ನಿದ್ರೆಗೆ ಸಂಬಂಧಿಸಿದ ಈ ನಿಯಮಗಳನ್ನು ಪಾಲಿಸಿದರೆ ಶತಾಯಸ್ಸು ಯೋಗ ಶ್ರೀಮಂತಿಕೆ ಪ್ರಾಪ್ತಿ!

ನಿದ್ದೆ ಮಾಡುವಾಗ ಈ ರೀತಿಯ ನಿಯಮಗಳನ್ನು ಪಾಲಿಸಿದರೆ ಅರೋಗ್ಯ ಐಶ್ವರ್ಯ ವೃದ್ಧಿಯಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ.ಬ್ರಾಹ್ಮೀ ಮುಹೂರ್ತ ಮತ್ತು ಸೂರ್ಯೋದಯಕ್ಕೆ ಮುನ್ನ ನಿದ್ದೆಯಿಂದ ಎದ್ದರೆ ಅರೋಗ್ಯ ಚೆನ್ನಾಗಿ ಇರುತ್ತದೆ ಮತ್ತು ಆಯಸ್ಸು ಹೆಚ್ಚಾಗುತ್ತದೆ ಎಂದು ದೇವಿ ಭಾಗವತ ದಲ್ಲಿ ತಿಳಿಸಿದೆ.

ಇನ್ನು ಪೂರ್ತಿಯಾಗಿ ಕತ್ತಲು ಇರುವ ಜಾಗದಲ್ಲಿ ನಿದ್ದೆ ಮಾಡಬಾರದು ಎಂದು ಪದ್ಮ ಪುರಾಣಗಲ್ಲಿ ತಿಳಿಸಿದ್ದಾರೆ. ಗಾಢ ನಿದ್ರೆಯಲ್ಲಿ ಇರುವವರನ್ನು ಅಕಸ್ಮಾತಗಿ ಎದ್ದೇಳಿಸಬಾರದು ಎಂದು ವಿಷ್ಣು ಸ್ತುತಿಯಲ್ಲಿ ಹೇಳಿದ್ದರೆ. ಅದರೆ ಕೆಲಸಕ್ಕೆ ಹೋಗುವವರನ್ನು ಮತ್ತು ವಿದ್ಯಾರ್ಥಿಗಳನ್ನು ಎದ್ದೇಳಿಸಿದರೆ ಯಾವುದೇ ದೋಷ ಉಂಟಾಗುವುದಿಲ್ಲಾ ಎಂದು ಚಾಣಕ್ಯರು ಹೇಳಿದ್ದಾರೆ.

ಮನುಷ್ಯರೆ ಇರದ ಜಾಗದಲ್ಲಿ ಒಂಟಿಯಾಗಿ ಮಲಗಬಾರದು ಎಂದು ಮನು ಶಾಸ್ತ್ರದಲ್ಲಿ ತಿಳಿಸಿದ್ದಾರೆ ಹಾಗು ವದ್ದೆ ಕಾಲಲ್ಲಿ ಮಲಗಬಾರದು ಎಂದು ಅಸ್ತಿ ಸ್ತುತಿಯಲ್ಲಿ ತಿಳಿಸಿದ್ದಾರೆ.

ಇನ್ನು ಮುರಿದ ಮಂಚ ಮತ್ತು ನಗ್ನವಾಗಿ ಮಲಗಬಾರದು ಎಂದು ಗೌತಮ ಧರ್ಮ ಗ್ರಂಥದಲ್ಲಿ ತಿಳಿಸಲಾಗಿದೆ. ಹಾಗೆಯೇ ಆಚಾರ್ಯ ಮಯೂಕ ಪ್ರಾಮಾಣಿಕ ಗ್ರಂಥದಲ್ಲಿ ಯಾವ ದಿಕ್ಕಿನಲ್ಲಿ ಮಲಗಿದರೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ತಿಳಿಸಿದೆ. ಇನ್ನು ಪೂರ್ವ ದಿಕ್ಕಿಗೆ ತಲೆ ಮಾಡಿ ಮಲಗಿದ್ದವರಿಗೆ ವಿದ್ಯೆ ಪ್ರಾಪ್ತಿ ಇರುತ್ತದೆ. ಪಶ್ಚಿಮ ದಿಕ್ಕಿಗೆ ಮಲಗಿದರೆ ಆಕಾರಣ ಚಿಂತೆ ಕಾಡುವ ಸಂಭವ ಇರುತ್ತದೆ. ಇನ್ನು ಉತ್ತರ ದಿಕ್ಕಿಗೆ ಮಲಗಿದವರಿಗೆ ಮೃತ್ಯು ಭಯ ಕಾಡುತ್ತದೆ.

Leave a Comment