ಕೆಲವರಿಗೆ ಅವರದೇ ಆದ ನಂಬಿಕೆಗಳು ಇರುತ್ತವೆ. ಕೆಲವರಿಗೆ ಗಂಡುಮಗ ಬೇಕು ಎಂದು ಇರುತ್ತದೆ. ಕೆಲವರಿಗೆ ಹೆಣ್ಣು ಮಗು ಬೇಕು ಎಂದು ಇರುತ್ತದೆ.ಆದರೆ ಕೆಲವರಿಗೆ ಇದೇ ಸಮಯದಲ್ಲಿ ಹೆಣ್ಣುಮಗು ಬೇಕು ಎಂದು ಇರುತ್ತದೆ.ಹಾಗಾಗಿ ಕೆಲವರು ಜ್ಯೋತಿಷ್ಯಶಾಸ್ತ್ರವನ್ನು ನಂಬುತ್ತಾರೆ. ಕೆಲವರು ಜ್ಯೋತಿಷ್ಯರುಗಳನ್ನು ಕೇಳುತ್ತಾರೆ. ಆದ್ದರಿಂದ ನಾವು ಇಲ್ಲಿ ಹೆಣ್ಣು ಮಗು ಯಾವ ದಿನ ಜನಿಸಿದರೆ ತುಂಬಾ ಶ್ರೇಷ್ಠ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮಕ್ಕಳು ಈ ವಾರ, ಈ ನಕ್ಷತ್ರ, ಈ ರಾಶಿ, ಈ ಸಮಯದಲ್ಲಿ ಜನಿಸಿದರೆ ತುಂಬಾ ಒಳ್ಳೆಯದು ಎಂದು ಕೆಲವರ ಕಲ್ಪನೆ ಇರುತ್ತದೆ.ಶಾಸ್ತ್ರಾಧಾರಿತವಾಗಿ ಕೊಡುವಂತಹ ಮಹೂರ್ತಗಳು ಶ್ರೇಷ್ಟವಾಗಿರುತ್ತವೆ.ಇವತ್ತಿನ ಕಾಲದಲ್ಲಿ ಬಹಳ ಬೇಗ ನಿರ್ಣಯ ಮಾಡುತ್ತಾರೆ. ಅಂತಹ ಸಮಯದಲ್ಲಿ ಆಪರೇಷನ್ ಮಾಡಿ ಮಗುವನ್ನು ಹೊರತೆಗೆಯುವ ನಿರ್ಧಾರ ಕೈಗೊಳ್ಳುತ್ತಾರೆ.ಶ್ರೇಷ್ಠತೆ ಅವರವರ ಭಾವಕ್ಕೆ ಸಂಬಂಧ ಪಟ್ಟಿರುತ್ತದೆ.ಒಂದು ವಾರದಲ್ಲಿ ಏಳು ದಿನಗಳು ಇರುತ್ತವೆ.
ಯಾವ ವಾರ ಗಂಡುಮಕ್ಕಳು ಹುಟ್ಟಿದರೆ ಶುಭ,ಯಾವ ವಾರ ಹೆಣ್ಣುಮಕ್ಕಳು ಹುಟ್ಟಿದರೆ ಶುಭ ಎನ್ನುವುದು ನಿರ್ಣಯ ಆಗಿದೆ.ಹುಟ್ಟಿದಾಗ ನಕ್ಷತ್ರಗಳು, ರಾಶಿಗಳು, ತಿಥಿಗಳು ಮುಖ್ಯವಾಗಿರುತ್ತವೆ.ಸಾಮಾನ್ಯವಾಗಿ ಹೇಳುವುದಾದರೆ ಗಂಡು ಮಕ್ಕಳು ಭಾನುವಾರ ಹುಟ್ಟಿದರೆ ಶುಭ. ಅದೇ ಸೋಮವಾರ ಹುಟ್ಟಿದರೆ ಶ್ರೇಷ್ಠ,ಬುಧವಾರ ಜ್ಞಾನಯೋಗ, ಶನಿವಾರ ಹುಟ್ಟಿದವರು ಮಹಾ ಪ್ರಳಯಾಂತಕರು ಆಗಿರುತ್ತಾರೆ.ಅವರ ಮನಸ್ಸು, ಜ್ಞಾನ ,ದೇಹ ಅವರ ಮಾತನ್ನೇ ಕೇಳುವುದಿಲ್ಲ.ಅವರು ಇಷ್ಟಾರ್ಥ ಕೆಲಸಗಳನ್ನೇ ಮಾಡುತ್ತಾ ಹೋಗುತ್ತಾರೆ.
ಅದರಲ್ಲೂ ಮಂಗಳವಾರ ಹುಟ್ಟಿದವರು ಮಹಾನ್ ಕಿಲಾಡಿಗಳಾಗಿರುತ್ತಾರೆ.ಯಾರ ಮಾತು,ಯಾರ ಜ್ಞಾನ, ಯಾರ ವ್ಯಕ್ತಿತ್ವಕ್ಕೂ ಬೆಲೆ ಕೊಡುವುದಿಲ್ಲ.ವಿಶೇಷವಾಗಿ ತಂದೆ ತಾಯಿಗೆ ವಿರೋಧವಾಗಿರುತ್ತಾರೆ. ಆದರೆ ಅವರಿಗೆ ಬಹಳ ಎಡವುಗಳು ಮತ್ತು ತೊಡವುಗಳು ಇರುತ್ತವೆ.ಯಾವ ರೀತಿಯಲ್ಲಿಯೂ ಸಹ ಅವರು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ.ಜೀವನ ಮಂದಗತಿಯಲ್ಲಿ ಸಾಗುತ್ತದೆ.ಅದೇ ರೀತಿ ರವಿವಾರ,ಬುಧವಾರ ಮತ್ತು ಸೋಮವಾರ ಹುಟ್ಟಿದವರು ಬಹಳ ಚತುರರಾಗಿರುತ್ತಾರೆ.ರವಿವಾರ ಹುಟ್ಟಿದವರಿಗೆ ಮುಖದಲ್ಲಿ ಬಹಳ ಕಳೆ ಇರುತ್ತದೆ.
ಸೋಮವಾರ ಹುಟ್ಟಿದವರು ದೈವಾನುಗ್ರಹ ಶಿವ ಭಕ್ತರಾಗಿರುತ್ತಾರೆ.ಅವರು ಗೌರವಯುತ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ.ಅದೇ ರೀತಿ ಬುಧವಾರ ಹುಟ್ಟಿದವರು ಮಹಾನ್ ಜ್ಞಾನಿಯಾಗಿರುತ್ತಾರೆ. ಸೌಮ್ಯ ಲಕ್ಷಣ ಉಳ್ಳವರಾಗಿರುತ್ತಾರೆ.ಅವರ ಜೀವನದ ಶೈಲಿ ಬದಲಾವಣೆಯ ಹಂತದಲ್ಲಿ ಇರುತ್ತದೆ.ಅವರು ವಿದ್ಯಾಭ್ಯಾಸ, ವ್ಯೆಜ್ಞಾನಿಕ ಹಾಗೂ ತಾಂತ್ರಿಕವಾಗಿ ಇಂತಹವುಗಳಲ್ಲಿ ಬಹಳ ಬೇಗ ಮುಂದುವರಿಯುತ್ತಾರೆ.
ಹೆಣ್ಣುಮಕ್ಕಳು ಶುಕ್ರವಾರ ಹುಟ್ಟಿದರೆ ಲಕ್ಷೀ ಮತ್ತು ಮಂಗಳವಾರ ಹುಟ್ಟಿದರೆ ದುರ್ಗಿ ಮನೆಗೆ ಬಂದಳು ಎಂಬ ವಾಡಿಕೆ ಇದೆ.ಮಂಗಳವಾರ ಹೆಣ್ಣುಮಕ್ಕಳು ಹುಟ್ಟಿದರೆ ಅವರ ಪೂರ್ವಜರೇ ಹುಟ್ಟುತ್ತಾರೆ ಎನ್ನುವುದು ನಿರ್ಣಯಾರ್ಥಕವಾಗಿದೆ.ತಾಯಿಯ ಸ್ವರೂಪ, ಅಜ್ಜಿಯ ಸ್ವರೂಪ ಆಗಿರಬಹುದು. ಅದೇ ಶುಕ್ರವಾರ ಹುಟ್ಟಿದ ಹೆಣ್ಣು ಮಕ್ಕಳು ಹುಟ್ಟಿ ಬೆಳೆದು ತಂದೆಯ ಮನೆಗೆ ದರಿದ್ರರಾದರೂ ಸಹ ಹೋದ ಮನೆಯಲ್ಲಿ ಅಧಿಪತ್ಯದ ಜೀವನ ನಡೆಸುತ್ತಾರೆ.ಬಹಳ ಲಕ್ಷಣವಾಗಿರುತ್ತಾರೆ.ಅದೇ ರೀತಿ ಭಾನುವಾರ ಹೆಣ್ಣುಮಕ್ಕಳು ಜನಿಸಿದರೆ ಮನೆಯಲ್ಲಿ ಅಷ್ಟ ಐಶ್ವರ್ಯದಿಂದ ಬದುಕುವ ಯೋಗ ಇರುತ್ತದೆ.ಇವರಲ್ಲಿ ಕಲೆ,ಸಂಸ್ಕೃತಿ, ಜ್ಞಾನ, ವಿಜ್ಞಾನ ಮತ್ತು ಅಭಿನಯಗಳು ಹೇರಳವಾಗಿ ಇರುತ್ತದೆ.ನಾಟ್ಯ, ಕಲಾತ್ಮಕವಾಗಿ ಎಲ್ಲಾ ಹವ್ಯಾಸಗಳು ಇರುತ್ತವೆ.