ಕೆಲವೊಮ್ಮೆ ವ್ಯಕ್ತಿಯ ಜನ್ಮ ರಾಶಿಗಳಿಗೆ ಗುರು ದುರ್ಬಲ ಆಗಬಹುದು. ಕೆಲವೊಬ್ಬರಿಗೆ ಗುರು ಪ್ರಬಲವಾಗಿ ಕಂಡು ಬಂದು ಉನ್ನತಿಯನ್ನು ಕಾಣಬಹುದು. ಹಾಗಾಗಿ ದುರ್ಬಲಗೊಂಡಿರುವ ಗುರುವನ್ನು ಪ್ರಬಲ ಗೊಳಿಸಲು ಈ ಪರಿಹಾರವನ್ನು ಮಾಡಿಕೊಳ್ಳಬೇಕು.
ಇನ್ನು ನವಗ್ರಹಗಳಲ್ಲಿ ಅತ್ಯಂತ ದೊಡ್ಡದಾದ ಗ್ರಹ ಎಂದರೆ ಗುರು. ವರ್ಷಕ್ಕೊಮ್ಮೆ ತನ್ನ ಪತವನ್ನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಬದಲಿಸುತ್ತಾನೆ. ಈ ಸಂದರ್ಭಗಳಲ್ಲಿ 12 ರಾಶಿಗಳ ಮೇಲೆ ಗುರು ತನ್ನ ಶುಭ ಹಾಗು ಅಶುಭ ಫಲವನ್ನು ಬಿರುತ್ತಾನೆ.
ಇನ್ನು ಗುರುವನ್ನು ಪ್ರಬಲಗೊಳಿಸುವುದಕ್ಕೆ ಪರಿಹಾರ ಎಂದರೆ ಗುರುವಾರದ ದಿನ ಉಪವಾಸ ವ್ರತ ಮಾಡಬೇಕು. ಹಳದಿ ಬಣ್ಣ ಹಳದಿ ಹರಳು ಧರಿಸಿದರೆ ದುರ್ಬಲ ಗುರುವಿನಿಂದ ಆಗುವ ಸಮಸ್ಸೆಗಳನ್ನು ನೀವಾರಿಸಬಹುದು.ಧಾರ್ಮಿಕ ಸ್ಥಳಕ್ಕೆ ನಿರಂತರವಾಗಿ 8 ದಿನ ಅರಿಶಿನವನ್ನು ಧಾನ ಮಾಡಿದರೆ ಒಳ್ಳೆಯದು.
ಅಂದರಿಗೆ ಹಾಗು ವಿಕಲ ಚೇತನರಿಗೆ ನಿಮ್ಮಿಂದ ಆದಷ್ಟು ಸಹಾಯವನ್ನು ಮಾಡಿ. ಶಿವ ಲಿಂಗಕ್ಕೆ ಬೆಣ್ಣೆ ಅಥವಾ ತುಪ್ಪದ ಅಭಿಷೇಕವನ್ನು ಮಾಡುವುದರಿಂದಲೂ ಗುರುವಿನಿಂದ ಆಗುವ ಸಮಸ್ಸೆಗಳಿಂದ ಹೊರಬರಬಹುದು. ಹಳದಿ ಬಣ್ಣದ ಬಟ್ಟೆ ಧರಿಸುವುದು ಒಳ್ಳೆಯದು. ಸಮಾಜಕ್ಕೆ ಹಾಗು ನಿಶಾಕ್ತರಿಗೆ ನಿಮ್ಮಿಂದ ಆದ ನಿಸ್ವಾರ್ಥ ಸೇವೆಯನ್ನು ಮಾಡಿ.
ಹಸುಗಳನ್ನು ಅರೈಕೆ ಮಾಡಿ ಹಾಗು ಗುರುವಿಗೆ ಗೌರವ ನೀಡುವುದರ ಜೊತೆಗೆ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡಿ. ಗುರುವಾರದಂದು ಹಸುವಿಗೆ ಬೆಲ್ಲ ಹಾಗು ಕಡಲೆಬೆಳೆ ತಿನ್ನಿಸನ್ನು ತಿನ್ನಿಸಿ. ಗುರುವಾರದಂದು ಹಸುವಿಗೆ ಬೆಲ್ಲ ನೀಡುವುದರಿಂದ ಹೆಣ್ಣು ಮಕ್ಕಳಿಗೆ ಶೀಘ್ರದಲ್ಲಿ ಕಂಕಣ ಭಾಗ್ಯ ಒದಗಿಬರುವುದು. ಮಣ್ಣಿನ ಅಡಿಯಲ್ಲಿ ಬೆಳೆಯುವ ತರಕಾರಿ ಹಣ್ಣುಗಳನ್ನು ಧಾನ ಮಾಡಿ. ಕೇಸರಿ ಬಣ್ಣದ ತಿಲಕವನ್ನು ಹಚ್ಚಿಕೊಳ್ಳಿ. ಇದರಲ್ಲಿ ಅನುಕುಲ ಆಗುವುದನ್ನು ಅನುಸರಿಸಿ ಸಂತೋಷದ ಜೀವನವನ್ನು ನಿಮ್ಮದಾಗಿಸಿಕೊಳ್ಳಿ.