ಮನೆಯಲ್ಲಿ ಅಡುಗೆ ಮನೆಯಲ್ಲಿ ಅಥವಾ ವಾರ್ಡ್ ಡ್ರಾಬ್ ನಲ್ಲಿ ಬಟ್ಟೆ ಇಡುವ ಕಡೆ ಎಲ್ಲಾ ಜಿರಳೆಗಳು ಇದ್ದೆ ಇರುತ್ತವೆ. ಇವತ್ತು ಜಿರಳೆ ಓಡಿಸುವುದಕ್ಕೆ ಸುಲಭವಾದ ಟಿಪ್ಸ್ ಅನ್ನು ಹೇಳುತ್ತೇವೇ. ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಉಪಯೋಗಿಸಿ ಮಾಡುವಂತಹದು.
ಮೊದಲು ಎರಡು ಕರ್ಪೂರ ಹಾಗು ಒಂದು ಊದುಬತ್ತಿ ತೆಗೆದುಕೊಳ್ಳಿ. ಇವೆರಡರ ವಾಸನೆಗೆ ಜಿರಳೆಗಳು ಬರುವುದಿಲ್ಲ. ಇವೆರಡನ್ನು ಪುಡಿ ಮಾಡಿಕೊಂಡು ಅರ್ಧ ಗ್ಲಾಸ್ ನೀರನ್ನು ಹಾಕಬೇಕು. ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬಹುದು. ನಂತರ ಇದನ್ನು ಮೂಲೆ ಮೂಲೆಗು ಸ್ಪ್ರೇ ಮಾಡಬೇಕು. ಈ ರೀತಿ ಮಾಡಿದರೆ ಇದರ ಸುವಾಸನೆಗೆ ಜಿರಳೆಗಳು ಬರುವುದಿಲ್ಲ.
ಇನ್ನು ಹತ್ತಿಯಿಂದ ಮಿಕ್ಸ್ ಮಾಡಿರುವ ನೀರಿನ ಒಳಗೆ ಅದ್ದಿ ವಾರ್ಡ್ ಡ್ರಾಬ್ ಮತ್ತು ಕಾಂಬೋರ್ಡ್ ಹತ್ತಿರ ಇಟ್ಟರೆ ಸಾಕು ಜಿರಳೆಗಳು ಹತ್ತಿರಕ್ಕೂ ಸುಳಿಯುವುದಿಲ್ಲ.