ಸಾಮುದ್ರಿಕ ಶಾಸ್ತ್ರದ ಮೂಲಕ ಮನುಷ್ಯನ ಶರೀರದ ಅಂಗಗಳ ಆಧಾರದ ಮೇಲೆ ಅವರ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ತಿಳಿಯಬಹುದು. ಭಾರತೀಯ ಸಂಪ್ರದಾಯದಲ್ಲಿ ಶುಭ, ಅಶುಭ, ಶಕುನ, ಅಪಶಕುನಗಳಿಗೆ ಮಹತ್ವ ನೀಡಲಾಗುತ್ತದೆ. ನಮ್ಮ ಜ್ಯೋತಿಷ್ಯ ಶಾಸ್ತ್ರವು ಸಮೃದ್ಧವಾಗಿದೆ. ಪ್ರತಿಯೊಬ್ಬ ಮನುಷ್ಯನು ಬೇರೆ ಬೇರೆ ಸ್ವಭಾವ, ಗುಣ, ವಿಚಾರ ಶೈಲಿ, ಬಣ್ಣವನ್ನು ಹೊಂದಿರುತ್ತಾನೆ. ನಮ್ಮ ಶರೀರದ ಕೆಲವು ಅಂಗಗಳು ಇರುವ ರೀತಿ ನಮಗೆ ಶುಭ ಸಂಕೇತವಾಗಿರುತ್ತದೆ, ಕೆಲವು ಅಂಗಗಳು ಇರುವ ರೀತಿ ಅಶುಭವಾಗಿರುತ್ತದೆ.
ದುಂಡ ಮುಖವುಳ್ಳ ಜನರು ಬಹಳ ಭಾಗ್ಯಶಾಲಿಗಳಾಗಿರುತ್ತಾರೆ, ಇವರಿಗೆ ಒಳ್ಳೆಯ ಜಾಬ್, ಒಳ್ಳೆಯ ಸಂಗಾತಿ ಸಿಗುತ್ತಾರೆ. ಮಧ್ಯಮ ಎತ್ತರದಲ್ಲಿ ಇರುವವರು ಒಳ್ಳೆಯ ಜೀವನ ಹೊಂದುತ್ತಾರೆ. ಉದ್ದವಾದ ಮೂಗು ಮತ್ತು ಅದರ ಮೇಲೆ ಚುಕ್ಕೆ ಇದ್ದರೆ ಒಳ್ಳೆಯದಾಗುತ್ತದೆ. ಕಿವಿಗಳು ದೊಡ್ಡದಾಗಿದ್ದರೆ ಅವರು ಭಾಗ್ಯಶಾಲಿಗಳಾಗಿರುತ್ತಾರೆ. ಕೂದಲು ಇಲ್ಲದ ಜನರು ಭಾಗ್ಯಶಾಲಿಗಳಾಗಿರುತ್ತಾರೆ. ನಮ್ಮ ಮುಖದ, ಶರೀರದ ಮೇಲೆ ಮಚ್ಚೆ ಇರುವುದರ ಮೇಲೂ ಅವರ ಬಗ್ಗೆ ಭವಿಷ್ಯ ಹೇಳಬಹುದು.
ಹಣೆಯ ಮಧ್ಯೆ ಮಚ್ಚೆ ಇದ್ದರೆ ಅವರು ಅದೃಷ್ಟವಂತರು. ಕೈಗಳು, ಗಲ್ಲದ, ಬಲಭಾಗದ ಕಣ್ಣಿನ ಹತ್ತಿರ ಮಚ್ಚೆ ಇದ್ದರೆ ಅವು ವಿಶೇಷವಾಗಿರುತ್ತವೆ. ಸಾಮುದ್ರಿಕ ಶಾಸ್ತ್ರದ ಪ್ರಕಾರ ಹಲ್ಲುಗಳಲ್ಲಿ ಗ್ಯಾಪ್ ಇದ್ದರೆ ಅವರು ಸೌಭಾಗ್ಯಶಾಲಿಗಳಾಗಿದ್ದು, ಆರ್ಥಿಕವಾಗಿ ಅವರು ಸಬಲರಾಗಿರುತ್ತಾರೆ. ಹಲ್ಲುಗಳು ಸ್ವಲ್ಪ ಮುಂದೆ ಇದ್ದರೆ ಹಠವಾದಿಗಳು, ಮಾತನಾಡುವ ವ್ಯಕ್ತಿತ್ವ ಹೊಂದಿದ್ದು, ಅದೃಷ್ಟವಂತರು ಆಗಿರುತ್ತಾರೆ.
ನಿಮ್ಮ ಎದೆಯ ಮೇಲೆ ಕಪ್ಪು-ಕಂದು ಬಣ್ಣದ ಮಚ್ಚೆ ಇದ್ದರೆ, ನಿಮ್ಮನ್ನು ಅದೃಷ್ಟವಂತರೆಂದು ಪರಿಗಣಿಸಬಹುದು. ನಿಮ್ಮ ಎದೆಯ ಮೇಲಿರುವ ಮಚ್ಚೆಯು ನೀವು ಸಾಕಷ್ಟು ಮಹತ್ವಾಕಾಂಕ್ಷೆಯುಳ್ಳವರು ಮತ್ತು ಜೀವನದಲ್ಲಿ ಹೆಚ್ಚಿನ ವಿಷಯಗಳತ್ತ ನಿಮ್ಮ ಗಮನವಿದೆ ಎಂದು ಸೂಚಿಸಬಹುದು. ನೀವು ನಿಮ್ಮ ಜೀವನವನ್ನು ಸರಿಯಾಗಿ ಯೋಜಿಸಿದರೆ, ನೀವು ತುಂಬಾ ಯಶಸ್ವಿಯಾಗುತ್ತೀರಿ
ವ್ಯಕ್ತಿಯ ಮೂಗು ಮತ್ತು ಎಡಗಣ್ಣಿನ ಮೇಲೆ ಮಚ್ಚೆ ಇದ್ದರೆ ಆ ವ್ಯಕ್ತಿ ಸ್ವಾಭಿಮಾನಿ ಎಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ. ಅಂತಹವರು ಪ್ರಪಂಚದ ಮುಂದೆ ತಮ್ಮನ್ನು ತಾವು ತೋರಿಸಿಕೊಳ್ಳುವವರು. ವಾಸ್ತವವಾಗಿ, ತಮಗಿಂತ ಹೆಚ್ಚಿನದನ್ನು ಯಾರೂ ಹೊಂದಲು ಸಾಧ್ಯವಿಲ್ಲ ಎಂದು ಅವರು ತಮ್ಮಲ್ಲಿಯೇ ಯೋಚಿಸುತ್ತಾರೆ. ಅಂದರೆ ಅವರು ಎಲ್ಲದರಲ್ಲೂ ಮೂಗು ತೂರಿಸಲು ಪ್ರಯತ್ನಿಸುತ್ತಾರೆ.
ಅಂಗೈ, ಅಂಗಾಲು ಗುಲಾಬಿ ಬಣ್ಣದಲ್ಲಿ ಇದ್ದರೆ ಜೊತೆಗೆ ಅಂಗೈ ರೇಖೆಗಳು ಸ್ಪಷ್ಟವಾಗಿದ್ದರೆ ಭಾಗ್ಯಶಾಲಿಗಳಾಗಿರುತ್ತಾರೆ. ಉದ್ದ ಬೆರಳುಗಳಿದ್ದರೆ ಒಳ್ಳೆಯದು. ಅಂಗಾಲಿನ ಮೇಲೆ ಸೂರ್ಯ, ಚಂದ್ರ, ನಕ್ಷತ್ರ, ಸಿಂಹ, ಕಮಲ, ಶಂಖ ಚಕ್ರಗಳು, ಧ್ವಜದ ರೀತಿ ಆಕೃತಿ ಇದ್ದರೆ ಅವರು ಅದೃಷ್ಟವಂತರು. ಸ್ತ್ರೀ ಅಥವಾ ಪುರುಷನ ನಾಭಿ ಆಳವಾಗಿದ್ದರೆ ಅವರು ಅದೃಷ್ಟವಂತರಾಗಿರುತ್ತಾರೆ. ಕಣ್ಣುಗಳ ಮೂಲಕವೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ಕಪ್ಪು ಬಣ್ಣದ ಕಣ್ಣಿನವರು ಬುದ್ಧಿವಂತರು, ಧನವಂತರು ಆಗಿರುತ್ತಾರೆ. ಹುಬ್ಬುಗಳು ಕೂಡಿದ್ದರೆ ಒಳ್ಳೆಯದಾಗುತ್ತದೆ. ಈ ರೀತಿ ಶುಭ, ಅಶುಭ ಸೂಚನೆಗಳನ್ನು ತಿಳಿಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಶುಭ, ಅಶುಭ ವಿಷಯಗಳನ್ನು ತಿಳಿಯಿರಿ.
ಸ್ತ್ರೀಯರ ಹಲ್ಲುಗಳ ನಡುವೆ ಅಂತರವಿದ್ದರೆ ಅತ್ಯಂತ ಶುಭ ಎಂದು ತಿಳಿಯಲಾಗಿದೆ. ಇವರು ತುಂಬಾ ಬುದ್ದಿವಂತರು ಹಾಗು ತಿಳುವಳಿಕೆವುಳ್ಳವರು ಆಗಿರುತ್ತಾರೆ.ಇಂತಹ ಮಹಿಳೆಯರು ದೊಡ್ಡದಾದ ಯಶಸ್ಸನ್ನು ಗಳಿಸುತ್ತಾರೆ.