ಜ್ಯೋತಿಷ್ಯದ ಒಟ್ಟು 27 ನಕ್ಷತ್ರಗಳಲ್ಲಿ ಕೃತ್ತಿಕಾ ನಕ್ಷತ್ರ ಮೂರನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಗ್ರಹ ಅಂದ್ರೆ ಸೂರ್ಯ. ಹಾಗಾಗಿ ಇಂದು ಸೂರ್ಯನಿಂದ ಆಳಲ್ಪಡುವ ನಕ್ಷತ್ರವಾದ ಕೃತಿಕಾ ನಕ್ಷತ್ರದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೇಷ, ವೃಷಭ ರಾಶಿಯವರಿಗೆ ಕೃತಿಕಾ ನಕ್ಷತ್ರವಿರುತ್ತದೆ. ಇದನ್ನು ಆಳುವ ಗ್ರಹ ಸೂರ್ಯನಾಗಿದ್ದು, ಆಳುವ ದೇವರು ಶಿವ. ಇವರದ್ದು ರಾಕ್ಷಸ ಗಣ. ಈ ರಾಶಿಯ ಪುರುಷರು ಮೂಡಿಗಳು. ತಮಗೆ ಇಷ್ಟವಾದಾಗ ಗೆಳೆತನ ಮಾಡುತ್ತಾರೆ ಮತ್ತು ಕಷ್ಟವಾದಾಗ ಅವರಿಂದ ದೂರ ಉಳಿಯುತ್ತಾರೆ. ತಮ್ಮ ಮನಸ್ಸಿಗೆ ಬಂದಾಗಷ್ಟೇ ಇತರರನ್ನು ನೋಡಿ ನಗುತ್ತಾರೆ. ಇವರು ತಮ್ಮ ಮನಸ್ಸಿನ ಮಾತನ್ನ ಕೇಳಿದರಷ್ಟೇ ಉದ್ಧಾರವಾಗುತ್ತಾರೆ ವಿನಃ, ಬೇರೆಯವರ ಮಾತು ಕೇಳಿ ಅಲ್ಲ. ಹಾಗಾಗಿ ಯಾವುದೇ ಉತ್ತಮ ಕೆಲಸ, ವ್ಯಾಪಾರ, ವ್ಯವಹಾರ ಮಾಡುವುದಿದ್ದರೆ, ಮೊದಲು ನಿಮ್ಮ ಮನಸ್ಸಿನ ಮಾತನ್ನು ಕೇಳಿ.
ಇನ್ನು ಈ ನಕ್ಷತ್ರದ ಮಹಿಳೆಯವರು ಧೈರ್ಯವಂತರೂ, ಸಧೃಡರಾಗಿರುತ್ತಾರೆ. ಇವರು ಅಷ್ಟು ಸುಲಭವಾಗಿ ಮೋಸ ಹೋಗುವುದಿಲ್ಲ. ಈ ನಕ್ಷತ್ರದ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೂ ಪಡಿಯದಿದ್ದರೂ, ತಮ್ಮ ಭವಿಷ್ಯವನ್ನೂ ಉತ್ತಮವಾಗಿ ನಿರೂಪಿಸಿಕೊಳ್ಳುವಲ್ಲಿ ಯಶಸ್ಸು ಪಡೆಯುತ್ತಾರೆ. ಶಿಕ್ಷಣ ಪಡೆದವರಾದರೆ, ಇಂಜಿನಿಯರ್ ಡಾಕ್ಟರ್ ಆಗಿ ಯಶಸ್ಸು ಪಡೆದರೆ, ಶಿಕ್ಷಣ ಪಡೆಯದಿದ್ದರೂ ಕೃಷಿ, ಉದ್ಯೋಗ, ಟೇಲರಿಂಗ್, ಕಸೂತಿ ಹೀಗೆ ಇಂಥ ಕೆಲಸಗಳನ್ನು ಮಾಡಿ ಯಶಸ್ಸು ಕಾಣುತ್ತಾರೆ.
ಇನ್ನು ಕೃತಿಕಾ ನಕ್ಷತ್ರದವರ ವೈವಾಹಿಕ ಜೀವನ ಅಷ್ಟು ಉತ್ತಮವಾಗಿರುವುದಿಲ್ಲ. ಈ ನಕ್ಷತ್ರದವರು ತಾಳ್ಮೆಯಿಂದ ಜೀವನ ನಡೆಸಿದರೆ ಉತ್ತಮ ಎನ್ನಬಹುದು. ಆದ್ರೆ ತಾಯಿಯನ್ನ ತುಂಬಾ ಪ್ರೀತಿಸುವ ನಕ್ಷತ್ರದವರು ಇವರು.
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಸ್ನೇಹಪರ ವ್ಯಕ್ತಿಯಾಗಿದ್ದರೂ, ಕೆಲವೊಮ್ಮೆ ಅವರಿಗೆ ಮನಸ್ಸು ಬಂದಾಗ ಆ ಸ್ನೇಹ ವಯಲದಿಂದ ಹೊರಬರುತ್ತಾರೆ. ಇವರಿಗೆ ಹಣ ಸಂಪಾದಿಸುವ ಅಸಾಧಾರಣ ಸಾಮರ್ಥ್ಯವಿದೆ. ಆದರೆ ಇವರು ಯಾರ ನಿಯಮಗಳ ಅಡಿಯಲ್ಲಿರಲೂ ಬಯಸುವುದಿಲ್ಲ. ಇದರಿಂದಾಗಿ ಇವರ ಪ್ರಗತಿಯು ಕುಂಠಿತಗೊಳ್ಳುತ್ತದೆ