ಸಿರಿ ಸಂಪತ್ತು ಮತ್ತು ಐಶ್ವರ್ಯ ವೃದ್ಧಿ ಆಗಬೇಕು ಎಂದರೆ ಈ ಒಂದು ದೀಪರಾಧನೆಯನ್ನು ಲಕ್ಷ್ಮಿ ದೇವಿ ಮುಂದೆ ಕಡ್ಡಾಯವಾಗಿ ಮಹಿಳೆಯರು ಮಾಡಬೇಕು.ಆ ದೀಪ ಯಾವುದು ಎಂದರೆ ಐಶ್ವರ್ಯ ದೀಪ.ಮಹಿಳೆಯರು ಶ್ರದ್ದಾ ಭಕ್ತಿಯಿಂದ ಲಕ್ಷ್ಮಿ ದೇವಿ ಅಮ್ಮನವರನ್ನು ಸ್ಮರಣೆ ಮಾಡಿ ಮಾಡಬೇಕಾಗುತ್ತದೆ. 16 ವಾರ ಕ್ರಮೇಣವಾಗಿ ಬಿಡದೆ ಮಾಡಿದರೆ ತಾನಾಗಿಯೇ ಲಕ್ಷ್ಮಿ ದೇವಿ ಒಲಿದು ಐಶ್ವರ್ಯವನ್ನು ಪ್ರಧಾನ ಮಾಡುತ್ತಳೆ.ಈ ಪೂಜೆಯನ್ನು ಶುಕ್ರವಾರದ ದಿನ ಮಾಡಬೇಕಾಗುತ್ತದೇ.
ಶುಕ್ರವಾರದ ದಿನ ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿ ಹಾಕಬೇಕು.ಈ ದೀಪರಾಧನೆಯನ್ನು ಲಕ್ಷ್ಮಿ ದೇವಿ ಅಮ್ಮನವರ ಫೋಟೋ ಮುಂದೆ ಮಾಡಬೇಕಾಗುತ್ತದೆ.ಲಕ್ಷ್ಮಿ ಫೋಟೋಗೆ ಅರಿಶಿಣ ಕುಂಕುಮ ಗಂಧ ಹಚ್ಚಬೇಕು ಮತ್ತು ಹೂವಿನಿಂದ ಅಲಂಕಾರ ಮಾಡಬೇಕು.
ಮೊದಲು ದೊಡ್ಡದ ಮಣ್ಣಿನ ದೀಪರಾಧನೆ ತೆಗೆದುಕೊಳ್ಳಿ ಮತ್ತು ಅರಿಶಿಣವನ್ನು ಹಚ್ಚಬೇಕು.ನಂತರ ದೀಪದ ತುಂಬಾ ಉಪ್ಪನ್ನು ಹಾಕಬೇಕು.ಮೊದಲು ರಂಗೋಲಿ ಹಾಕಿ ಅರಿಶಿಣ ಕುಂಕುಮ ಹಚ್ಚಬೇಕು.ನಂತರ ತಟ್ಟೆಯನ್ನು ಇಟ್ಟು ಉಪ್ಪು ತುಂಬಿದ ದೀಪವನ್ನು ಇಟ್ಟು ಅಮ್ಮನವರ ಮುಂದೆ ಈ ದೀಪವನ್ನು ಇಡಬೇಕು. ನಂತರ ಅದರ ಮೇಲೆ ಚಿಕ್ಕದಾದ ದೀಪಕ್ಕೆ ಅರಿಶಿಣ ಕುಂಕುಮ ಗಂಧ ಹಚ್ಚಬೇಕು. ಮೂರು ಬಗೆ ಬಗೆಯ ಬತ್ತಿಯನ್ನು ಮತ್ತು ತುಪ್ಪವನ್ನು ಹಾಕಬೇಕು. ನಂತರ ಅಮ್ಮನವರ ಮುಖದ ಮುಂದೆ ಕಾಣುವ ರೀತಿ ದೀಪವನ್ನು ಇಡಬೇಕು.ಈ ರೀತಿ ದೀಪವನ್ನು ಇಟ್ಟು ಹೂವುಗಳಿಂದ ಅಲಂಕಾರ ಮಾಡಿ ದೀಪಕ್ಕೆ ಕುಂಕುಮ ಅರ್ಚನೆಯನ್ನು ಮಾಡಬೇಕು.
ಅಮ್ಮನವರ ಲಕ್ಷ್ಮಿ ಅಷ್ಟೋತ್ತರವನ್ನು ಸ್ತ್ರೀ ಶೋಕ್ಲವನ್ನು ಅಥವಾ ಕನಕದಸರ ಶೋಕ್ಲವನ್ನು ಹೇಳಿಕೊಂಡು ಪೂಜೆಯನ್ನು ಮಾಡಬೇಕು.ನಂತರ ನಿಮಗೆ ಅನುಕೂಲ ಆಗಿರುವ ಸಿಹಿ ತಿನಿಸು ಮಾಡಿ ನೈವೈದ್ಯ ಮಾಡಿ ಹಾಗು ಹಣ್ಣು ಕಾಯಿ ನೈವೈದ್ಯ ಮಾಡಿಕೊಂಡು. ಆ ದಿನ ಮುತೈದೆಯರನ್ನು ಕರೆದು ಊಟವನ್ನು ಇಡಬೇಕು. ನಂತರ ಅವರಿಗೆ ತಾಂಬೂಲ ಕೊಟ್ಟು ಕಳುಹಿಸಬೇಕು.ಈ ರೀತಿ ಮಾಡಿದರೆ ಅಮ್ಮನವರ ಅನುಗ್ರಹ ಪ್ರಾಪ್ತ ಆಗುತ್ತದೆ.