ಒಂಟಿ ಸೀನು ಅಪಶಕುನ ನಾ..? ಯಾವ ಸೀನು ಒಳ್ಳೆಯದು ಯಾವುದು ಕೆಟ್ಟದ್ದು?

ಒಂಟಿ ಸೀನು ಅಪಶಕುನನ ಯಾವ ಸೀನು ಒಳ್ಳೇದು, ಯಾವ ಸೀನು ಕೆಟ್ಟದ್ದು. ಹಿರಿಯರು ಶಕುನ ಮತ್ತು ಅಪಶಕುನದ ಬಗ್ಗೆ ಹೇಳುತ್ತಿರುವುದನ್ನು ಕೇಳಿರಬಹುದು ಮತ್ತು ಸೀನುಗಳ ಬಗ್ಗೆ ಹೇಳಿರುವುದನ್ನು ಕೇಳಿರಬಹುದು. ಸೀನುಗಳು ಮಾನವನ ಸ್ವಾಭಾವಿಕ ಲಕ್ಷಣವಾಗಿದ್ದರೂ ಸಹ ಹಿರಿಯರು ಅದನ್ನ ಶುಭ ಮತ್ತು ಅಶುಭ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಅನೇಕ ರೀತಿಯ ನಂಬಿಕೆಗಳು ಇಂದಿಗೂ ಸಹ ಇರುವುದನ್ನು ಕಾಣಬಹುದಾಗಿದೆ. ಶಕುನ ಮತ್ತು ಅಪಶಕುನಗಳನ್ನು ಸಹ ಕಾಣಬಹುದಾಗಿದೆ. ನಾವು ಯಾವುದಾದರೂ ಕೆಲಸ ಕಾರ್ಯಕ್ಕೆ ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಮನೆಯಲ್ಲಿರುವವರು ಯಾರಾದರೂ ಸೀನಿದರೆ ಒಂಟಿ ಸೀನು ಸೀನಿದರೆ ಅದನ್ನು ಅಪಶಕುನ ಎಂದು ಹೇಳಲಾಗುತ್ತದೆ.

ಯಾರಾದರು ಹೊರಗಡೆ ಹೋಗುವಾಗ ಒಂಟಿ ಸೀನು ಕೇಳಿದರೆ ನೀವು ಹೋಗುವ ಕೆಲಸ ಕಾರ್ಯ ಸರಿಯಾಗಿ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ನಾವು ಮನೆಯಿಂದ ಹೊರಗಡೆ ಹೋಗುವ ಸಂದರ್ಭದಲ್ಲಿ ಒಂಟಿ ಸೀನು ಸೀನಿದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ. ಮನೆಯಿಂದ ಹೊರಗಡೆ ಹೋಗುವಾಗ ಅಥವಾ ಶುಭಕಾರ್ಯಗಳಿಗೆ ಹೋಗುವಾಗ ಒಂಟಿ  ಸೀನು ಎಂದು ಸಹ ಸಿನಬಾರದು ಎಂದು ಹೇಳುತ್ತಾರೆ. ಎಡಬಾಗದಲ್ಲಿ ಸಿನಿದರೆ ಇದರಿಂದ ಆ ಕೆಲಸ ಕಾರ್ಯದಲ್ಲಿ ತೊಂದರೆ ಉಂಟಾಗುತ್ತದೆ ಆ ಕೆಲಸವನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ಆಹಾರವನ್ನು ಸೇವನೆ ಮಾಡುತ್ತಿರುವಾಗ ನೀವೇನಾದರೂ ಸೀನಿದರೆ ಇದರಿಂದ ತುಂಬಾ ಅಶುಭ ಉಂಟಾಗುತ್ತದೆ. ರೋಗಿಗಳು ಔಷಧಿಯನ್ನು ಸ್ವೀಕರಿಸುವಾಗ ಯಾರಾದರೂ ಸೀನಿದರೆ ಅದನ್ನು ಶುಭ ಎಂದು ಹೇಳಲಾಗುತ್ತದೆ. ಇವರು ಶೀಘ್ರವಾಗಿ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ ಎಂಬುದರ ಸಂಕೇತವಾಗಿದೆ.

ಧಾರ್ಮಿಕ ಆಚರಣೆಗಳನ್ನು ಮಾಡುವ ಸಂದರ್ಭದಲ್ಲಿ ಯಾರಾದರೂ ಸೀನಿದರೆ   ಅದು ಸಮಸ್ಯೆಯ ಮುನ್ಸೂಚನೆಯಾಗಿದೆ. ಸೀನುವ ಶಬ್ದವನ್ನ ಈಶಾನ್ಯ ದಿಕ್ಕಿನಿಂದ ಏನಾದರೂ ಕೇಳಿ ಬಂದರೆ ಉತ್ತರ ದಿಕ್ಕಿನಿಂದ ಏನಾದರೂ ಕೇಳಿ ಬಂದರೆ ಶಕುನ ಶಾಸ್ತ್ರದ ಪ್ರಕಾರ ಅದನ್ನ ಶುಭ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತದೆ ಎಂಬುದರ ಸಂಕೇತವಾಗಿದೆ. ಉತ್ತರ ದಿಕ್ಕಿನಲ್ಲಿ ಏನಾದರೂ ಸೀನಿರುವ ಶಬ್ದ ಕೇಳಿ ಬಂದರೆ ಇದರಿಂದ ತುಂಬಾ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗಿದೆ. ಇದು ಕುಟುಂಬದಲ್ಲಿ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಎಡಭಾಗದಲ್ಲಿ ಸೀನಿದರೆ ತುಂಬಾ ಆರ್ಥಿಕವಾಗಿ ಲಾಭ ಪಡೆದುಕೊಳ್ಳಬಹುದು ಬಲ ಭಾಗದಲ್ಲಿ ಸಿನಿದರೆ ಇದರಿಂದ ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಬೇಕಾಗುತ್ತದೆ. ಹೆಚ್ಚು ಸೀನುವಿಗೆಯನ್ನು ಶುಭ ಎಂದು ಹೇಳಿದರೆ ಕಡಿಮೆ ಸೀನುವಿಗೆ  ಅಶುಭ ಎಂದು ಹೇಳಲಾಗುತ್ತದೆ.  ಶಕುನ ಶಾಸ್ತ್ರಗಳಲ್ಲಿ ಸೀನುವಿಕೆಗೆ ಹಲವಾರು ವಿವರಣೆಗಳನ್ನು ನೀಡಿರುವುದನ್ನು ಕಾಣಬಹುದಾಗಿದೆ.

https://youtu.be/cKxB5-ciwvU

Leave a Comment