ಅದರಲ್ಲೂ ಹೆಣ್ಣು ಮಕ್ಕಳು ಲೇಟ್ ಆಗಿ ಎದ್ದರೆ ಬೈಗುಳಗಳ ಸುರಿಮಳೆ ತಪ್ಪಿದ್ದಲ್ಲ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹಿರಿಯರು ಆಗ್ಗಾಗ್ಗೆ ತಿಳಿ ಹೇಳುತ್ತಾರೆ. ಇದಕ್ಕೆ ಕೆಲವೊಂದು ಕಾರಣಗಳು ಕೂಡಾ ಇವೆ.

ಸಾಮಾನ್ಯವಾಗಿ ಹಿರಿಯರು ಸೂರ್ಯೋದಯದ ವೇಳೆಗೆ ಎದ್ದು ಮನೆ ಕೆಲಸಗಳಲ್ಲಿ ನಿರತಾಗುತ್ತಾರೆ. ಇನ್ನೂ ಕೆಲವರು ಸೂರ್ಯ ಹುಟ್ಟುವ ಮುನ್ನವೇ ನಿದ್ರೆಯಿಂದ ಎದ್ದಿರುತ್ತಾರೆ. ಈ ಅಭ್ಯಾಸ ಇರುವುದರಿಂದಲೇ ಅವರೆಲ್ಲಾ ಇಂದಿಗೂ ಆರೋಗ್ಯವಾಗಿದ್ದಾರೆ. ಆದ್ದರಿಂದ ಮನೆಮಂದಿಗೂ ಬೇಗ ಏಳುವಂತೆ ಸಲಹೆ ನೀಡುತ್ತಾರೆ.

ಬೇಗ ಎಂದರೆ ಯಾವ ಸಮಯಕ್ಕೆ ಏಳಬೇಕು…? ಏಳಲು ಯಾವುದಾದರೂ ನಿರ್ದಿಷ್ಟ ಸಮಯ ಏನಾದರೂ ಇದೆಯೇ..? ಎನ್ನುವುದು ಹಲವರ ಪ್ರಶ್ನೆಯಾಗಿದೆ. ಪುರಾತನ ಹಿಂದೂ ಪವಿತ್ರ ಗಂಥಗಳ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಎಲ್ಲರೂ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಯಾವ ಸಮಯದಲ್ಲಿ ಎದ್ದರೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ಆಯುರ್ವೇದ ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಆದ್ದರಿಂದಲೇ ಬ್ರಹ್ಮ ಮುಹೂರ್ತದಲ್ಲಿ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹಿರಿಯರು ಸಲಹೆ ನೀಡುತ್ತಾರೆ. ವಿದ್ಯಾರ್ಥಿಗಳು ಬ್ರಹ್ಮ ಮುಹೂರ್ತದಲ್ಲಿ ವಿದ್ಯಾಭ್ಯಾಸ ಮಾಡಿದರೆ ಅವರಿಗೆ ಕಷ್ಟವಾದದ್ದು ಕೂಡಾ ಸುಲಭವಾಗಿ ಅರ್ಥವಾಗುವುದಂತೆ. ಅಷ್ಟೇ ಅಲ್ಲ. ದೀರ್ಘಕಾಲದವರೆಗೆ ಅದು ನೆನಪಿರುತ್ತದೆ

ಸೂರ್ಯೋದಯ ಅಥವಾ ಅದಕ್ಕಿಂತ ಮುನ್ನ ಎದ್ದರೆ, ನಿಮ್ಮ ಕೆಲಸಗಳು ಬೇಗನೆ ಮುಗಿಯುತ್ತದೆ. ಹೆಚ್ಚು ಕಾಲ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಬಹುದು. ಇದರಿಂದ ಮತ್ತಷ್ಟು ಶಕ್ತಿಯುತವಾಗಿ, ಲವಲವಿಕೆಯಿಂದ ಕೆಲಸ ಮಾಡಬಹುದು. ಇಡೀ ದಿನ ಚುರುಕಿನಿಂದ ಇರುತ್ತೀರಿ. ಯಾವಾಗಲೂ ಆರೋಗ್ಯದಿಂದ ಇರುತ್ತೀರಿ. ಆದರೆ ನೀವು ತಡವಾಗಿ ಎದ್ದರೆ ನಿಮ್ಮನ್ನು ಜಡತ್ವ ಆವರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಆಯುರ್ವೇದ ತಜ್ಞೆ ಡಾ. ದೀಕ್ಷಾ ಭಾವಸರ್​​​​​​​​, ಬ್ರಹ್ಮ ಮುಹೂರ್ತದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೀಡಿದ್ದಾರೆ.

ಬ್ರಹ್ಮ ಮುಹೂರ್ತದ ಸಮಯ ಯಾವುದು…?

ಸೂರ್ಯೋದಯಕ್ಕೆ 1:30 ನಿಮಿಷದ ಮೊದಲಿನ ಸಮಯವನ್ನು ಬ್ರಹ್ಮ ಮುಹೂರ್ತ ಎನ್ನಲಾಗುತ್ತದೆ. ಬ್ರಹ್ಮ ಮುಹೂರ್ತ ಅಥವಾ ಬ್ರಾಹ್ಮಿ ಮುಹೂರ್ತ ಸುಮಾರು 48 ನಿಮಿಷಗಳ ಕಾಲ ಇರುತ್ತದೆ. ಈ ಸಮಯದಲ್ಲಿ ಎದ್ದು ಕೆಲಸ ಕಾರ್ಯಗಳಲ್ಲಿ ತೊಡಗಿದರೆ ಬಹಳಷ್ಟು ಪ್ರಯೋಜನಗಳಿವೆ ಎನ್ನಲಾಗಿದೆ. ಬ್ರಾಹ್ಮಿ ಮುಹೂರ್ತಕ್ಕೆ ಸಂಬಂಧಿಸಿದಂತೆ ವಾಲ್ಮೀಕಿ ರಾಮಾಯಣದಲ್ಲಿ ಒಂದು ಕಥೆ ಇದೆ. ಭಗವಾನ್ ಹನುಮಾನ್, ಇದೇ ಬ್ರಾಹ್ಮಿ ಮುಹೂರ್ತದಲ್ಲಿ, ರಾವಣನು ಸೀತೆಯನ್ನು ಇರಿಸಿದ್ದ ಅಶೋಕ ವನವನ್ನು ತಲುಪಿ, ಅಲ್ಲಿ ವೇದ ಮಂತ್ರಗಳನ್ನು ಪಠಿಸಿ, ಆ ಸ್ಥಳದಲ್ಲಿ ಸೀತಾದೇವಿ ಇರುವುದನ್ನು ಖಚಿತಪಡಿಸಿಕೊಂಡರೆಂದು ಪುರಾಣಗಳಲ್ಲಿ ಹೇಳಲಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಪೂಜೆ, ಹೋಮ, ಗೃಹಪ್ರವೇಶಗಳಂತಹ ಶುಭ ಸಮಾರಂಭಗಳು ಕೂಡಾ ನೆರವೇರುತ್ತದೆ.

ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ನೀವು ಜ್ಞಾನವಂತರಾಗುತ್ತೀರಿ, ಜ್ಞಾಪಕ ಶಕ್ತಿ ವೃದ್ಧಿಸುತ್ತದೆ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ, ಏಕಾಗ್ರತೆ ಹೆಚ್ಚುತ್ತದೆ. ಧ್ಯಾನ ಮಾಡಲು, ವಿದ್ಯಾಭ್ಯಾಸ, ವ್ಯಾಯಾಮ ಮಾಡಲು ಈ ಬಹ್ಮ ಮುಹೂರ್ತ ಕ್ಕಿಂತ ಉತ್ತಮ ಸಮಯ ಬೇರೊಂದಿಲ್ಲ ಎನ್ನುತ್ತಾರೆ ಡಾಕ್ಟರ್ ದೀಕ್ಷಾ.Waking up early in the morning on Brahmi Muhurta

Leave a Comment