ವಿವಾಹವಾದ ಹೆಣ್ಣುಮಕ್ಕಳು ತಾಳಿ, ಬಳೆ, ಸಿಂಧೂರ, ಕಾಲುಂಗುರು, ಮೂಗುಬೊಟ್ಟು ಧರಿಸೋದು ಪದ್ಧತಿ ಪ್ರಕಾರ ನಡೆದುಕೊಂಡು ಬಂದಿದೆ. ಇಂಥ ಮುತ್ತೈದೆ ಭಾಗ್ಯ ನೀಡುವ ಆಭರಣಗಳಲ್ಲಿ ಮಂಗಲಸೂತ್ರ ಕೂಡ ಒಂದು. ಈ ಮಂಗಲಸೂತ್ರದಲ್ಲಿ ಕರಿಮಣಿ ಯಾಕೆ ಇರಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮಂಗಲಸೂತ್ರದಲ್ಲಿ ಕರಿಮಣಿ ಯಾಕಿರಬೇಕು ಅಂದ್ರೆ, ವಿವಾಹಿತೆಯ ಮೇಲೆ ಯಾರ ಕೆಟ್ಟ ದೃಷ್ಟಿಯೂ ಬೀಳಬಾರದು ಎಂಬ ಕಾರಣಕ್ಕೆ, ಮಂಗಲಸೂತ್ರದಲ್ಲಿ ಕರಿಮಣಿ ಇಡಲಾಗಿದೆ. ಇನ್ನು ಇದನ್ನು ಕುತ್ತಿಗೆಗೇ ಧರಿಸಲು ಕಾರಣವೇನೆಂದರೆ, ಇದು ಎದೆಯ ತನಕ ಬಂದು, ವಿವಾಹಿತೆಯ ದೇಹದಲ್ಲಿರುವ ಉಷ್ಣತೆ ಹೀರಿಕೊಳ್ಳುತ್ತದೆ.
ವಿವಾಹಿತೆ ತಾಯಿಯಾದಾಗ ಆಕೆಯ ಎದೆಯಲ್ಲಿರುವ ಉಷ್ಣತೆ ಹೀರಿ, ಹಾಲು ಕೆಡದಂತೆ ನೋಡಿಕೊಳ್ಳಲು ಮಂಗಲಸೂತ್ರ ಸಹಕಾರಿಯಾಗಿದೆ. ಇದರಿಂದ ಆಕೆ ಮಗುವಿಗೆ ಹಾಲುಣಿಸಲು ಸಹಾಯವಾಗುತ್ತದೆ.
ಇದೆಲ್ಲವೂ ಆರೋಗ್ಯದ ದೃಷ್ಟಿಯಿಂದ ಉತ್ತಮವೆನ್ನಿಸಿದರೆ, ಮಾಂಗಲ್ಯ ಧರಿಸುವುದರಿಂದ ಇನ್ನೊಂದು ಲಾಭವಿದೆ. ಅದೇನಂದ್ರೆ ಹೆಣ್ಣಿನ ಕತ್ತಿನಲ್ಲಿ ಮಾಂಗಲ್ಯ ಇದ್ದರೆ ದುಷ್ಟರ, ಕಾಮಾಂಧರ ದೃಷ್ಟಿ ಆ ಹೆಣ್ಣಿನ ಮೇಲಿರುವುದಿಲ್ಲ. ಆಕೆ ಅದರಿಂದ ರಕ್ಷಣೆ ಪಡೆಯುತ್ತಾಳೆ.