ಈ ಮುದ್ರೆಯನ್ನು ಸರಿಯಾಗಿ ಫಾಲೋ ಮಾಡಿದರೆ ನಿಮಗೆ ಇರುವ ಗ್ಯಾಸ್ಟ್ರಿಕ್ ಸಮಸ್ಸೆ ನಿವಾರಣೆ ಆಗುತ್ತದೆ. ಅದರೆ ಮುದ್ರೆ ಮಾಡುವುದಕ್ಕೆ ಸ್ವಲ್ಪ ಸಮಯವನ್ನು ಕೊಡಬೇಕು. ಅಪಾನ ಮುದ್ರೆಯು ನಮ್ಮ ದೇಹದಲ್ಲಿನ ಕಲ್ಮಷಗಳನ್ನು ಸುಲಭವಾಗಿ ಹೊರಹಾಕಲು ಪ್ರೋತ್ಸಾಹಿಸಿ, ಉಂಟಾಗಬಹುದಾದ ಹಲವಾರು ಕಾಯಿಲೆಗಳನ್ನು ತಡೆಗಟ್ಟುತ್ತದೆ. ಸುಲಭವಾಗಿ ಪದ್ಮಾಸನದಲ್ಲಿ ಕುಳಿತು ಕೈ ಬೆರಳುಗಳ ಮೂಲಕ ಮಾಡುವ ಈ ಬಂಗಿಗಳಿಂದ ಆಶ್ಚರ್ಯಕರವಾದ ಪರಿಣಾಮಗಳನ್ನು ಪಡೆಯಬಹುದಾಗಿದೆ. ಈ ಮುದ್ರೆಯನ್ನು ಮಾಡುವುದರಿಂದ ಹೊಟ್ಟೆಯ ಸಕಲ ಅಂಗಾಂಗಗಳು ಬಲಗೊಂಡು ಸಮಸ್ಯೆಯನ್ನು ದೂರಮಾಡುತ್ತವೆ.
ಈ ಮುದ್ರೆಯನ್ನು ಮಾಡುವ ಕ್ರಮ
ಈ ಮುದ್ರೆಯನ್ನು ಮಾಡಲು ಮೊದಲು ಪದ್ಮಾಸನ/ವಜ್ರಾಸನ/ಸಿದ್ಧಾಸನ/ವೀರಾಸನ ಇವುಗಳಲ್ಲಿ ಯಾವುದಾದರೂ ಒಂದು ಆಸನವನ್ನು ಹಾಕಿ ಕುಳಿತುಕೊಳ್ಳಬೇಕು. ನಂತರ ಮಧ್ಯದ ಬೆರಳು ಮತ್ತು ಉಂಗುರ ಬೆರಳನ್ನು ಹೆಬ್ಬೆರಳಿಗೆ ತಂದು ಮ್ರದುವಾಗಿ ಸ್ಪರ್ಶಿಸಬೇಕು. ಉಳಿದ ತೋರುಬೆರಳು ಮತ್ತು ಕಿರುಬೇರಳುಗಳು ಸಾಧ್ಯವಾದಷ್ಟು ನೇರವಾಗಿರಬೇಕು. ಈ ರೀತಿಯಾಗಿ ಎರಡೂ ಕೈಗಳಲ್ಲಿ ಮಾಡಿಕೊಂಡು ನೇರವಾಗಿ ಮತ್ತು ಸಮಾಧಾನದಿಂದ ಸುಮಾರು ಐದು ನಿಮಿಶದಿನದ 45 ನಿಮಿಷಗಳವರೆಗೆ ಕುಳಿತುಕೊಳ್ಳಬೇಕು. ಈ ರೀತಿ ಮಾಡುವುದರಿಂದ ಉತ್ತಮವಾದ ಪರಿಣಾಮಗಳನ್ನು ಕಂಡುಕೊಳ್ಳಲು ಸಹಾಯಕವಾಗಲಿವೆ.
ಈ ರೀತಿ ಬೆಳಗ್ಗೆ ಮಧ್ಯಾಹ್ನ ರಾತ್ರಿ ಊಟ ಆದ ನಂತರ ಹತ್ತು ನಿಮಿಷ ಮಾಡಿದರೆ ಸಾಕು ನಿಮ್ಮ ಹೊಟ್ಟೆಗೆ ಸಂಬಂಧ ಪಟ್ಟ ಸಮಸ್ಸೆ ಯಾವುದು ಕೂಡ ಬರುವುದಿಲ್ಲ. ಹಾಗು ಜೀರ್ಣ ಕ್ರಿಯೆ ಕೂಡ ಚೆನ್ನಾಗಿ ಆಗುತ್ತದೆ.