ಪ್ರತಿದಿನ ಪ್ರತಿಯೊಬ್ಬರು ಬೇರೆ ಬೇರೆ ರೀತಿಯ ತರಕಾರಿಗಳನ್ನು ಬಳಸುತ್ತಾರೆ. ಬೇರೆ ಬೇರೆ ರೀತಿಯ ತರಕಾರಿಗಳು ಬೇರೆ ಬೇರೆ ರೀತಿಯ ಅರೋಗ್ಯ ಸಮಸ್ಸೆಗಳನ್ನು ದೂರ ಇಡುವುದರಲ್ಲಿ ತುಂಬಾನೇ ಸಹಾಯ ಮಾಡುತ್ತದೆ. ಅದರಲ್ಲಿ ಬಿಟ್ರೋಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಬಿಟ್ರೋಟ್ ಜ್ಯೂಸ್ ಹೇಗೆ ಮಾಡಿ ಕುಡಿಯೋದು ಎಂದು ತಿಳಿಸಿಕೊಡುತ್ತೇವೆ.
ಮೊದಲು ಒಂದು ಬಿಟ್ರೋಟ್ ಅನ್ನು ಸಿಪ್ಪೆ ತೆಗೆದು ಕಟ್ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಅರ್ಧ ಇಂಚು ಹಸಿ ಶುಂಠಿ ಹಾಕಿ ಜ್ಯೂಸ್ ಮಾಡಿಕೊಳ್ಳಿ. ಆದಷ್ಟು ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ತುಂಬಾನೇ ಒಳ್ಳೆಯದು. ವಾರದಲ್ಲಿ ಒಂದು ಅಥವಾ ಎರಡು ಬಾರಿ ಕುಡಿದರು ಸಹ ಬಹಳ ಒಳ್ಳೆಯದು.
ಅರೋಗ್ಯ ಪ್ರಯೋಜನಗಳು
ಇದು ಒಂದು ಎನರ್ಜಿ ಬೂಸ್ಟರ್ ಅಂತ ಹೇಳಬಹುದು. ತಕ್ಷಣ ದೇಹಕ್ಕೆ ಶಕ್ತಿಯನ್ನು ಒದಗಿಸುವುದಕ್ಕೆ ಬಿಟ್ರೋಟ್ ಜ್ಯೂಸ್ ತುಂಬಾನೇ ಸಹಾಯ ಆಗುತ್ತದೆ.
ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಕೂಡ ಒಂದು ಬೆಸ್ಟ್ ಮನೆಮದ್ದು ಇದು. ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಬೇರೆ ಬೇರೆ ರೀತಿಯ ಪೋಷಕಾಂಶಗಳನ್ನು ಇದು ನಮಗೆ ಒದಗಿಸುತ್ತದೆ.
ಮೆದುಳಿನ ಅರೋಗ್ಯಕ್ಕೂ ಕೂಡ ತುಂಬಾನೇ ಒಳ್ಳೆಯದು. ಮೆದುಳಿಗೆ ರಕ್ತದ ಅರಿವು ಸರಿಯಾಗಿ ಆಗುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ. ಇದರಿಂದ ಮೆದುಳು ಸರಾಗವಾಗಿ ಕಾರ್ಯ ಮಾಡುವುದಕ್ಕೆ ಸಹಾಯ ಆಗುತ್ತದೆ.
ಬಿಟ್ರೋಟ್ ಜ್ಯೂಸ್ ದೇಹದಲ್ಲಿ ಇರುವ ಲಿವರ್ ನ ಅರೋಗ್ಯ ಕಾಪಾಡುವುದಕ್ಕೆ ಮತ್ತು ಲಿವರ್ ಅನ್ನು ಡಿಟ್ಯಾಕ್ಸ್ ಮಾಡುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತದೆ. ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕುವುದಕ್ಕೆ ಇದು ಸಹಾಯ ಮಾಡುತ್ತದೆ.
ಇನ್ನು ಹೈ ಬಿಪಿ ಸಮಸ್ಸೆ ಇರುವವರಿಗೆ ತುಂಬಾನೇ ಒಳ್ಳೆಯದು. ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಇದು ಸಹಾಯ ಮಾಡುತ್ತದೆ. ಯಾರು ಹೈಪರ್ ಟೆನ್ಶನ್ ಸಮಸ್ಸೆಯಿಂದ ಬಳಳುತ್ತ ಇರುತ್ತಾರೋ ಅವರಿಗೆ ಬಿಟ್ರೋಟ್ ಜ್ಯೂಸ್ ತುಂಬಾ ಒಳ್ಳೆಯದು. ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದಕ್ಕೆ ಸಹಾಯವಾಗುತ್ತದೆ.