ಇಂಗನ್ನು ಉಪಯೋಗಿಸಿ ಈ ರೀತಿ ನೀವು ಮಾಡಿರುವ ಸಾಲಗಳ ಬಾದೆಯಿಂದ ಪರಗುವ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತೇವೆ. ಇಂದು ಅನೇಕ ಜನರು ಸಾಲ ಬಾಧೆಯಿಂದ ನರಳುತ್ತಿದ್ದಾರೆ.ಸಾಲ ಬಾದೆಗಳಿಂದ ಹೊರ ಬರಲು ಇಂಗಿನಿಂದ ಈ ರೀತಿ ಪ್ರಯೋಗ ಮಾಡಿದರೆ ಸಾಕು. ಈ ಪ್ರಯೋಗ ಮಾಡುವುದಕ್ಕೆ ಎರಡು ತೆಂಗಿನಕಾಯಿ ತೆಗೆದುಕೊಂಡು ಅದರ ಜೊತೆ ಕಲ್ಲಿನ ರೂಪದಲ್ಲಿ ಇರುವ ಇಂಗನ್ನು ತೆಗೆದುಕೊಂಡು ಹರಿಯುವ ನೀರಿನ ಬಳಿ ಹೊಗಿ ನಿಂತು ಒಂದು ತೆಂಗಿನಕಾಯಿಯನ್ನು ಎಡಗೈಯಲ್ಲಿ ಇಟ್ಟುಕೊಂಡು ಅದರ ಮೇಲೆ ಇಂಗನ್ನು ಇಟ್ಟು 19 ಆಂಟಿ ಕ್ಲಾಕ್ ವೈಸ್ ತಿರುಗಿಸಿ ಪಕ್ಕಕ್ಕೆ ಎಸೆಯಬೇಕು.
ಆಂಟಿ ಕ್ಲಾಕ್ ವೈಸ್ ತಿರುಗಿಸುವ ಮುನ್ನ ನೀವು ಸಾಲ ಮಾಡಿರುವ ಮೊತ್ತ ಮತ್ತು ಸಾಲವನ್ನು ಕೊಡುವ ವ್ಯಕ್ತಿಯ ಹೆಸರನ್ನು ನೆನಪಿಸಿಕೊಂಡು ಈ ಪ್ರಯೋಗವನ್ನು ಮಾಡಬೇಕು. ನಂತರ ಇನ್ನೊಂದು ಕಾಯಿಯನ್ನು ತೆಗೆದುಕೊಂಡು ಒಡೆದು ಅದರ ನೀರು ಮತ್ತು ಕಾಯಿಯನ್ನು ಬಿಸಾಕಿ ವಾಪಾಸ್ ಬರಬೇಕು. ಹೀಗೆ ಮಾಡುವುದರಿಂದ ನೀವು ಮಾಡಿರುವ ಎಲ್ಲಾ ಸಾಲಗಳು ಸಹ ಈಡೇರುತ್ತವೆ.
ಇನ್ನು ಮನೆಯಿಂದ ನೀವು ಹೊರಗೆ ಹೋಗುವಾಗ ಸ್ವಲ್ಪ ಇಂಗನ್ನು ತೆಗೆದುಕೊಂಡು ಎಡಗೈಯಲ್ಲಿ ಇಟ್ಟುಕೊಂಡು ಅದನ್ನು ಆಂಟಿ ಕ್ಲಾಕ್ ವೈಸ್ ಆಗಿ 8 ಬಾರಿ ತಿರುಗಿಸಿ ಹೊರ ಬರಬೇಕು. ಹೊರಗೆ ಹೋಗುವಾಗ ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕೆಲಸಗಳು ಸುಲಭವಾಗಿ ಆಗುತ್ತದೆ.ಇದೆ ರೀತಿ ನಿಮ್ಮ ಎಲ್ಲಾ ಆರ್ಥಿಕ ಸಮಸ್ಸೆ ಹಾಗು ಸಾಲ ಬಾದೆಗಳಿಂದ ಹೊರ ಬರಬಹುದು.
ಇನ್ನು ಮುಂಜಾನೆ ಎದ್ದು ಉತ್ತರ ದಿಕ್ಕಿಗೆ ಮುಖ ಮಾಡಿ 12 ಸೆಕೆಂಡ್ ಪ್ರಾರ್ಥನೆ ಮಾಡುವುದರಿಂದ ಸಾಲ ಎಲ್ಲಾ ತೀರಿ ಸಾಲಕ್ಕಿಂತ ಹೆಚ್ಚು ಆದಾಯ ಬರಲೆಂದು ಪ್ರಾರ್ಥಿಸಿ. ಇದೆ ರೀತಿ ಮಲಗುವ ಮುನ್ನ ಕೂಡ ಪ್ರಾಥನೆ ಮಾಡಿ.