ಪುಂಡಿ ಪಲ್ಯ ಸೇವನೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳು ಸಿಗುತ್ತದೆ.ಹೆಚ್ಚಾಗಿ ಇದನ್ನು ಉತ್ತರ ಕರ್ನಾಟಕದಲ್ಲಿ ಬೆಳೆಯುತ್ತಾರೆ.ಇದನ್ನು ರೊಟ್ಟಿಯ ಜೊತೆ ತಿನ್ನುವುದಕ್ಕೆ ಒಳ್ಳೆಯ ಕಾಂಬಿನೇಶನ್ ಆಗಿದೆ.ಈ ಪುಂಡಿ ಪಲ್ಯದಲ್ಲಿ ಸಾಕಷ್ಟು ನಾರಿನಾಂಶ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಇದು ತುಂಬಾನೇ ಒಳ್ಳೆಯದು.
ಇದನ್ನು ಸೇವನೆ ಮಾಡುವುದರಿಂದ ನಿಮಗೆ ಹೊಟ್ಟೆ ಉರಿ ನಿವಾರಣೆ ಆಗುತ್ತದೆ ಮತ್ತು ಆಹಾರದಲ್ಲಿ ರುಚಿ ಹೆಚ್ಚಾಗುತ್ತದೆ.ಇದನ್ನು ಸೇವನೆ ಮಾಡುವುದರಿಂದ ಮಲಬದ್ಧತೆ ಮತ್ತು ಮೂಲವ್ಯಾದಿ ಸಮಸ್ಸೆ ಕೂಡ ಕಡಿಮೆ ಆಗುತ್ತದೆ.
ಈ ಪುಂಡಿ ಎಲೆಯನ್ನು ತೆಗೆದುಕೊಂಡು ಶುದ್ಧವಾದ ನೀರಿನಲ್ಲಿ ತೊಳೆಯಿರಿ ಹಾಗೂ ಸಣ್ಣದಾಗಿ ಕಟ್ ಮಾಡಿಕೊಳ್ಳಿ.ನಂತರ ಒಂದು ಪಾತ್ರೆಯಲ್ಲಿ ಇದನ್ನು ಹಾಕಿ ಹಾಗೂ ಎರಡು ಗ್ಲಾಸ್ ನೀರು ಹಾಕಿ 10 ರಿಂದ 15 ನಿಮಿಷ ಕುದಿಸಿ.ನಂತರ ಬಸಿಯಬೇಕು.ಈ ರೀತಿ ಮಾಡಿದರೆ ಹುಳಿ ಅಂಶ ಕಡಿಮೆ ಆಗುತ್ತದೆ.ನಂತರ ಮತ್ತೆ ಇದನ್ನು ಪಾತ್ರೆಗೆ ಹಾಕಿ ಮತ್ತು ಒಂದು ಗ್ಲಾಸ್ ನೀರು ಹಾಕಿ ಕುದಿಸಬೇಕು.
ಬೆಂದ ಮೇಲೆ ಸ್ವಲ್ಪ ರವ ಹಾಕಿ ಕೈಯಡಬೇಕು ಮತ್ತು ಮೆಂತೆ ಪುಡಿ, ಹಸಿ ಶೇಂಗಾ ಹಾಕಬೇಕು ನಂತರ ರುಚಿಗೆ ತಕ್ಕಷ್ಟು ಅರಿಶಿಣ ಮಸಾಲೆ ಪುಡಿ, ಉಪ್ಪು, ಹಸಿ ಖಾರ, ಬೆಳ್ಳುಳ್ಳಿ ಹಾಗೂ ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 10 ರಿಂದ 15 ನಿಮಿಷದವರೆಗೆ ಕುದಿಸಿದರೆ ರುಚಿಕರವಾದ ಪಲ್ಯ ರೊಟ್ಟಿ ಜೊತೆ ಸೇವನೆ ಮಾಡಬಹುದು.