ಮಾಂಗಲ್ಯದಲ್ಲಿ ಇಷ್ಟು ಕರಿಮಣಿಗಳನ್ನು ಹಾಕಬೇಕು!

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕೆ ಅಲ್ಲ. ಅದಕ್ಕೆ ಸೂಕ್ತ ಕಾರಣ ಇದೆ ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೋ ಅದೇ ರೀತಿ ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೆ ಪ್ರಾಮುಖ್ಯತೆ ಕೊಡಲಾಗುತ್ತದೆ. ಮದುವೆಯ ಸಂಕೇತವಾಗಿ ಸ್ತ್ರೀಯರಿಗೆ ಕರಿಮಣಿ ಕುಂಕುಮ ಕಾಲುಂಗುರ ಗಾಜಿನ ಬಳೆ ಹೂವು ನೀಡಲಾಗುತ್ತದೆ ಅದು ಗೃಹಿಣಿಗೆ ಸೌಭಾಗ್ಯ ನೀಡುತ್ತದೆ. ಮಂಗಳ ಸೂತ್ರ ತಾಳಿ ಕರಿಮಣಿ ಕಂಟಿ ಇತ್ಯಾದಿ ವಿವಿಧ ಹೆಸರುಗಳು ಇರುವ ಅತೀ ಪಾವಿತ್ರ್ಯದ ಅತ್ಯಂತ ಭಾವನಾತ್ಮಕವಾದ ಆಭರಣ ಇದೆಯಲ್ಲಾ ಅದರಲ್ಲಿ ಮಾಂಗಲ್ಯ ಯಾವುದು

ಮಾಂಗಲ್ಯ ಸಂಪ್ರದಾಯದ ಧಾರಣೆ ಹೇಗೆ ಬಂತು ಬಂಗಾರದ ಒಡವೆಯಲ್ಲಿ ಕರಿಮಣಿಗಳು ಏಕೆ ಕರಿಮಣಿ ದಾರದಲ್ಲಿ ಹವಳಗಳು ಏಕೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ. ಆದಿ ಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಳ ಸೂತ್ರವನ್ನು ಕಟ್ಟಿದನು. ಲಲಿತ ಸಹಸ್ರ ನಾಮ ಸೌಂದರ್ಯ ಲಹರಿಗಳು ಚಾಲ್ತಿಯಲ್ಲಿ ಇರುವ ಸ್ತೋತ್ರಗಳು ಆಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿದೆ ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳಬಾರದು ಎಂದೇ ಮಂಗಳ ಸೂತ್ರ ದಲ್ಲಿ ಕಪ್ಪು ಮಣಿಗಳು ಇರುವುದು ಎಂಬ ನಂಬಿಕೆ ಇದೆ.ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿ ಕ್ಷೇತ್ರವನ್ನು ಹೀರಿಕೊಂಡು

ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ. ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು ಗಂಡಿನ ಕುಟುಂಬ ಎಂಬ ಸೂತ್ರ ದೊಂದಿಗೆ ನವ ವಿವಾಹಿತ ಹೆಣ್ಣು ಅಷ್ಟೆ ಸುಲಲಿತವಾಗಿ ಹೊಂದಿಕೊಳ್ಳಬೇಕು ಎಂಬ ಆಶಯಕ್ಕೆ ಹೋಲಿಸುತ್ತಾರೆ.ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನು ಎಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣವನ್ನು ಹೀರಿಕೊಳ್ಳುತ್ತದೆ. ಇದರ ಅತೀ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣವನ್ನು ಹೀರಿಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣಲು ಅನುಕೂಲವಾದ ಸಮ ಉಷ್ಣತೆಯನ್ನು ಇರಿಸಲು ಸಹಾಯ ಮಾಡುತ್ತದ

ಮಂಗಳ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ ಮತ ಪಂಕ್ತ ಗಳಿಗೆ ಅನುಸಾರವಾಗಿ ಅಲ್ಪ ಸ್ವಲ್ಪ ವ್ಯತ್ಯಾಸಗಳು ಕಂಡು ಬರುತ್ತವೆ. ದಕ್ಷಿಣ ಭಾರತದಲ್ಲಿ ಹಿಂದೂಗಳು ಅಷ್ಟೆ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ತ ಸ್ತ್ರೀಯರು ವಿವಾಹವಾದ ನಂತರ ತಾಳಿ ಕರಿಮಣಿ ಸರ ಧರಿಸುತ್ತಾರೆ ಗೃಹಿಣಿಯರು ಇಂದು ಸೌಭಾಗ್ಯದ ಇವುಗಳನ್ನು ಧರಿಸುವಿದರಲ್ಲಿ ಆಸಕ್ತಿ ವಹಿಸುವುದಿಲ್ಲ ಆದರೆ ಅವುಗಳಿಗೆ ಇರುವ ಮಹತ್ವವನ್ನು ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಯುತವಾದ ಮಂಗಳಕರ ಆಭರಣಗಳನ್ನು

ಧರಿಸುವುದರಿಂದ ನಾರಿಯು ಪೂಜ್ಯನೀಯ ಆಗುತ್ತಾಳೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ರಾಶಿಯವರು ಎಷ್ಟು ಕರಿಮಣಿ ಗಳನ್ನ ಹಾಕಬೇಕು ಎಂದು ಉಲ್ಲೇಖಿಸಲಾಗಿದೆ. ಮೇಷ ರಾಶಿಯವರು 21 ವೃಷಭ ರಾಶಿ 40 ಮಿಥುನ ರಾಶಿ 34 ಕಟಕ ರಾಶಿಯವರು 20 ಸಿಂಹ ರಾಶಿಯವರು 18 ಕನ್ಯಾ ರಾಶಿಯವರು 24 ತುಲಾ ರಾಶಿಯವರು 40 ವೃಶ್ಚಿಕ ರಾಶಿಯವರು 21 ಧನಸ್ಸು ರಾಶಿ 32 ಮಕರ 38 ಕುಂಭ ರಾಶಿ 38 ಹಾಗೂ ಮೀನ ರಾಶಿ 32 ಕರಿಮಣಿ ಉಳ್ಳ ಸರವನ್ನ ಹಾಕಿಕೊಳ್ಳುವುದು ಉತ್ತಮ. 

Leave a Comment